ಚಾಮರಾಜನಗರ : ವರುಣದಲ್ಲಿ ಹೆಚ್ಚೇನು ಪ್ರಚಾರ ಮಾಡಲ್ಲ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ತವರಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡ್ತಿದ್ದಾರೆ. ಈ ವಿಚಾರವಾಗಿ ಇಂದು ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರಚಾರ ಮಾಡೋದು ಅವರ ಕರ್ತವ್ಯ. ನಾನ್ಯಾಕೆ ಅದನ್ನು ಪ್ರಶ್ನಿಸಲಿ ಎಂದಿದ್ದಾರೆ.

ನಾನು ಭೂತವೂ ಅಲ್ಲ, ಪಿಶಾಚಿಯೂ ಅಲ್ಲ, ನಾನೊಬ್ಬ ಮನುಷ್ಯ. ಸಿದ್ದರಾಮಯ್ಯ ನನಗಿಂತ ದೊಡ್ಡ ನಾಯಕ, ಅವರು ಪ್ರಚಾರಕ್ಕೆ ಎಷ್ಟು ಬಾರಿ ಬೇಕಿದ್ದರೂ ವರುಣಕ್ಕೆ ಬರಲಿ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಲಿಂಗಾಯತ ಡ್ಯಾಂ ಒಡೆದಿದೆ ಎಂಬ ಡಿಕೆಶಿ ಆರೋಪದ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ಇತಿಹಾಸ ಏನು ಅನ್ನೋದನ್ನು ಕಾಂಗ್ರೆಸ್ ಮೊದಲು ತಿಳಿದುಕೊರ್ಳಳಿ. ಸುಮ್ಮನೇ ಲಿಂಗಾಯಿತರನ್ನು ವಿಭಜನೆ ಮಾಡಲು ಹೋಗಬೇಡಿ ಎಂದಿದ್ದಾರೆ.