• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವರದಾ ಬೆಡ್ತಿ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಲಿ: ಬಸವರಾಜ ಬೊಮ್ಮಾಯಿ

ಸಿಎಂ ಸುದೀರ್ಘ ಅವಧಿಯ ಅಧಿಕಾರದ ಕೊಡುಗೆಯಾಗಿ ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಲಿ: ಬಸವರಾಜ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
January 7, 2026
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
ವರದಾ ಬೆಡ್ತಿ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಲಿ: ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಸುದೀರ್ಘ ಅವಧಿಯ ಅಧಿಕಾರದ ದಾಖಲೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ದಾಖಲೆಯ ನೆನಪಿಗಾಗಿ ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸತ್ರೆ ಕೊಡುಗೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ADVERTISEMENT

ಇಂದು ಹಾವೇರಿಯ ದೇವಗಿರಿ – ಯಲ್ಲಾಪುರ ಬಳಿ ನೂತನವಾಗಿ ನಿರ್ಮಿಸಲಾದ ಹಾವೇರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. ನಮ್ಮೆಲ್ಲ ಬಹುದಿನಗಳ ವೈದ್ಯಕೀಯ ಕಾಲೇಜು ಉದ್ಘಾಟನೆ ಆಗಿದೆ. ವೈದ್ಯಕೀಯ ಶಿಕ್ಷಣದ ಜೊತೆಗೆ ಹಾವೇರಿಯ ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡಲು ಮೆಡಿಕಲ್ ಕಾಲೇಜು ವತಿಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದು ನಮ್ಮೆಲ್ಲರ ಬಯಕೆ ಎಂದು ಹೇಳಿದರು.

ಮೆಡಿಕಲ್ ಕಾಲೇಜು 2017 ರಲ್ಲಿ ಘೋಷಣೆ ಆದರೂ ಚುನಾವಣೆ ಸಂದರ್ಭ, ಮುಂದೆ ಬಂದ ಸರ್ಕಾರಗಳು ಇದಕ್ಕೆ ಮುತುವರ್ಜಿ ವಹಿಸಲಿಲ್ಲ. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲೆಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ ಅಲ್ಲಿ ಮೆಡಿಕಲ್ ಕಾಲೇಜು ಮಾಡಬೇಕೆಂದು ಕಳೆದ 11 ವರ್ಷದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60/40 ಅನುಪಾತದಲ್ಲಿ ಕರ್ನಾಟಕದಲ್ಲಿ ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿ ನಾಲ್ಕು ಮೆಡಿಕಲ್ ಕಾಲೇಜು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ 194 ಕೋಟಿ ರೂ. ಕೊಟ್ಟಿದೆ. ಅಲ್ಲದೇ ಕ್ರಿಟಿಕಲ್ ಕೇರ್ ಸೆಂಟರ್ ಗೆ 50 ಕೋಟಿ ರೂ.ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕಟ್ಟಡ ಉದ್ಘಾಟನೆ ಆಗಿದೆ. 2023 ರಲ್ಲಿಯೇ ಕಾಲೇಜು ಆರಂಭವಾಗಿದೆ. ಈಗಾಗಲೇ ಮೂರು ವರ್ಷ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಈ ಕೆಲಸ ಆಗಬೇಕಾದರೆ ನಾವೆಲ್ಲರೂ ಕೂಡ ಜನರ ಕೇಂದ್ರ ಬಿಂದುವಾಗಿ ನಮ್ಮ ಕೆಲಸ ಮಾಡಿದಾಗ ಸಾಧ್ಯ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.


ಮೆಡಿಕಲ್ ಕಾಲೇಜನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಜೋಡಿಸಿದ್ದೇವೆ. ಅದರ ವ್ಯವಸ್ಥೆ ಸರಿ ಇಲ್ಲ. ಒಂದು ಸೂಪರ್ ಸ್ಪೆಷಾಲಿಟಿ ಆಸತ್ರೆಯನ್ನು ಘೋಷಣೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ಅದು ಬಹಳ ಅವಶ್ಯಕತೆ ಇದೆ. ನಮಗೆ ಏನಾದರೂ ತೊಂದರೆ ಆದರೆ ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕಿದೆ. ಸಿಎಂ ಅತಿ ಹೆಚ್ಚು ದಿನ ಅಧಿಕಾರ ಮಾಡಿದ್ದಕ್ಕಾಗಿ ನಮಗೆಲ್ಲ ಬಹಳವಟು ಸಂತೋಷ ಆಗಿದೆ. ಇವತ್ತು ಅವರ ದಾಖಲೆಯ ದಿನ ಇದು ಚಿರಸ್ಮರಣೀಯ ಆಗಬೇಕು. ಸಿದ್ದರಾಮಯ್ಯ ದಾಖಲೆ ಮಾಡಿದ ದಿನ ನಮ್ಮ ಹಾವೇರಿಗೆ ಕೊಡುಗೆ ಕೊಟ್ಟಿದ್ದಾರೆ ಎಂದು ನೆನಪು ಉಳಿಯಲು ಸೂಪರ್ ಸಷಾಲಿಟಿ ಆಸತ್ರೆ ಘೋಷಣೆ ಮಾಡುವಂತೆ ಆಗಹಿಸಿದರು. ಸರ್ಕಾರದ ಉದ್ದೇಶ ಮುಖ್ಯಮಂತ್ರಿಗಳ ಬಾಯಲ್ಲಿ ಬಂದರೆ ಅದು ಆಗುತ್ತದೆ ಎನ್ನುವ ವಿಶ್ವಾಸ ಇದೆ. ಅಭಿವೃದ್ಧಿಯಲ್ಲಿ ರಾಜಕಾರಣ ಅವಶ್ಯಕತೆ ಇಲ್ಲ. ಪೈಪೋಟಿ ಇರಲಿ ನಮ್ಮ ಆಯ್ಕೆ ಪೀಪಲ್ ಓರಿಯಂಟಲ್ ಪೊಲಿಟಿಕ್ಸ್, ಸಿದ್ದರಾಮಯ್ಯ ಅವರ ದಾಖಲೆಯನ್ನು ಮುರಿದಿದ್ದಾರೆ. ದೇವರಾಜ ಅರಸು ಅವರ ದಾಖಲೆ ಇನ್ನೂ ನೆನಪಿದೆ. ಅದನ್ನು ಸಿಎಂ ಅವರಿಂದ ನಾವು ಬಯಸುತ್ತೇವೆ ಎಂದು ಹೇಳಿದರು.

ಬೆಡ್ತಿ ವರದಾ ಜೋಡಣೆ ಸಾಕಾರಗೊಳ್ಳಲಿ
ನಮ್ಮ ಉಪ ಮುಖ್ಯಮಂತಿಗಳು ಬೆಡ್ಡಿ ವರದಾ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ಬರಗಾಲದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ವರದಾ ನದಿ ಮಳೆಗಾಲದಲ್ಲಿ ಮಾತ್ರ ಹರಿಯುತ್ತದೆ. ಬೆಡ್ತಿಯಿಂದ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕೇವಲ ಶೇ 8 ರಿಂದ 10 ರಷ್ಟು ನೀರನ್ನು ತುಂಗಭದ್ರಾ ನದಿಗೆ ಜೋಡಿಸಿದರೆ ಗದಗ, ಹಾವೇರಿ ಜಿಲ್ಲೆಗೆ ಅನುಕೂಲವಾಗುತ್ತದೆ. ಇದು 1994 ರಿಂದ ಇರುವ ಯೋಜನೆ ಕೇಂದ್ರದ ಮೂರು ನದಿ ಜೋಡಣೆ ಯೋಜನೆಗಳಲ್ಲಿ ಇದು ಒಂದು. ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಕೊಂಡಿದೆ. ಪರಿಸರಕ್ಕೂ ತೊಂದರೆಯಾಗದಂತೆ ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ಸಾಕಾರಗೊಂಡರೆ ಈ ಭಾಗದಲ್ಲಿ ಹಸಿರು ಕ್ರಾಂತಿಯಾಗುತ್ತದೆ. ಒಳ್ಳೆಯ ದಿನ ಶುಭಾರಂಭವಾಗಿದೆ. ಬರುವಂತಹ ದಿನಗಳಲ್ಲಿ ಹಾವೇರಿ ಇನ್ನಷ್ಟು ಅಭಿವೃದ್ಧಿ ಆಗಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಅತ್ಯಂತ ಸುಂದರವಾಗಿ ತಳಿರು ತೋರಣಗಳಿಂದ ಸ್ವಾಗತ ಮಾಡುವಂತೆ ಆಗಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ, ಸಚಿವರುಗಳಾದ ಶಿವಾನಂದ ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್, ಶ್ ಎಚ್.ಕೆ.ಪಾಟೀಲ್, ಸತೀಶ ಜಾರಕಿಹೊಳಿ, ವಿಧಾನಸಭೆಯ ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರುಗಳಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯಾಸೀರಖಾನ್ ಪಠಾಣ್, ಹೆಸ್ಕಾಂ ಅಧ್ಯಕ್ಷರಾದ ಸೈಯದ ಅಜ್ಜಂಪೀರ ಖಾದ್ರಿ, ಹೀಮ್ಸ್ ನಿರ್ದೇಶಕರಾದ ಡಾ ಪ್ರದೀಪ ಕುಮಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Tags: Basavaraj BommaiBasavaraj ShivannaCM SiddaramaiahDK ShivakumarHaveriHK PatilMulti Super Speciality HospitalRudrappa lamaniSatish JarakiholiSharanaprakash patilShivanand Patilsiddaramaiah
Previous Post

ತಾಯಿ ಮೇಲಿನ ದ್ವೇಷಕ್ಕೆ ಮಗುವಿನ ಕೊಲೆ

Next Post

ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!

Related Posts

ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿಯಾದ ಪ್ರದೋಷ್‌ಗೆ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಸಿಗುತ್ತಾ?
ಕರ್ನಾಟಕ

ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿಯಾದ ಪ್ರದೋಷ್‌ಗೆ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಸಿಗುತ್ತಾ?

by ಪ್ರತಿಧ್ವನಿ
October 8, 2026
0

  ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್ ಇದೀಗ ಮಾಫಿ ಸಾಕ್ಷಿಯಾಗಿ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಸಂಪೂರ್ಣ ಮಾಹಿತಿಯನ್ನು...

Read moreDetails
‘ಬಿಜೆಪಿಗೆ ಮರಳುವುದು ಖಚಿತವೇ?’; ಕೆ.ಎಸ್. ಈಶ್ವರಪ್ಪ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆ

‘ಬಿಜೆಪಿಗೆ ಮರಳುವುದು ಖಚಿತವೇ?’; ಕೆ.ಎಸ್. ಈಶ್ವರಪ್ಪ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆ

October 8, 2026
Horoscope for October 6: A lucky day for these 4 zodiac signs

ಅಕ್ಟೋಬರ್ 8 ಗುರುವಾರದ ರಾಶಿಫಲ: ಯಾರಿಗೆ ಅದೃಷ್ಟ? ಯಾರಿಗೆ ನಷ್ಟ? ಇಲ್ಲಿದೆ ಸಂಪೂರ್ಣ ವಿವರ!

October 8, 2026
ಬಾಹ್ಯಾಕಾಶದಲ್ಲಿ ಪಿಕಾಚು ಆಟಿಕೆ ತೇಲಿದ್ದೇಕೆ? ಗಗನಯಾತ್ರಿಗಳು ಆಟಿಕೆ ಕೊಂಡೊಯ್ಯುವುದರ ಹಿಂದಿದೆ ವಿಶೇಷ ಕಾರಣ!

ಬಾಹ್ಯಾಕಾಶದಲ್ಲಿ ಪಿಕಾಚು ಆಟಿಕೆ ತೇಲಿದ್ದೇಕೆ? ಗಗನಯಾತ್ರಿಗಳು ಆಟಿಕೆ ಕೊಂಡೊಯ್ಯುವುದರ ಹಿಂದಿದೆ ವಿಶೇಷ ಕಾರಣ!

October 7, 2026
ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?

ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?

October 7, 2026
Next Post
ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!

ಹಾವೇರಿ ಜಿಲ್ಲೆಯ ಹಲವಾರು ಇಲಾಖೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada