ಯಡಿಯೂರಪ್ಪ ಜನರ ಸೇವೆ ಮಾಡುತ್ತಿಲ್ಲ, ಮಗನ ಸೇವೆ ಮಾಡುತ್ತಿದ್ದಾರೆ –ನಿರ್ದೇಶಕ ಗುರುಪ್ರಸಾದ್

ಯಡಿಯೂರಪ್ಪ ರಾಜೀನಾಮೆ ವಿಚಾರ ಹಾಗು ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಹಿನ್ನೆಲೆ, ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್‌  ಸಿಎಂ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯವರು ಜನರ ಸೇವೆ ಮಾಡುತ್ತಿಲ್ಲ ಬದಲಾಗಿ ಅವರ ಮಗನ ಸೇವೆ ಮಾಡುತ್ತಿದ್ದಾರೆ. ವೋಟ್‌ ಹಾಕಿದ ನಮಗೆ ಬೆಲೆಯೇ ಇಲ್ವಾ? ನಾವು ಮೋದಿ ಮುಖ ನೋಡಿ ವೋಟ್‌ ಹಾಕಿದ್ದು, ರಾಜ್ಯದಲ್ಲಿ ಕೋವಿಡ್‌ಗೆ  29  ಸಾವಿರ ಜನ ಸತ್ತಿದ್ದಾರೆ.  ಅವರೆಲ್ಲರಿಗೂ ಒಂದು ಕೋಟಿ ರೂ ನೀಡಿ. ಸರಿಯಾದ ವೈದ್ಯಕೀಯ ವ್ಯವಸ್ಥೆ ಮಾಡದೇ ಅಷ್ಟೊಂದು ಕನ್ನಡಿಗರನ್ನು ಸಾಯಿಸಿ ಬಿಟ್ಟಿದ್ದೀರಲ್ಲಾ, ಆ ಪಶ್ಚತಾಪ ನಿಮಗೆ ಕಾಡುತ್ತಿಲ್ವಾ..?  ಎಂದು ಪ್ರಶ್ನಿಸಿದ ಅವರು ನಿಮ್ಮ ಆಸ್ತಿಯ ಲೆಕ್ಕ ಕೊಡಿ,  ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನಾನು ಕೋರ್ಟ್‌ನಲ್ಲಿ ಪ್ರೋವ್‌ ಮಾಡ್ತೀನಿ ನನಗೆ ತಲೆಯಿದೆ ಎಂದು ಸರ್ಕಾರಕ್ಕೆ ಚಾಟೀ ಬೀಸಿದ್ದಾರೆ.

75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅಧಿಕಾರ ವಹಿಸಿಕೊಳ್ಳಲು ಅವಕಾಶ ಕೊಡಲ್ಲಾ ಅಂತಾರೆ, ಯಡಿಯೂರಪ್ಪ ಅವರನ್ನು ಹೇಗೆ ಒಪ್ಪಿಕೊಂಡಿದ್ದಾರೊ ಗೊತ್ತಿಲ್ಲ,  ಯಡಿಯೂರಪ್ಪ ಹೈಕಮಾಂಡ್‌ ಅಂತಾರೆ, ನಿಮಗೆ ಕನ್ನಡಿಗರೆ ಹೈಕಮಾಂಡ್‌, ದುಡ್ಡು ಮಾಡಿದ್ದೀರಲ್ವಾ..! ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ವಿಜೇಂದ್ರ ಅಪ್ಪನನ್ನು ಚನ್ನಾಗಿ ನೋಡಿಕೊ..ನೂರು ವರ್ಷ ಬದುಕಲಿ ಎಂದು ವ್ಯಂಗ್ಯ ಮಾಡಿದ್ದಾರೆ.

  ಈ ರೀತಿ ಮಾತಾಡೋಕೆ ನನ್ಗೆ ಯಾರೂ ಹಣಕೊಟ್ಟಿಲ್ಲ,  ನನಗೆ ರಾಜಕೀಯದವರೆಂದರೆ ಆಗಲ್ಲ, ಆಡಳಿತ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷದವರು ಸರಿಯಾಗಿ ಕೆಲಸ ಮಾಡ್ತಿಲ್ಲ, ಜನರ ಆರೋಗ್ಯ ಕಾಪಾಡುವ ಸಲುವಾಗಿ ಹಣವ್ಯಹಿಸುವ ಬದಲು, ಅಗತ್ಯವಿಲ್ಲದ ಕೆಲಸಕ್ಕೆ ಜನರ ತೆರಿಗೆ ಹಣವನ್ನು ವ್ಯಹಿಸಿದ್ದಾರೆ. ಕೋವಿಡ್‌ನಿಂದಾದ ಸಾವಿಗೆ ಸರ್ಕಾರವೇ ಕಾರಣ ಎಂದು ಹರಿಹಾಯ್ದಿದ್ದಾರೆ.

ಸಂಸ್ಕಾರ ಹೀನಾ, ಭ್ರಷ್ಟಾಚಾರಿ ರಾಜಕರಣಿಗಳ  ಯುಗ ಮುಗಿಯುತ್ತಿದೆ ಅದು ಪೂರ್ಣ ಕೊನೆಗೊಳ್ಳಬೇಕೆಂದರೆ ನೂರು ವರ್ಷ ಬೇಕು. ಈಗ ಬೀಜ ಹಾಕಲಾಗುತ್ತಿದೆ. ಸರ್ಕಾರದ ಸೇವೆಯೆಂದರೆ ಪ್ರತಿಯೊಬ್ಬರ ಜೀವನ ಕಾಪಾಡುವುದು, ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕರಣಿಗಳು ವಾದ ವಿವಾದ  ಮಾಡುವುದನ್ನು  ಬಿಟ್ಟು ಕೋವಿಡ್‌ ವಿರುದ್ಧ ದೈರ್ಯದಿಂದ ಹೋರಾಡ ಬೇಕು. ಅದು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಈ ರಾಜಕರಣಿಗಳೆಲ್ಲ ದುಡ್ಡು ಮಾಡೋಕೆ ಬರುವುದು, ಮುಂದಿನ ಪೀಳಿಗೆ ತುಂಬಾ ಪ್ರಾಮಾಣಿಕವಾಗಿದೆ. ಪ್ರಶ್ನೆ ಮಾಡ್ತಾರೆ ಅವಾಗ ಸಂಸ್ಕಾರ ಹೀನ ರಾಜಕರಣ, ರಾಜಕರಣಿಗಳು ಉಳಿಯಲ್ಲ ಎಂದಿದ್ದಾರೆ. ಕಳೆದ ಏಪ್ರಿಲ್‌ನಲ್ಲೂ ಇದೇ ರೀತಿಯ ವೀಡಿಯೋ ಹರಿಬಿಟ್ಟಿದ್ದರು. ನನಗೆ ಕರೋನಾ ಬಂದಿದೆ ನಾನು ಸತ್ತರೆ ಅದಕ್ಕೆ ರಾಜಕರಣಿಗಳು ಹೊಣೆ ಎಂದಿದ್ದರು.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...