ದೇಶದಲ್ಲಿ ಕರೋನ ಎರಡನೇ ಅಲೆ ಎಲ್ಲೆಡೆ ಹರಡುತ್ತಿರುವ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಮತ್ತು ಅನೇಕ ರಾಜ್ಯದ ಶಾಸಕರು ಮತ್ತು ಸಚಿವರು ಕೇಂದ್ರ ಸರ್ಕಾರಕ್ಕೆ ತಮ್ಮ ಸಲಹೆ, ಅಗತ್ಯ ಲಸಿಕೆ ಬೇಡಿಕೆಯನ್ನು ಮುಂದಿಟ್ಟಿತ್ತು. ಇದನ್ನೇ ಇವತ್ತು ಗುರಿಯಾಗಿಸಿಕೊಂಡ ಪ್ರಧಾನಿ ಮೋದಿ ವಿರೋಧ ಪಕ್ಷಗಳು ‘ಲಸಿಕೆ ರಾಜಕೀಯ’ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಮಧ್ಯೆ, ಕೇಂದ್ರ ಸರ್ಕಾರದ ಮುಂದೆ ವಿಭಿನ್ನ ಸಲಹೆಗಳು ಬರಲಾರಂಭಿಸಿದವು, ವಿಭಿನ್ನ ಬೇಡಿಕೆಗಳು ಬರಲಾರಂಭಿಸಿದವು’ ಎಂದು ವಿವಿಧ ರಾಜ್ಯ ಸರ್ಕಾರಗಳು ಲಸಿಕೆ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸುವ ಬೇಡಿಕೆಗಳನ್ನು ಉಲ್ಲೇಖಿಸಿದ್ದರು ಎಂದು ಪ್ರಧಾನಿಯ ವಿರೋಧಿ ರಾಜ್ಯಗಳ ವಿರುದ್ಧ ಕಿಡಿಕಾರಿದ್ದಾರು.
ಆದರೆ ವಾಸ್ತವವೇ ಬೇರೆ ಇದೆ, ಕರೋನ ಎರಡನೇ ಅಲೆ ಬರುತ್ತಿದೆ ಹೆಚ್ಚರಿಕೆ ವಹಿಸಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೆಚ್ಚರಿಸಿ ಸಲಹೆ ನೀಡಿದ್ದರು ಅವರ ವಿರುದ್ಧವೇ ಅನೇಕ ಬಿಜೆಪಿಗರು ಟೀಕೆ ಮಾಡಿದ್ದರು. ಕರೋನ ಎರಡನೇ ಅಲೆ ಅಪ್ಪಳಿಸುವ ಮುಂಚೆ ಮತ್ತು ನಂತರ ಬಿಜೆಪಿಯೇತರ ಆಡಳಿತ ಇರುವ ರಾಜ್ಯದ ಅನೇಕ ಮುಖ್ಯ ಮಂತ್ರಿಗಳು, ಹಿರಿಯ ಮುಖಂಡರು, ಅನೇಕ ಪಕ್ಷದ ಶಾಸಕರು, ಸಚಿವರು, ಸಂಸದರು ಕೇಂದ್ರ ಸರ್ಕಾರಕ್ಕೆ ಕರೋನ ನಿಭಾಯಿಸುವ ಬಗ್ಗೆ, ಸಾಂಕ್ರಾಮಿಕ ನಿಭಾಯಿಸಲು ಅನೇಕ ಬೇಡಿಕೆಗಳು, ಲಸಿಕೆಯನ್ನು ಪೂರೈಸುವ ಬಗ್ಗೆ ಮತ್ತು ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಅನೇಕ ಸಮುದಾಯಗಳಿಗೆ, ಅಸಂಘಟಿತ ಕಾರ್ಮಿಕರು ಮತ್ತು ರೈತರ ಬಗ್ಗೆ ಗಮನ ಅರಿಸಿ ಎಂದು ರಾಜ್ಯದ ಮಾಜಿ ಪ್ರಧಾನಿ ದೇವೇಗೌಡರಿಂದ ಇಡಿದು ಮನಮೋಹನ್ ಸಿಂಗ್ ವರೆಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಕ್ಯಾರೆ ಅನ್ನದ ಪ್ರಧಾನ ಮಂತ್ರಿ ಮತ್ತವರ ಕಛೇರಿ ಸೈಲೆಂಟಾಗಿದ್ದು ಇವತ್ತು ದಿಢೀರನೇ ಸಲಹೆ ಮತ್ತವರ ಬೇಡಿಯನ್ನು “ಲಸಿಕ ರಾಜಕೀಯ” ಎಂದು ಹೇಳುತ್ತುರುವುದು ನೋಡಿದರೆ ನಿಜಕ್ಕೂ ಇದು ಒಕ್ಕೂಟ ಸರ್ಕಾರಕ್ಕೆ ಮಾಡುವ ಅಪಮಾನ ಅನ್ನಿಸಿಬಿಡುತ್ತದೆ.
ಲಕ್ಷಾಂತರ ಕೋಟಿ ಕೇಂದ್ರಕ್ಕೆ ತೆರಿಗೆ ಕಟ್ಟುವ ಒಕ್ಕೂಟ ರಾಜ್ಯಗಳು ತಮ್ಮ ತೆರಿಗೆ ಪಾಲು ಮತ್ತು ತಮ್ಮ ಬೇಡಿಕೆಯನ್ನು ಮುಂದಿಟ್ಟರೆ ರಾಜಕೀಯ ಅನ್ನುತ್ತಿರುವುದು ಯಾಕೆಂದು ಜನರು ಪ್ರಶ್ನಿಸುತ್ತಿದ್ದಾರೆ.
ರಾಜ್ಯದಲ್ಲೂ ಉಚಿತ ಲಸಿಕೆ ನೀಡುವಂತೆ ಒತ್ತಾಯ
ಸರ್ಕಾರದ ಉಚಿತ ಲಸಿಕೆ ನೀಡದೆ ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿ ಅಲ್ಲಿಯೂ ಲಸಿಕೆ ಹಾಕಿಸಿಕೊಳ್ಳಿ ಅಂತ ಹೇಳುತ್ತಿರುವುದನ್ನು ನೋಡಿದ ಕರ್ನಾಟಕ ಕಾಂಗ್ರೆಸ್ 100 ಕೋಟಿ ಹಣವನ್ನು ಎಲ್ಲಾ ಕಾಂಗ್ರೆಸ್ ಶಾಸಕ, ಸಂಸದರಿಂದ ತಲಾ ಒಂದು ಕೋಟಿ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಲು ಮುಂದಾಗಿತ್ತು. ತದನಂತರ ತಾವೇ ಪ್ರತ್ಯೇಕ ಉಚಿತ ಲಸಿಕೆ ಅಭಿಯಾನ ಶುರು ಮಾಡಿ, 100 ಕೋಟಿ ಯೋಜನೆಗೆ ಅನುಮತಿ ನೀಡಿ ಕರ್ನಾಟಕದ ಎಲ್ಲಾ ಕಡೆ ಉಚಿತ ಲಸಿಕೆ ವಿತರಣೆಯನ್ನು ಚುರುಕುಗೊಳಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡಿ ಇಲ್ಲ ಅಧಿಕಾರ ಬಿಡಿ ಎಂಬ ಅಭಿಯಾನವನ್ನು ಕರವೇ ರಾಜ್ಯಾದ್ಯಂತ ಪ್ರತಿಭಟನೆಯನ್ನು ಇದೆ 10ನೇ ತಾರೀಖು ಹಮ್ಮಿಕೊಂಡಿತ್ತು ಮತ್ತು ರಾಜ್ಯಾದ್ಯಂತ ಈ ಸುದ್ದಿ ವೈರಲ್ ಕೂಡ ಆಗಿತ್ತು. ಇದರ ಬೆನ್ನಲ್ಲೇ ಈಗ ನರೇಂದ್ರ ಮೋದಿ ಲಸಿಕೆ ವಿತರಣೆಯ ಎಲ್ಲಾ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ವಹಿಸಲಿದೆ ಎಂದು ಹೇಳಿದ್ದಾರೆ. ಕೇಂದ್ರ ಲಸಿಕೆ ಖರೀದಿ ಮಾಡಿ ಎಲ್ಲಾ ರಾಜ್ಯಗಳಿಗೆ ಉಚಿತ ಲಸಿಕೆ ಪೂರೈಕೆ ಮಾಡಲಿದೆ. ಮುಂದಿನ 2 ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ. ಶೇಕಡಾ 25 ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಇಚ್ಚಿಸುವವರು, ಕೇವಲ ಸರ್ವೀಸ್ ಚಾರ್ಜ್ 150 ರೂಪಾಯಿ ನೀಡಿ ಲಸಿಕೆ ಪಡೆಯಬಹುದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ರಾಜ್ಯ ಸರ್ಕಾರ ಸಮಾನ ಲಸಿಕೆ ವಿತರಣೆಯತ್ತ ಗಮನ ಹರಿಸಬೇಕಾಗಿದೆ.
ಈ ಕುರಿತು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಡಿಕೆ ಶಿವಕುಮಾರ್ ಅವರು, ಇಲ್ಲ’ ಎನ್ನುವುದಕ್ಕಿಂತ ತಡವಾಗಿ ಆದರೂ ಒಳ್ಳೆಯದೆ. ಕೇಂದ್ರ ಸರ್ಕಾರ ಲಸಿಕೆಯ ಜವಾಬ್ದಾರಿ ಹೊತ್ತಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಒತ್ತಾಯಿಸಿದ ಮಾನ್ಯ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಲಸಿಕೆಗಳ ಸಮಾನ ವಿತರಣೆಯ ಕುರಿತು ಕರ್ನಾಟಕ ಸರ್ಕಾರ ಗಮನ ಹರಿಸಬೇಕಿದೆ ಎಂದು ಹೆಚ್ಚರಿಸಿದ್ದಾರೆ.