• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಜಯೇಂದ್ರದ ಅಧಿಕಾರ ಕಸಿಯುವ ಕೆಲಸ ಆರಂಭ ಆಯ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
August 15, 2024
in Top Story, ಇದೀಗ, ರಾಜಕೀಯ
0
ವಿಜಯೇಂದ್ರದ ಅಧಿಕಾರ ಕಸಿಯುವ ಕೆಲಸ ಆರಂಭ ಆಯ್ತಾ..?
Share on WhatsAppShare on FacebookShare on Telegram

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ಲಿಂಗಾಯತರನ್ನು ಓಲೈಸಲು ಬಿಜೆಪಿ ತಂತ್ರಗಾರಿಕೆ ಮಾಡಿತ್ತು. ಯಡಿಯೂರಪ್ಪನನ್ನು ಕೆಣಕಿದ್ದಕ್ಕೆ ಲಿಂಗಾಯತರು ಮುನಿಸಿಕೊಂಡು ಕಾಂಗ್ರೆಸ್​ನತ್ತ ಹೋಗಿದ್ದಾರೆ ಎಂದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಯ್ತು. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗ್ತಿದ್ದಂತೆ ಲೋಕಸಭಾ ಚುನಾವಣೆ ತನಕ ಮಾತ್ರ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಯಡಿಯೂರಪ್ಪ ವಿರೋಧಿ ಬಣದ ನಾಯಕ ಬಸನಗೌಡ ಪಾಟೀಲ್​ ಯತ್ನಾಳ್ ಬಹಿರಂಗವಾಗಿಯೇ ಹೇಳಿದ್ರು. ಲೋಕಸಭಾ ಚುನಾವಣೆ ಮುಗಿದ ಬಳಿಕ ಎಲ್ಲವೂ ಬದಲಾಗಲಿದೆ

ADVERTISEMENT

ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಬಗ್ಗೆ ನಡೆದ ಪಾದಯಾತ್ರೆ ಡಿ.ಕೆ ಶಿವಕುಮಾರ್​ ಸೂಚನೆಯಂತೆ ನಡೆದಿದೆ ಎನ್ನುವ ಆರೋಪದ ನಡುವೆ ಬಂಡಾಯ ನಾಯಕರು ಸಭೆ ನಡೆಸಿದ್ದರು. ಸಭೆ ಬೆನ್ನಲ್ಲೇ ವಿಜಯೇಂದ್ರ ವಿರುದ್ಧ ಹೈಕಮಾಂಡ್​ ನಾಯಕರಿಗೆ ದೂರು ಸಲ್ಲಿಸಲಿದ್ದಾರೆ ಎನ್ನುವ ಮಾತುಗಳೂ ಕೇಳಿ ಬಂದವು. ಇನ್ನು ಶಿಕಾರಿಪುರದಲ್ಲಿ ಕಾಂಗ್ರೆಸ್​ ಭಿಕ್ಷೆಯಿಂದ ವಿಜಯೇಂದ್ರ ಗೆಲುವು ಪಡೆದಿದ್ದು ಎನ್ನುವ ಕಾಂಗ್ರೆಸ್​ ನಾಯಕರ ಮಾತುಗಳು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಈ ಎಲ್ಲಾ ಚರ್ಚೆಗಳ ನಡುವೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೊತೆಗೆ ಆಗಸ್ಟ್​ 14ರಂದು ಮಹತ್ವದ ಸಭೆ ನಡೆದಿತ್ತು. ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸಭೆ ಬೆನ್ನಲ್ಲೇ ವಿಜಯೇಂದ್ರ ಶಿಕಾರಿಪುರಕ್ಕೆ ತೆರಳಿದ್ದರು.

ಸಾಮಾನ್ಯವಾಗಿ ರಾಜ್ಯಾಧ್ಯಕ್ಷರಾದವರು ರಾಜ್ಯ ಮಟ್ಟದ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ಮಾಡುವುದು ಸಾಮಾನ್ಯ ವಿಚಾರ. ಆದರೆ ರಾಜ್ಯ ಬಿಜೆಪಿ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮಾಡಿರುವುದು, ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್. ಬಿಜೆಪಿ ಕಚೇರಿಯಲ್ಲಿ ಮುಖಂಡರ ಜೊತೆ ಧ್ವಜಾರೋಹಣ ನೆರವೇರಿಸಿದ್ದಾರೆ. ಸಂಸದ ಪಿ.ಸಿ ಮೋಹನ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್​ ಸದಸ್ಯರಾದ ರವಿಕುಮಾರ್, ಭಾರತಿ ಶೆಟ್ಟಿ, ಮಾಜಿ ಸಂಸದ ಭಗವಂತ ಖೂಬಾ ಉಪಸ್ಥಿತರಿದ್ದರು. ಆದರೆ ವಿಜಯೇಂದ್ರ ಅಂಡ್​ ಟೀಂ ಬಿಜೆಪಿ ಕಚೇರಿಯತ್ತ ಸುಳಿಯಲಿಲ್ಲ. ಇದು ಅಧಿಕಾರ ಕಸಿಯುವ ಮೊದಲ ಹೆಜ್ಜೆ ಎನ್ನುವಂತೆ ಭಾಸವಾಯ್ತು.

ವಿಜಯೇಂದ್ರ ನಡೆದುಕೊಳ್ತಿರೋ ರೀತಿ ನೀತಿಗಳು ಮತ್ತೊಂದು ಬಣಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಹೊಂದಾಣಿಕೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಬಹುತೇಕ ನಾಯಕರು ಯಡಿಯೂರಪ್ಪ ಹಾಗು ವಿಜಯೇಂದ್ರ ವಿರುದ್ಧವಾಗಿ ಮಾತನಾಡಿದ್ದಾರೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ವಿಜಯೇಂದ್ರ ಬದಲಾವಣೆ ಕಾರ್ಯ ನಡೆಯುತ್ತಾ..? ಎನ್ನುವ ಶಂಕೆ ಮೂಡಿಸಿದೆ. ಇನ್ನು ವಿಧಾನಸಭಾ ಚುನಾವಣೆ ಮೂರೂವರೆ ವರ್ಷಗಳಿದ್ದು, ಅಲ್ಲೀವರೆಗೂ ಪಕ್ಷದ ಚುಕ್ಕಾಣಿಯನ್ನು ಅನುಭವಿ ನಾಯಕರ ಕೈಗೆ ಕೊಟ್ಟು, ಎಲ್ಲರನ್ನೂ ಒಟ್ಟಿಗೆ ಕರೆಯೊಯ್ಯುವಂತೆ ಮಾಡುವ ಚರ್ಚೆಗಳು ನಡೆಯುತ್ತಿವೆ. ಆದರೆ ಯಡಿಯೂರಪ್ಪ ಬಳಿಕ ವಿಜಯೇಂದ್ರಗೂ ಅವಮಾನ ಎನ್ನುವ ಪುಕಾರು ಬಿಜೆಪಿ ಒಳಗೇ ಹಬ್ಬಿದ್ರೆ ಕೇಸರಿ ಪಡೆ ವಿರುದ್ಧ ಲಿಂಗಾಯತರು ಸಿಟ್ಟಿಗೇಳುವುದು ನಿಶ್ಚಿತ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿವಿಜಯೇಂದ್ರ
Previous Post

ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆ ಗೊಂದಲ.. ಏನು ಕಾರಣ..?

Next Post

ಕೇಂದ್ರದ ವಿರುದ್ಧ ಸಿಡಿಮಿಡಿ.. ಆತಂಕ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ..!

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
ಕೇಂದ್ರದ ವಿರುದ್ಧ ಸಿಡಿಮಿಡಿ.. ಆತಂಕ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ..!

ಕೇಂದ್ರದ ವಿರುದ್ಧ ಸಿಡಿಮಿಡಿ.. ಆತಂಕ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada