ಅಡುಗೆ ವಿಚಾರ ಬಂದಾಗ ಅಡುಗೆ ಮಾಡಲು ವಿಧವಿಧವಾದ ಎಣ್ಣೆಗಳನ್ನ ಬಳಸ್ತಾರೆ. ಕೆಲವರು ಕಡಲೆ ಬೀಚದ ಎಣ್ಣೆಯನ್ನು ಬಳಸಿದರೆ, ಕೆಲವರು ಸೂರ್ಯಕಾಂತಿ ಹೂವಿನ ಬೀಜದ ಎಣ್ಣೆ, ಕೋಸ್ಟಲ್ ರೀಜನ್ ನಲ್ಲಿ ತೆಂಗಿನ ಎಣ್ಣೆಯ ಬಳಕೆ ಜಾಸ್ತಿ ,ಕೊಬ್ಬರಿ ಎಣ್ಣೆ ಬಿಟ್ಟು ಬೇರೆ ಯಾವ ಎಣ್ಣೆಯನ್ನು ಅಡುಗೆಗೆ ಬಳಸುವುದಿಲ್ಲ.

ಆಲಿವ್ ಆಯಿಲ್ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹೆಚ್ಚಾಗಿ ಆಲಿವ್ ಆಯಿಲ್ ತ್ವಚೆಗೆ ಬಳಸುತ್ತಾರೆ. ಪ್ರತಿದಿನ ಆಲಿವ್ ಆಯಿಲ್ ಅನ್ನ ತ್ವಚೆಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಸ್ನಾನ ಮಾಡುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತದೆ.

ಇದೆಲ್ಲವೂ ಸರಿ ಆಲಿವ್ ಆಯಿಲ್ ನ ಅಡುಗೆಗೂ ಉಪಯೋಗಿಸುತ್ತಾರೆ.ಅಡುಗೆ ಈ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ಎನ್ನುವ ಮಾಹಿತಿ ಹೀಗಿದೆ..
ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ:
ಆಲಿವ್ ಆಯಿಲ್ ಬಳಸಿ ತಯಾರಿಸಿದ ಅಡುಗೆಯನ್ನು ಸೇವಿಸುವುದರಿಂದ ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಹಾಗೂ ಕೆಲವರಿಗೆ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುತ್ತದೆ ಇದನ್ನು ನಿವಾರಣೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಒದಗಿಸುತ್ತದೆ. ಬ್ಲಡ್ ಕ್ಲಾಟ್ ನಿವಾರಣೆ ಮಾಡುತ್ತದೆ ಹಾಗೂ ಬಿಪಿಯನ್ನ ಮ್ಯಾನೇಜ್ ಮಾಡೋದಕ್ಕೂ ಕೂಡ ತುಂಬಾನೇ ಸಹಾಯಕಾರಿ.

ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿ
ಆಲಿವ್ ಆಯಿಲ್ ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ಕ್ಯಾನ್ಸರ್ ಸೆಲ್ಸ್ ವಿರುದ್ಧ ಹೋರಾಡುತ್ತದೆ, ದೇಹದಲ್ಲಿ ಗೆದ್ದೆಯ ಬೆಳವಣಿಗೆಯನ್ನು ತಡೆಯಲು ಕೂಡ ತುಂಬಾನೇ ಉಪಯುಕ್ತ.
ಜೀರ್ಣಾಂಗದ ಆರೋಗ್ಯ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮುಖ್ಯವಾಗಿ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಐಬಿಎಸ್ ಲಕ್ಷಣಗಳನ್ನು ನಿವಾರಿಸುತ್ತದೆ ಹಾಗೂ ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯ
ಹೆಚ್ಚು ಜನ ಆಲಿವ್ ಆಯಿಲ್ ಅನ್ನ ತ್ವಚೆಗೆ ಹಾಗೂ ಕೂದಲಿಗೆ ಹಚ್ಚುತ್ತಾರೆ. ಆದರೆ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ, ಚರ್ಮವನ್ನು ಮಾಯ್ಶ್ಚರೈಸ್ ಮಾಡುತ್ತದೆ ಮತ್ತು ಹಾನಿಯಿಂದ ರಕ್ಷಿಸುತ್ತದೆ. ಕೂದಲನ್ನು ಹೈಡ್ರೇಟ್ ಆಗಿಡುತ್ತದೆ ಮತ್ತು ಸುಕ್ಕುಗಳನ್ನ ಕಡಿಮೆ ಮಾಡಲು ಸಹಾಯಕಾರಿ ಹಾಗೂ ಸನ್ ಟಾನ್ ತಕ್ಷಣಕ್ಕೆ ನಿವಾರಣೆ ಮಾಡುತ್ತದೆ.

ರೋಗನಿರೋಧಕ ಶಕ್ತಿ
ಆಲಿವ್ ಆಯಿಲ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಆಂಟಿ ಆಕ್ಸಿಡೆಂಟ್ಸ್ ಅಂಶ ಹೆಚ್ಚಿರುವುದರಿಂದ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ, ಹಾಗೂ ದೇಹದಲ್ಲಿ ಇನ್ಫೆಕ್ಷನ್ಗಳನ್ನ ಕಡಿಮೆ ಮಾಡಿ ಆರೋಗ್ಯವಾಗಿಡಲು ತುಂಬಾನೇ ಸಹಾಯಕಾರಿಯಾಗಿದೆ.