• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಅರಸು ಬಿತ್ತಿದ ಸಮಾಜವಾದದ ಬೀಜ ಸಿದ್ದರಾಮಯ್ಯ ಆಡಳಿತದಲ್ಲಿ ಜೀವಂತ : ರಾ. ಚಿಂತನ್

ಪ್ರತಿಧ್ವನಿ by ಪ್ರತಿಧ್ವನಿ
January 7, 2026
in ಅಂಕಣ, ಇದೀಗ, ಕರ್ನಾಟಕ, ರಾಜಕೀಯ
0
ಅರಸು ಬಿತ್ತಿದ ಸಮಾಜವಾದದ ಬೀಜ ಸಿದ್ದರಾಮಯ್ಯ ಆಡಳಿತದಲ್ಲಿ ಜೀವಂತ : ರಾ. ಚಿಂತನ್
Share on WhatsAppShare on FacebookShare on Telegram

ಬೆಂಗಳೂರು : ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಆಡಳಿತದ ಅವಧಿಗಿಂತಲೂ ಅದರ ಆಶಯಗಳು ಮಹತ್ವದ ಗುರುತನ್ನು ಮೂಡಿಸುತ್ತವೆ. ಆ ಅರ್ಥದಲ್ಲಿ ನೋಡಿದರೆ ದೇವರಾಜ್ ಅರಸು ಅವರು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ರಾಜಕೀಯಕ್ಕೆ ದಿಕ್ಕು ತೋರಿಸಿದವರು. ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳನ್ನು ರಾಜಕೀಯದ ಕೇಂದ್ರಬಿಂದುವಿಗೆ ತರುವ ಮೂಲಕ ಅವರು ರಾಜ್ಯದ ಆಡಳಿತದ ಸ್ವರೂಪವನ್ನೇ ಬದಲಿಸಿದರು ಎಂದು ಚಿಂತಕ ರಾ. ಚಿಂತನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ ಸಾಧನೆಗಳ ಕುರಿತು ಅವರು ಲೇಖನದ ಮೂಲಕ ಸಿಎಂ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಅರಸು ಅವರ ಕಾಲಘಟ್ಟದ ಬೇಡಿಕೆಗಳು ಬೇರೆ; ಸಿದ್ದರಾಮಯ್ಯ ಅವಧಿಯ ಬಯಕೆಗಳು ಬೇರೆ! ಆದರೆ ಅರಸು ಅವರು ಬಿತ್ತಿದ ಆ ಸಮಾಜವಾದದ ಬೀಜ ಇಂದು ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಜೀವಂತವಾಗಿರುವುದು ವಿಚಾರಧಾರೆಯ ನಿರಂತರತೆಯಾಗಿದೆ. ಅಹಿಂದ ಚಳವಳಿಯ ರಾಜಕೀಯ ಅರ್ಥವನ್ನು ಸ್ಪಷ್ಟವಾಗಿ ಗ್ರಹಿಸಿ, ಅದನ್ನು ಆಡಳಿತಾತ್ಮಕ ನೀತಿಗಳ ಮೂಲಕ ಕಾರ್ಯರೂಪಕ್ಕೆ ತರಲು ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ

ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಅತಿಹೆಚ್ಚು ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ಮೊದಲ ಸ್ಥಾನಕ್ಕೇರಿರುವುದು ಸಂಖ್ಯಾತ್ಮಕ ದಾಖಲೆ ಮಾತ್ರವಲ್ಲ. ಅದು ಜನಸಾಮಾನ್ಯರು ಒಪ್ಪಿಕೊಂಡ ಆಡಳಿತ ಮಾದರಿಯ ಮಾನ್ಯತೆ. ಅನ್ನಭಾಗ್ಯದಿಂದ ಹಿಡಿದು ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣದವರೆಗೆ ಅವರ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳು ಕಲ್ಯಾಣರಾಜ್ಯದ ತತ್ವಕ್ಕೆ ನೈಜ ಅರ್ಥ ನೀಡಿವೆ. ಇವುಗಳನ್ನು “ಉಚಿತ ಯೋಜನೆಗಳು” ಎಂದು ತಳ್ಳಿಹಾಕುವುದು ಸುಲಭ; ಆದರೆ ಅವುಗಳ ಹಿಂದಿರುವ ಸಾಮಾಜಿಕ ಸಮತೋಲನದ ಆಶಯವನ್ನು ನಿರ್ಲಕ್ಷ್ಯ ಮಾಡಲಾಗದು ಎಂದು ಹೇಳಿದ್ದಾರೆ.

ಇಂದಿನ ರಾಜಕೀಯ ವಾತಾವರಣದಲ್ಲಿ ಜನನಾಯಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಸಿದ್ದರಾಮಯ್ಯ ಅವರು ಜನರೊಂದಿಗೆ ನೇರ ಸಂಪರ್ಕ ಉಳಿಸಿಕೊಂಡಿರುವುದು ಗಮನಾರ್ಹ. ಬಹುತೇಕ ದೇವರಾಜ್ ಅರಸು ಮತ್ತು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸುವ ನಾಡಿ ಒಂದೇ—ಸಾಮಾಜಿಕ ನ್ಯಾಯ. ಈ ನಾಡಿ ಜೀವಂತವಾಗಿರುವವರೆಗೆ ಕರ್ನಾಟಕದ ರಾಜಕೀಯದಲ್ಲಿ ಸಮಾಜವಾದ ಕೇವಲ ಘೋಷಣೆಯಾಗಿ ಉಳಿಯದು; ಅದು ಆಡಳಿತದ ದಾರಿದೀಪವಾಗಿಯೇ ಮುಂದುವರಿಯುತ್ತದೆ. ಅದೇ ಈ ರಾಜ್ಯದ ಪ್ರಜಾಪ್ರಭುತ್ವದ ಬಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

Tags: #karnataka politicsCM Siddaramaiahcongress karnatakadevaraj ursPratidhvani articleRa ChintanRecored Break
Previous Post

ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿ ಥಳಿತ ಪ್ರಕರಣಕ್ಕೆ ಕಮಿಷನರ್‌ ಬಿಗ್‌ ಟ್ವಿಸ್ಟ್‌..!

Next Post

ಶಾಲೆಗೆ ಬಾಂಬ್ ಬೆದರಿಕೆ: ಹಣಕ್ಕೆ ಬೇಡಿಕೆ

Related Posts

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ
Top Story

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

by ಪ್ರತಿಧ್ವನಿ
April 20, 2026
0

ಬೆಂಗಳೂರು : ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಡಾ. ಚೆಲ್ಲ ಕುಮಾರ್ ಡಿ.ಎಂ.ಕೆ. ನೇತೃತ್ವದ ಮೈತ್ರಿಕೂಟದಲ್ಲಿ ಕೃಷ್ಣಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ...

Read moreDetails
BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

April 20, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
Next Post
ಶಾಲೆಗೆ ಬಾಂಬ್ ಬೆದರಿಕೆ: ಹಣಕ್ಕೆ ಬೇಡಿಕೆ

ಶಾಲೆಗೆ ಬಾಂಬ್ ಬೆದರಿಕೆ: ಹಣಕ್ಕೆ ಬೇಡಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada