• Home
  • About Us
  • ಕರ್ನಾಟಕ
Thursday, January 8, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ಆದರೆ…

Any Mind by Any Mind
February 14, 2023
in ಅಂಕಣ, ವಿಶೇಷ
0
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ಆದರೆ…
Share on WhatsAppShare on FacebookShare on Telegram

ADVERTISEMENT

ಮೊನ್ನೆ ಜಾತ್ರೆಯಲ್ಲಿ ಅಚಾನಕ್ಕಾಗಿ ಸಿಕ್ಕಳು. ಕನಸಲ್ಲಿ ಕಂಡಂಗಾಯಿತು. ಅವಳ ಎಲ್ಲಾ ನೆನಪುಗಳು ನನಗಂತೂ ಪೂರ್ಣ ಮರೆತೇ ಹೋಗಿತ್ತು. ಹೆಸರು ಸಹಿತ. ಆದರೆ ಅವಳೇ ಖುದ್ದು ಹಿಂದಿನದನ್ನೆಲ್ಲಾ ಹೇಳುತ್ತ, ಹೇಳುತ್ತಾ ಹೋದಂತೆ ಮರೆತು ಹೋದ ಒಂದೊಂದೇ ದ್ಯಾಸಗಳು ಅವಳೆದೆಯ ದಾಸವಾಳಗಳಂತೆ ಅರಳಿ ನಿಂತವು. ಎಲ್ಲವನ್ನು ಎಳೆ ಎಳೆಯಾಗಿ ಹೇಳುತ್ತಿದ್ದಂತೆ ನೆನಪಿನ ಚಿತ್ರಗಳು ನನ್ನ ಕಣ್ಣಗೊಂಬಿಯಲ್ಲಿ ಹಾಳತವಾಗಿ ಸುಳಿಯ ತೊಡಗಿದವು. ರೇಷ್ಮೆ ಸೀರೆಯ ಸೆರಗು ಪದೆಪದೇ ಜಾರುತ್ತಿರುವುದನ್ನು ತಿರು ತಿರುಗಿ ಸರಿಪಡಿಸಿಕೊಳ್ಳುತ್ತಿದ್ದಳು. ಜಾರಿ ಬೀಳುವ ಅವಳ ಸೆರಗ ಮರೆಯಲ್ಲಿ ನನಗರಿವಿಲ್ಲದೇ ಸೆರೆಯಾಗಿ ಹೋದೆ. ಏನೇನೂ ಫರಕು ಇಲ್ಲದ ದಶಕಗಳ ಹಿಂದಿನ ಅದೇ ಪರಿಮಳದ ಅವಳ ಮೈಗಂಧ. ಅಂತಹದೇ ಮಧುರ ಮಾತುಗಳ ಮಧುವನದಲಿ ನನ್ನ ತನುಮನವೆಲ್ಲ ಕರಗಿ ಹೋಯಿತು. ಅವಳೊಬ್ಬಳು ಮಾತ್ರ ನನ್ನನ್ನು ಇವತ್ತಿಗೂ ಶ್ರೀಶೈಲ ಅಂತ ಕರೆಯೋದು. ಅದರಲ್ಲೂ ಅವಳ ದೇಸೀಯ ದನಿಯಲಿ ”ಸಿರಸೈಲ” ಅಂತ ಕರೆಯುತ್ತಾಳೆ. ಹಾಗೆ ಕರೆಯುತ್ತಲೇ ಶತಮಾನದಂತಹ ನೆನಪಿನ ಬುತ್ತಿ ನಿಧಾನದಲಿ ಬಿಚ್ಚ ತೊಡಗಿದಳು.

ಸಿರಸೈಲ ನೀ ಬಾರಾವೀ ಕಿಲಾಸ್ ಓದ್ತಿದ್ದಿ. ನಾ ಅದೇ ಆಗ ಮದವಿ ಮಾಡ್ಕೊಂಡು ಬಂದಿದ್ದೆ. ನಾ, ನಿನಕಿಂತ ದೀಡು ವರ್ಷ ದೊಡ್ಡಾಕಿ. ನಾ ತುಸು ಕಪ್ಪಿದ್ದೆ. ನೀ ಕಡ್ಲಿಬ್ಯಾಳಿ ಬಣ್ಣದ್ಹಂಗ ಭಾಳ ಛೆಂದ್ಇದ್ದಿ. ನನಕಿಂತ ಜರಾ ಬೆಳ್ಳಗಿದ್ದಿ. ನಿನ್ನ ಕಾಲೇಜ್ ಸೂಟಿ ಇದ್ದಾಗ ಒಂದ್ಸಲ ಬಂಬೈ ಕಡೀಂದ ಒಬ್ಬ ಇಂಗ್ರೇಜಿ ಹುಡುಗ ಬಂದಿದ್ದ. ಅಂವ ಪಸಂದಾಗಿ ಇಂಗ್ಲಿಷ್ ಮಾತಾಡತಿದ್ದ. ನನಗ ಅವ್ನ ಹೆಸರು ನೆಪ್ಪಿಲ್ಲ. ನಮ್ಮೂರ ಹೆಣ್ಮಗಳೇ ಅವ್ನ ಕರ್ಕೊಂಬದ್ದಿದ್ಳು. ಮದ್ಲೇ ಸುಂದರ ಹರೇದ ಹುಡುಗ. ಎಂಥವರಿಗೂ ಅವ್ನ ಮ್ಯಾಲ ಮನಸಾಗೊವಷ್ಟು ಅಂವ ಚೆಲುವ. ನಮಗ್ಯಾರಿಗೂ ಇಂಗ್ಲೀಷ್, ಹಿಂದಿ ಬರ್ತಿರಲಿಲ್ಲ. ನಮ್ಮೂರಾಗ ನೀನೊಬ್ನೇ ಅವ್ನ ಸಂಗಾಟ ಹಿಂದಿ, ಇಂಗ್ಲೀಷ್ ದಾಗ ಮಾತಾಡ್ತಿದ್ದಿ. ಅದು ನನಗ ಪಕ್ಕಾ ನೆಪ್ಪದ. ನೀವಿಬ್ರೂ ಮಾತಾಡೊದನ್ನು ಕೇಳುವಲ್ಲಿ ನನಗ ಕಂಡಾಪಟಿ ಖುಷಿಯ ಸಾಕ್ಷಾತ್ಕಾರ  ಆಗ್ತಿತ್ತು. ಹೀಗೆ ಮುಂಬೈನ ತುಂಟು ಹುಡುಗನ ಕುರಿತು ಮತ್ತೆ ಮತ್ತೆ ಪಂಟು ಹೊಡೆದಂತೆ ಆಕೆ ಹೇಳುತ್ತಿದ್ದರೆ ನನಗೇಕೋ ಜಲಸಿ. ಅದನ್ನಾಕೆ ಥಟ್ಟಂತ ಗ್ರಹಿಸಿದಳು. ಅವಳು ಬಹಳೇ ಸಂವೇದನಾಶೀಲೆ. ಕೂಡಲೇ ಕೊಲ್ಲಾಪುರದ ತನ್ನ ಗಂಡನ ಕುರಿತು ಹೇಳಲು ಟಾಪಿಕ್ ಚೇಂಜ್ ಮಾಡಿಬಿಟ್ಟಳು.

ಅವೆಲ್ಲಾ ಥೀಸ್, ಚಾಳೀಸ್ ವರ್ಷಗಳ ಹಿಂದಿನ ಮಾತುಗಳು ಅಂತ ಮಾತಿಗೊಮ್ಮೆ ನೆನಪಿಸುತ್ತಿದ್ದಳು. ಆಕೆ ಹದಿವಯದಲಿ ನನ್ನೊಂದಿಗೆ ಕಳೆದ ಕೆಲವು ಚೆಂದದ ಚಣಗಳನ್ನು ಅಗ್ದೀ ರಸವತ್ತಾಗಿ ಹೇಳ ತೊಡಗಿದಳು. ಅದರಲ್ಲೂ ನಾವು ಬೆಂಚಿಯೊಳಗಿನ ಕಿಲ್ಲೇದ ಮ್ಯಾಲ ನಿಂತು “ಭೋರ್ಗರೆದು ಹರಿಯುತ್ತಿದ್ದ ಹಿರೇಹಳ್ಳವನ್ನು ತಾಸುಗಟ್ಟಲೇ ನೋಡುತ್ತಿದ್ದ” ನೆನಪುಗಳು ನಮ್ಮಿಬ್ಬರ ಎದೆಯೊಳಗೆ ಹರಿದಾಡಿದವು. ಒಳಗೊಳಗೆ ನನ್ನ ತುಡುಗು ಮನಸು ಅದನ್ನೇ ಆಕೆ ಮುಂದುವರೆಸಲೆಂದು ಹಂಬಲಿಸುತ್ತಿತ್ತು. ಆದರೆ ಅದನ್ನವಳು ಭಾಳ ಶ್ಯಾಣೇತನದಿಂದಲೇ ನಿಭಾಯಿಸುತ್ತಿದ್ದಳು. ಅಬ್ಬಾ ! ಅವಳ ನೆನಪುಗಳು ಅದೆಷ್ಟು ಸೊಗಸು ಮತ್ತು ಪೊಗದಸ್ತಾಗಿದ್ದವೆಂದರೆ ಜಸ್ಟ್ ಕೆಲವೇ ನಿಮಿಷಗಳ ಕೆಳಗೆ ಘಟಿಸಿದ ತಾಜಾತನದಲ್ಲಿ ಅದ್ದಿ ಅದ್ದಿ ತೆಗೆದ ಬ್ರೇಕಿಂಗ್ ನ್ಯೂಸ್ ತರಹ ಫಳ ಫಳ ಹೊಳೆಯತೊಡಗಿದವು. ತಾಸೊಪ್ಪತ್ತು ನಾನು ದೂಸರಾ ಮಾತಾಡದೇ ತನ್ಮಯನಾಗಿ ಕೇಳ ತೊಡಗಿದೆ. ನಡು ನಡುವೆ ನನಗೆ ಅರ್ಥವಾಗದ ಮರಾಠಿ ಗಾದೆಗಳನ್ನೇ ಹೇಳುತ್ತಿದ್ದಳು. ರಸಾನುಭೂತಿಗೆ ಭಂಗವಾದೀತೆಂದು ಅವಳ ಮಾತುಗಳಿಗೆ “ಆದರೆ” ಶರಣಾಗತನಾಗಿ ಸಾಧುತ್ವದಲಿ ಆಲಿಸತೊಡಗಿದೆ. ಅಷ್ಟಕ್ಕೂ ನನಗೀಗ ಪ್ರಶ್ನಿಸುವ ಮತ್ತು ಪ್ರತಿಕ್ರಿಯಿಸುವ ರೋಗ ಕಡಿಮೆಯಾಗಿದೆ.

ತಾನು ಹೇಳುವ ಅವೆಲ್ಲವೂ ಪ್ರಮಾಣ ಪತ್ರದಂತೆ ಇದ್ದು,  ನಾ ಖರೇ ಹೇಳ್ತೀನಿ ಸಿರಸೈಲ ನೀ ಭಾಳ ಶ್ಯಾಣೇ ಇದ್ದೀ. ಪ್ರಾಮಾಣಿಕ ಮತ್ತು ಸುಪ್ರೀತನಾಗಿದ್ದಿ. ಹಾಗಂತ ತನ್ನ ಪ್ರಾಮಾಣಿಕ ಅಭಿವ್ಯಕ್ತಿಗೆ ಪುಷ್ಟಿ ದೊರಕಿಸಿಕೊಳ್ಳುತ್ತಿದ್ದಳು. ಅವಳೇನು ಹೆಚ್ಚು ವಿದ್ಯಾವಂತೆಯಲ್ಲ. ಹಾಗಂತ ಅನ್ಪಡ್ ಅಂತು ಖಂಡಿತಾ ಅಲ್ಲ. ಆದರೆ ಯಾವುದೇ ಸುಶಿಕ್ಷಿತ ಮಹಿಳೆಗಿಂತ ಕಮ್ಮೀ ಇಲ್ಲದಂತೆ ನಾಗರಿಕ ಪ್ರಜ್ಞೆ ತುಂಬಿ ನಿರರ್ಗಳವಾಗಿ ಮಾತಾಡುತ್ತಿದ್ದಳು. ನಡುನಡುವೆ ಚಿಕ್ಕಂದಿನ ಗೆಳತಿ ಸುಜಾತಳನ್ನು ‘ಸೂಜಿ’ ಅಂತ ಕರೆಯುತ್ತಿದ್ದುದನ್ನು ನೆನಪಿಸಿ, ಸೂಜಿ ಈಗ ನಮ್ಮೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ. ಹೆಮ್ಮೆಯಿಂದ ಹೇಳಿದಳು. ಹೌದು ಅವಳ ಮಾತುಗಳಿಗೆ ಪೌರ್ಣಿಮೆಯ ಅವರ್ಣನೀಯ ಸೊಗಸು. ಸಹಸ್ರ ಚಂದ್ರಮಗಳ ಸೊಬಗು ತುಂಬಿ ಬಂದಿತ್ತು. ಮೇಲಾಗಿ ರುಚಿಕರ ಜವಾರಿತನದ ಮಾಧುರ್ಯವಿತ್ತು.‌ ಅದಕ್ಕೆಂದೇ ಬಹಳ ಹೊತ್ತು ಆಕೆಯ ನಾಟೀ ಮಾತುಗಳ ಪರಿಮಳ ಪ್ರೀತಿಯನ್ನು ಕೋಮಲ ಚಿತ್ತಚೀಲದ ತುಂಬಾ ತುಂಬಿಸಿಕೊಂಡೆ.

ನನ್ ಗಂಡನಿಗೆ ಕೊಲ್ಲಾಪುರದಲ್ಲಿ ಸರ್ಕಾರಿ ನೌಕರಿ. ಕೈತುಂಬಾ ಛೊಲೋ ಪಗಾರ. ಅವಂದು ಇಂಗ್ರೇಜಿ ಕಡೆಯ ಊರು. ಅದು ಹಜರಿ ಖಾಜೇಶನ ಝಳಕಿ ಹತ್ತಿರದ ಹಳ್ಳಿ. ನನ್ ಗಂಡ ಭಾರಿ ಕುಡುಕ ಮತ್ತು ಭಯಂಕರ ಸ್ಟ್ರಿಕ್ಟ್. ಅವನಿಗೆ ಸ್ನೇಹ, ಪ್ರೀತಿ, ಅಂತಃಕರಣಗಳ ಪರಿಚಯವೇ ಇರ್ಲಿಲ್ಲ. ನಿನಗೆ ಆಗಾಗ ಕೇಳಿದಂತೆ ಹೋಗಿ, ಹೋಗಿ ಅವನಿಗೆ ಕೇಳಿದ್ದೆ “ನನ್ನನ್ನು ಪ್ರೀತಿಸುತ್ತಿಯಾ” ಅಂತ. ನನಗೆ ಕಪಾಳ ಮೋಕ್ಷ ಮಾಡಿ ಅಂವ ಹೇಳಿದ್ದಿಷ್ಟು. ” ನೀನು ನನ್ನ ಸೇವಕಿ ಆಯ್ ಮೀನ್ ದಾಸಿ ” ಅಂತ ಕೊಳಕು ಇಂಗ್ಲಿಷಿನಲ್ಲಿ ಕಿರುಚಿದ್ದ. ಅವನು ದಾರೂ ಕುಡಿದ ಗಬ್ಬುವಾಸನೆ ನನ್ನ ಮೊದಲ ರಾತ್ರಿಯೇ ಪರಿಚಯವಾಯ್ತು. ಅವನ ಪಾಲಿಗೆ ನಾನೊಂದು ನಿತ್ಯಭೋಗದ ವಸ್ತು. ನನ್ನನ್ನು ವಸ್ತುವಿನಂತೆ ಬಳಕೆ ಮಾಡುತ್ತಿದ್ದ.

ನಾನು ಮನೆಯಾಚೆ ಹೋಗದ ಹಾಗೆ ನನ್ನನ್ನು ಮನೆಯಲ್ಲೇ ಸೆರೆಯಾಳಿನಂತೆ ಕಟ್ಟಿಹಾಕಿ ಕೊಂಡಿದ್ದ. ಅವನೆಂತಹ ಕಟುಕನಾಗಿದ್ದನೆಂದರೆ ನನ್ನಪ್ಪ ತೀರಿಕೊಂಡಾಗ ಅಪ್ಪನ ಹೆಣಕ್ಕು ಸಹಿತ ನಾನು ಹೋಗದಂತೆ ಕಟ್ಟಪ್ಪಣೆ ವಿಧಿಸಿದ ಮಹಾಕ್ರೂರಿ. ಆ ರಾತ್ರಿಯೂ ಅವನು ನನ್ನನ್ನು ಬಿಡಲಿಲ್ಲ. ಅದನ್ನು ಹೇಳುವಾಗ ಅವಳಿಗರಿವಿಲ್ಲದೇ ಕೆಂಡದ ಕಣ್ಣೀರು ಕಣ್ತುಂಬಿ ಹರಿದವು. ಸಿರಸೈಲ ನಿನ್ನಲ್ಲಿ ತಾಯ್ತನ ಇರೋದರಿಂದ ನಿನ್ನೆದುರು ಎಲ್ಲವನ್ನೂ ಖುಲ್ಲಾ ಖುಲ್ಲಾ ಹೇಳಬೇಕೆನಿಸುತ್ತಿದೆ, ಎಂದು ಕಣ್ಣೊರೆಸಿಕೊಳ್ಳುತ್ತಾ ನುಡಿದಳು. ಕೆಲವು ಹೇಳಬಾರದ ಕಹಿಸತ್ಯಗಳನ್ನು ಹೇಳಲು ಹಿಂಜರಿಕೆ ತೋರಲಿಲ್ಲ. ನನ್ನ ಗಂಡನ ತಾಯಿ ನನ್ನತ್ತೆ ಅಂಜುಟಗಿ ಗುರ್ಬಾಯಿ ಒಂದಿನ ” ನಿನ್ನ ಗಂಡನಿಗೆ ಹೇಳಿ ಎರಡು ತಾಳಿ ಮಾಡಿಸಿಕೋ ” ಅಂದಳು. ಅದನ್ನು ಅವನಿಗೆ ಹೇಳಿದ್ದೆ ತಡ “ನಿನಗೆ ನಾನೊಬ್ನೆ ಗಂಡ, ಇಬ್ರಲ್ಲಾ. ಎರಡ ತಾಳಿ ಯಾಕಂತ ಹೇಳಿ ನನ್ ಬಾಯಿ ಮುಚ್ಚಿಬಿಟ್ಟ.

ತಡವರಿಸಿದಂತೆ ತನ್ನ ಎಡಗೈ ತೋರಿಸಿದಳು. ಅವಳ ಗಂಡನ ಹೆಸರನ್ನು ಅವನೇ ಖುದ್ದಾಗಿ ನಿಂತು ಅಚ್ಚೆ ಹಾಕಿಸಿದ್ದು. ಅದು ಅವಳು ಸಾಯೋಮಟ ಇರಲೆಂಬುದು ಅವನ ಕಟ್ಟಾಜ್ಞೆಯಂತೆ. ಅದನ್ನು ಸಾಬೀತು ಪಡಿಸುವ ಸ್ವರದಲ್ಲಿ ಸಾರಿದಳು. ಹುಚ್ಚು ಹರೆಯದಲ್ಲಿ ಅವಳ ಮೇಲಿನ ಹುಚ್ಚುಪ್ರೀತಿಗಿಂತ ಸಂಶಯದ ಅಪನಂಬುಗೆಯೇ ಹೆಚ್ಚು ಇತ್ತೆಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಳು. ಅಚ್ಚೆ ಹಾಕಿಸಿದ ಅವನ ಹೆಸರು ಮುಚ್ಚಿ ಹೋಗುವಂತೆ ಒಮ್ಮೆ ಎರಡೂ ಕೈ ತುಂಬಾ ಕೆಂಪು ಬಳೆಗಳನ್ನು ಹಾಕಿಸಿಕೊಂಡು ಮಲಗಿದ್ದೆ. ಕುಡಿದು ಬಂದು ನಿಶೆಯಲ್ಲಿ ತನ್ನ ಬೂಟುಗಾಲಿಂದ ಬಳೆಗಳನ್ನು ತುಳಿದು ಕೈ ತುಂಬಾ ನೆತ್ತರು ಸುರಿಸಿದ್ದ. ದಶಕಗಳ ಹಿಂದೆ ಅದೇ ಕೈಗಳ ತುಂಬಾ ನೀನು ಹನಿಸಿದ್ದ ಗೆಳೆತನದ ಜೇನುಪ್ರೀತಿಯ ಸುರಲೋಕ ನೆನಪಾಗಿ ಅವತ್ತು ಇಡೀದಿನ ಅತ್ತಿದ್ದೆ.

ಗಾಜಿನ ಬಳೆಚೂರುಗಳು ನೆಟ್ಟ ಗಾಯದ ಗುರುತುಗಳು ಈಗಲೂ ತನ್ನ ಕೈಗಳ ಮೇಲೆ ಇರುವುದನ್ನು ತೋರಿಸಿದಳು. ತನಗೆ ಮೂರುಮಂದಿ ಹೆಣ್ಣು ಮಕ್ಕಳು ಹುಟ್ಟಿದ ಮೇಲೂ ಅವನ ಅನುಮಾನದ ಸೈತಾನ ಬುದ್ದಿ ಕಮ್ಮಿ ಆಗಲಿಲ್ಲ. ಜೀವ ಕಾಠರಸಿ ಸಣ್ಣ ಸಣ್ಣ ಮಕ್ಕಳನ್ನು ಕರಕೊಂಡು ಸಾಯಲು ಹೊರಟಿದ್ದೆ. ದೂರದ ದಾರಿಯಲ್ಲಿ ಖತರ್ನಾಕ್ ಪಾದೆಗಳು ಇರುವುದನ್ನು ಎಚ್ಚರಿಸಿ ಬಾಬಾನ ದರ್ಗಾದ ದರವೇಶಿ ಸಂತನೊಬ್ಬ ತನ್ನನ್ನು ಮತ್ತು ಮಕ್ಕಳನ್ನು ಕಾಪಾಡಿದ ಹೃದಯ ವಿದ್ರಾವಕ ಕತೆ ವಿವರಿಸಿದಳು. ಇಂತಹ ಇನ್ನೂ ಹತ್ತಾರು ಕತೆಗಳನ್ನು  ಹೇಳಿದಳು. ಸಾವಿನಪ್ಪನಂತಹ ಆ ಎಲ್ಲ ಕತೆಗಳಲ್ಲಿ ಅವಳೇ ದುರಂತ ನಾಯಕಿ. ಆದರೆ ಸುಖಾಂತ್ಯದ ಸಂಗತಿಯೊಂದಿಗೆ ತನ್ನ ಜೀವನ ಕಥನ ಮುಗಿಸುವಂತೆ ಕಂಡುಬಂತು.

ದೇವರ ತೇರು ಎಳೆಯುವ ಗೋದೂಳಿ ಸಮಯ ಸಮೀಪಿಸಿತು. ಹಿಂಡು ಹಿಂಡು ಕಾರುಗಳ ದಂಡು ಜಾತ್ರೆಯಲ್ಲಿ ಧೂಳೆಬ್ಬಿಸುತ್ತಾ ಫೇರಿ ಹಾಕ ತೊಡಗಿದವು. ಬಿಗುವಾನಿನ ಭಗವಾನ್ ಬಂದರೆಂದು ಜನ ” ಭಗವಾನ್ ಮಲ್ಲಿನಾಥ ಮಹಾರಾಜಕೀ ಜೈ ” ಎಂದು ಜೈಕಾರ ಹಾಕ ತೊಡಗಿದರು. ಪೋಲಿಸ್ ವಾಹನಗಳು ದಾರಿ ಭೇದಿಸುತ್ತಾ ಓಡುತ್ತಿದ್ದವು. ಧೂಳು ತುಂಬಿದ ಜಾತ್ರೆಯ ತುಂಬೆಲ್ಲ ಮಿಂಚಿನ ಸಂಚಾರ. ಅದನ್ನೆಲ್ಲ ಅವಳು ಮುಂಚಿತವಾಗಿಯೇ ನಿರೀಕ್ಷಿಸಿದಂತಿತ್ತು. ಮೊಬೈಲ್ ಮೂಲಕ ತನ್ನ ಕಾರು ಡ್ರೈವರನಿಗೆ ಅದೇನೋ ಮರಾಠಿಯಲ್ಲಿ ಹೇಳಿದಳು. ಅವನು ನಾವಿದ್ದ ಜಾಗಕ್ಕೆ ಕಾರು ತಂದು ನಿಲ್ಲಿಸಿದ.

ತಾನು ಭಗವಾನ್ ಮಹಾರಾಜ ಅವರ ದರುಶನಕ್ಕೆ ಬಂದಿರುವುದಾಗಿ ಮೆಲುದನಿಯಲಿ ಉಸುರಿದಳು. ಭಗವಾನ್ ಮಹಾರಾಜರು ನಮ್ಮ ಪಾಲಿನ ದೇವರು. ಕಳೆದ ಆರು ವರ್ಷಗಳಿಂದ ನನ್ನ ಗಂಡ, ಭಗವಾನ್ ಅವರ ಪರಮ ಭಕ್ತನಾಗಿದ್ದಾನೆ. ಅವನೀಗ ಕುಡಿಯುವುದನ್ನು ತ್ಯಜಿಸಿದ್ದಾನೆ. ಅವನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ನನಗಂಡ ಸೋಟ ಅಲ್ಲ, ಲಪೂಟ ಅಲ್ಲವೇ ಅಲ್ಲ ಅನ್ನೋ ಸಮಾಧಾನ. ಅದನ್ನ ನನಗ ಭಗವಾನರು ಮನವರಿಕೆ ಆಗುವಂತೆ ತಿಳಿಸಿಕೊಟ್ರು. ನಮ್ಮ ಇಡೀ ಕುಟುಂಬವೇ ಈಗ ಬಿಗುವಾನ್ ಭಗವಾನರ ಆರಾಧಕ ಕುಟುಂಬವಾಗಿದೆ ಅಂದಳು. ಅದ್ಯಾಕೋ ನನಗೆ ದು. ನಿಂ. ಬೆಳಗಲಿ ಅವರ ಮೌನಕ್ರಾಂತಿ ಕಾದಂಬರಿ ನೆನಪಾತು. ನಾನು ಮಹಾಮೌನಿಯಾದೆ.

ಬದುಕೆಂದರೆ ಕತೆ ಕಾದಂಬರಿಗಳ ವಸ್ತುವೇ ಎಂದು ಗೊಂದಲಿಗನಾದೆ. ಅಂದಹಾಗೆ ಅವಳ ಹೆಸರು ಹೇಳದಿದ್ದರೆ ಓದುಗ ದೊರೆಗಳಿಗೆ ದೊಡ್ಡ ದ್ರೋಹವಾದೀತು. ಅವಳು ನನ್ನ ಬಾಲ್ಯದ ಗೆಳತಿ. ಕ್ಷಮೆ ಇರಲಿ ಅವಳ ಹೆಸರು ಅಂಬಾಬಾಯಿ. ಕ್ಷಮೆ ಯಾಕಂದ್ರೇ ಅಂಬವ್ವ ಎನ್ನೋದು ನನ್ನ ಪ್ರೀತಿಯ ಮಹಾಕವಿ ಬೇಂದ್ರೆ ಅವರ ತಾಯಿಯ ಹೆಸರು. ನನ್ನ ಗೆಳತಿ ಅಂಬಾಬಾಯಿ ಅವಳೀಗ ಅಂಬಾಭವಾನಿಯೇ ಆಗಿದ್ದಾಳೆ. ಅವಳ ಮೋಹ ಸಂವಹನಶೀಲ ಗುಣಗಳು ನನ್ನನ್ನು ಮತ್ತೆ ಮತ್ತೆ ದೂರ ತೀರಕೆ ಕರೆದೊಯ್ಯುತಿವೆ. ದೇವತೆ ಅಂಬಾಬಾಯಿ ಮತ್ತೆ ಭಗವತ್ಕಥನ ಶುರು ಮಾಡಿದಳು.

ಭಗವಾನರ ಕೃಪೆಯಿಂದ ನನ್ನ ಗಂಡ ನನ್ನನ್ನು ಅತ್ಯಂತ ಪ್ರೀತಿಯಿಂದ ಗೌರವಿಸುತ್ತಿದ್ದಾನೆ. ನನಗೀಗ ಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ನಾನೀಗ ಒಬ್ಬಳೇ ಎಲ್ಲಿ ಬೇಕಾದಲ್ಲಿ ತಿರುಗಾಡುತ್ತೇನೆ. ನಮಗೆ ಒಳ್ಳೆಯ ಕಾರ್ ಡ್ರೈವರ್ ಸಿಕ್ಕಿದ್ದಾನೆ. ಅದಕ್ಕೆಲ್ಲ ಪುಣೆ ಬಳಿಯ ಬಿಗುವಾನ್ ಆಶ್ರಮದ ಭಗವಾನ್ ಮಹಾರಾಜರ ಅನುಗ್ರಹವೇ ಕಾರಣ. ಇನ್ನೇನು ಬಿಗುವಾನ ಮಹಾರಾಜರ ಹವಾ ಕುರಿತು ಅವಳು ಹೆಚ್ಚು ಹೆಚ್ಚು ವಿವರಿಸ ಬಹುದೆಂದು ನಾನು ತೀವ್ರವಾದ ನಿರಾಸಕ್ತಿ ತೋರಿದೆ. ಅದು ಅವಳಿಗೆ ಅರ್ಥವಾಗಿ ಭಗವಾನರ ಭೆಟ್ಟಿಗೆ ಹೋದಳು. ಹೋಗುವ ಮುನ್ನ ನನ್ನ ಸೆಲ್ ನಂಬರ್ ಪಡೆದಳು.

ಅವಳ ಮುಗ್ದತೆ, ಸಾವಯವ ಪ್ರೀತಿ, ಅಂತಃಕರಣ ತುಂಬಿ ತುಳುಕುವ ಭಾವಾಭಿವ್ಯಕ್ತಿ, ದೈವ ಭಕುತಿ, ಬದುಕಿನುತ್ಸಾಹ ಎಲ್ಲವೂ ಜೀವ ಬಳ್ಳಿಯಂತೆ ಒಬ್ಬುಳಿಯಾದವು. ಗೆಳೆತನದ ಶೃತಿಸೆಳೆತ ಕತೆಯಾಗಿ ನನ್ನೆದೆಯೊಳಗೆ ನದಿಯಂತೆ ಹರಿಯತೊಡಗಿತು. ಜಾತ್ರೆಯ ಸುತ್ತಲೂ ಕತ್ತಲು ಕವಿಯ ತೊಡಗಿತು. ಕಪ್ಪುಕತ್ತಲೆ ಭೇದಿಸಿಕೊಂಡು ತೇರು ಪಾದಗಟ್ಟೆ ಸೇರಲು ಬೆರಗಿನಿಂದ ಸಾಗಿತು. ಬೆಡಗಿನ ಪಾದಗಟ್ಟೆ ಮುಟ್ಟಲು ತಿಳಿಬೆಳಕಿನ ದಾರಿ ಹುಡುಕುತ್ತಾ ರಥ ಸಾಗುತ್ತಲೇ ಇದೆ. ದೇವರ ತೇರಿಗೆ ಪಾದಗಟ್ಟೆ ಇನ್ನೂ ಸಿಕ್ಕಿಲ್ಲ.

ಲೇಖನ: ಮಲ್ಲಿಕಾರ್ಜುನ ಕಡಕೋಳ

Tags: special storyvalentines day
Previous Post

ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಕೇಸ್: ಇಬ್ಬರಿಗೆ ಗಂಭೀರ ಗಾಯ

Next Post

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ರಾಜಕೀಯ ಸಂಕಷ್ಟ..! ಭ್ರಷ್ಟಾಚಾರಕ್ಕೆ ಬರಿಗಣ್ಣ ಸಾಕ್ಷಿ..!

Related Posts

ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!
Top Story

ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!

by ಪ್ರತಿಧ್ವನಿ
January 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಾವೇರಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ನೂತನ ವಿವಿಐಪಿ ಸರ್ಕೀಟ್ ಹೌಸ್ ಕಟ್ಟಡವನ್ನು...

Read moreDetails
ವರದಾ ಬೆಡ್ತಿ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಲಿ: ಬಸವರಾಜ ಬೊಮ್ಮಾಯಿ

ವರದಾ ಬೆಡ್ತಿ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಲಿ: ಬಸವರಾಜ ಬೊಮ್ಮಾಯಿ

January 7, 2026
ಸಾಧನೆ ಮಾಡುವುದು ಮಹಿಳೆಯರಿಗೆ  ಅಸಾಧ್ಯವಾದ ಕೆಲಸವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ಸಾಧನೆ ಮಾಡುವುದು ಮಹಿಳೆಯರಿಗೆ ಅಸಾಧ್ಯವಾದ ಕೆಲಸವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

January 7, 2026

ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಚಿತ್ರದ ಕಿಕ್ ಏರಿಸುವ ‘ಅಸಲಿ ಸಿನಿಮಾ’ ಹಾಡು ಬಿಡುಗಡೆ!

January 7, 2026
ಅರಸು ಬಿತ್ತಿದ ಸಮಾಜವಾದದ ಬೀಜ ಸಿದ್ದರಾಮಯ್ಯ ಆಡಳಿತದಲ್ಲಿ ಜೀವಂತ : ರಾ. ಚಿಂತನ್

ಅರಸು ಬಿತ್ತಿದ ಸಮಾಜವಾದದ ಬೀಜ ಸಿದ್ದರಾಮಯ್ಯ ಆಡಳಿತದಲ್ಲಿ ಜೀವಂತ : ರಾ. ಚಿಂತನ್

January 7, 2026
Next Post
ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ರಾಜಕೀಯ ಸಂಕಷ್ಟ..! ಭ್ರಷ್ಟಾಚಾರಕ್ಕೆ ಬರಿಗಣ್ಣ ಸಾಕ್ಷಿ..!

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ರಾಜಕೀಯ ಸಂಕಷ್ಟ..! ಭ್ರಷ್ಟಾಚಾರಕ್ಕೆ ಬರಿಗಣ್ಣ ಸಾಕ್ಷಿ..!

Please login to join discussion

Recent News

ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!
Top Story

ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!

by ಪ್ರತಿಧ್ವನಿ
January 7, 2026
ವರದಾ ಬೆಡ್ತಿ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಲಿ: ಬಸವರಾಜ ಬೊಮ್ಮಾಯಿ
Top Story

ವರದಾ ಬೆಡ್ತಿ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಲಿ: ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
January 7, 2026
ಸಾಧನೆ ಮಾಡುವುದು ಮಹಿಳೆಯರಿಗೆ  ಅಸಾಧ್ಯವಾದ ಕೆಲಸವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
Top Story

ಸಾಧನೆ ಮಾಡುವುದು ಮಹಿಳೆಯರಿಗೆ ಅಸಾಧ್ಯವಾದ ಕೆಲಸವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

by ಪ್ರತಿಧ್ವನಿ
January 7, 2026
Top Story

ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಚಿತ್ರದ ಕಿಕ್ ಏರಿಸುವ ‘ಅಸಲಿ ಸಿನಿಮಾ’ ಹಾಡು ಬಿಡುಗಡೆ!

by ಪ್ರತಿಧ್ವನಿ
January 7, 2026
ವಿನಾಶಕಾರಿ ಯುದ್ಧಪರಂಪರೆ-ಸಾಮ್ರಾಜ್ಯಶಾಹಿ ದಾಹ
Top Story

ವಿನಾಶಕಾರಿ ಯುದ್ಧಪರಂಪರೆ-ಸಾಮ್ರಾಜ್ಯಶಾಹಿ ದಾಹ

by ಪ್ರತಿಧ್ವನಿ
January 7, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿದ್ದರಾಮಯ್ಯ

ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿದ್ದರಾಮಯ್ಯ

January 7, 2026
ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!

ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!

January 7, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada