• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

‘#UPSCInKannadaʼ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನಕ್ಕೆ ವ್ಯಾಪಕ ಸ್ಪಂದನೆ

ಪ್ರತಿಧ್ವನಿ by ಪ್ರತಿಧ್ವನಿ
October 10, 2021
in ಕರ್ನಾಟಕ
0
‘#UPSCInKannadaʼ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನಕ್ಕೆ ವ್ಯಾಪಕ ಸ್ಪಂದನೆ
Share on WhatsAppShare on FacebookShare on Telegram

ಯುಪಿಎಸ್ಸಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಭಾನುವಾರ ಟ್ವಿಟರ್ ಅಭಿಯಾನ ಕೈಗೊಂಡಿದ್ದು ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.

ADVERTISEMENT

#ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್ನಲ್ಲಿ ಭಾನುವಾರ ಬೆಳಗ್ಗೆ 10.10 ಗಂಟೆಯಿಂದ ಟ್ವಿಟರ್ ಅಭಿಯಾನ ಆರಂಭವಾಗಿ. ಇದರ ಜೊತೆಗೆ ವಿಚಾರ ಸಂಕಿರಣ, ಚಿತ್ರ- ಪತ್ರ ಚಳವಳಿಗಳನ್ನೂ ಸಂಘಟನೆ ಹಮ್ಮಿಕೊಂಡಿತ್ತು.

ಸಾವಿರಾರು ಜನರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಅಭಿಯಾನವನ್ನು ಇನ್ನು ಹೆಚ್ಚು ಕೈ ಜೋಡಿಸಿ ಎಂದು ಕನ್ನಡ ಮನಸ್ಸುಗಳು ಮನವಿ ಮಾಡಿ. #ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಲು ಕರವೇ ತಿಳಿಸಿದ್ದೆ ತಡ ಟ್ವೀಟರ್‌ ನಲ್ಲಿ ಟ್ರೆಂಡ್‌ ಆಗಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಯುಪಿಎಸ್ ಸಿ ಪರೀಕ್ಷೆಗಳ ಎಲ್ಲ ಹಂತಗಳಲ್ಲೂ ಕನ್ನಡದಲ್ಲೂ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು, ಕನ್ನಡದಲ್ಲೂ ಉತ್ತರ ಬರೆಯುವ ಅವಕಾಶ ಇರಬೇಕು. ಇದು ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯ. ಭಾರತ ಒಕ್ಕೂಟ ಸರ್ಕಾರ ಈ ಕೂಡಲೇ ಪರೀಕ್ಷಾ‌ ವಿಧಾನ ಬದಲಿಸಿ,‌ ಕನ್ನಡ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದಿದ್ದಾರೆ.

ಬ್ರಿಟಿಷರ ಕಾಲದ ಸಾಮ್ರಾಜ್ಯಶಾಹಿ ನೀತಿಗಳನ್ನೇ ಭಾರತ ಒಕ್ಕೂಟ ಸರ್ಕಾರ ಈಗಲೂ ಮುಂದುವರೆಸುತ್ತಿದೆ. ಇದರಿಂದಾಗಿ ಭಾರತದ ಹಿಂದಿಯೇತರ ಭಾಷಾ ಸಮುದಾಯಗಳು ಎರಡನೇ ದರ್ಜೆ ಪ್ರಜೆಗಳಂತೆ ಬದುಕುವಂತಾಗಿದೆ. ಹಿಂದೆ ನಾವು ಬ್ರಿಟಿಷರ ಗುಲಾಮರಾಗಿದ್ದೆವು. ಈಗ ಬ್ರಿಟಿಷರ ಜಾಗದಲ್ಲಿ ಹಿಂದಿ ಸಾಮ್ರಾಜ್ಯಶಾಹಿಗಳು ಕುಳಿತಿದ್ದಾರೆ.

ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಹಿಂದಿ ಭಾಷಿಕರಿಗೆ ಎಷ್ಟು ಹಕ್ಕಿದೆಯೋ ಕನ್ನಡ, ತಮಿಳು, ತೆಲುಗು, ಬಂಗಾಳಿ, ಮಲಯಾಳಂ, ಪಂಜಾಬಿ, ಒರಿಯಾ, ಮರಾಠಿ, ಕಾಶ್ಮೀರಿ, ಅಸ್ಸಾಮಿ ಇತ್ಯಾದಿ ಭಾಷಿಕರಿಗೂ ಅಷ್ಟೇ ಹಕ್ಕಿದೆ. ಹೀಗಿರುವಾಗ ಹಿಂದಿಯನ್ನರಿಗೆ ಮಾತ್ರ ಅವರ ನುಡಿಯಲ್ಲಿ ಪರೀಕ್ಷೆ ಬರೆಸುವ ಮೋಸ ಯಾಕೆ? ಎಂದು ಪ್ರಶ್ನಿಸಿದ್ದರು.

ಸಂವಿಧಾನದ ಹದಿನಾಲ್ಕನೇ ಪರಿಚ್ಛೇದದ ಪ್ರಕಾರ ಭಾರತದ ಎಲ್ಲ ನಾಗರಿಕರೂ ಸಮಾನರು. ಆದರೆ ಹಿಂದಿ ಭಾಷಿಕ ಸಮುದಾಯಕ್ಕೆ ಎಲ್ಲ‌ ಅವಕಾಶಗಳನ್ನು ನೀಡಿ, ಇತರ ಭಾಷಿಕರ ಹಕ್ಕುಗಳನ್ನು ಕಿತ್ತುಕೊಂಡರೆ ಸಮಾನತೆ ಇರಲು ಸಾಧ್ಯವೇ? ಇದು ಯಾವ ರೀತಿಯ ಸಮಾನತೆ? ಇದನ್ನು ಹಿಂದಿಯೇತರ ಜನಸಮುದಾಯಗಳು ಕೇಳುತ್ತಿದ್ದೇವೆ.

ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯೂ ಇಲ್ಲ, ಕನ್ನಡದಲ್ಲಿ ಬರೆಯುವ ಅವಕಾಶವೂ ಇಲ್ಲ. ಪ್ರಿಲಿಮ್ಸ್ ಆದರಷ್ಟೇ ಮುಖ್ಯ ಪರೀಕ್ಷೆ ಬರೆಯುವ ಅವಕಾಶ. ಅಲ್ಲೂ ಸಹ ಪ್ರಶ್ನೆ ಪತ್ರಿಕೆ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತದೆ. ಇದು ಕನ್ನಡಿಗರ ಹಕ್ಕುಗಳನ್ನು ಮೊಟಕುಗೊಳಿಸಿದಂತಲ್ಲವೇ?

ಯುಪಿಎಸ್ ಸಿ ಪರೀಕ್ಷೆಗಳ ಎಲ್ಲ ಹಂತಗಳಲ್ಲೂ ಕನ್ನಡದಲ್ಲೂ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು, ಕನ್ನಡದಲ್ಲೂ ಉತ್ತರ ಬರೆಯುವ ಅವಕಾಶ ಇರಬೇಕು. ಇದು ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯ. ಭಾರತ ಒಕ್ಕೂಟ ಸರ್ಕಾರ ಈ ಕೂಡಲೇ ಪರೀಕ್ಷಾ‌ ವಿಧಾನ ಬದಲಿಸಿ,‌ ಕನ್ನಡ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. #UPSCInKannada #ಕನ್ನಡದಲ್ಲಿUPSC

— ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) October 10, 2021

ಪ್ರತಿ ವರ್ಷ ಸಾವಿರಾರು ಮಂದಿ ಕನ್ನಡದ ಮಕ್ಕಳು ಕೆಪಿಎಸ್ ಸಿ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುತ್ತಾರೆ. ಇವರಿಗೆ ಯುಪಿಎಸ್ ಸಿ ಪರೀಕ್ಷೆ ಕನ್ನಡದಲ್ಲೇ ಬರೆಯಲು ಅವಕಾಶ ಇಲ್ಲ. ಇದರ ಅರ್ಥ ಕನ್ನಡಿಗರನ್ನು ಒಕ್ಕೂಟ ಸರ್ಕಾರ ಎರಡನೇ ದರ್ಜೆ ಪ್ರಜೆಗಳಂತೆ ನೋಡುತ್ತಿದೆ ಎಂದಾಗುವುದಿಲ್ಲವೇ? ಈ ಅನ್ಯಾಯ ಇನ್ನೆಷ್ಟು ದಿನ ಸಹಿಸುವುದು?

ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡಿಗರ ಚಳವಳಿಯ ಹಿನ್ನೆಲೆಯಲ್ಲಿ ಐಬಿಪಿಎಸ್ ಪರೀಕ್ಷೆಗಳಲ್ಲಿ ಕ್ಲರಿಕಲ್ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ದೊರೆತಿದೆ. ಆದರೆ ವ್ಯವಸ್ಥಾಪಕರ ಹುದ್ದೆಗಳಿಗೆ ಈಗಲೂ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಇಲ್ಲ. ಆದರೆ ಹಿಂದಿ ಭಾಷಿಕರು ಎಲ್ಲ ಪರೀಕ್ಷೆಗಳನ್ನು ಹಿಂದಿಯಲ್ಲೇ ಬರೆಯುತ್ತಾರೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಸೇನಾ ನೇಮಕಾತಿಗಳ ಎಲ್ಲ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಸ್ಥಾನವೇ ಇಲ್ಲ. ಎಲ್ಲ ಪರೀಕ್ಷೆಗಳೂ ಹಿಂದಿ, ಇಂಗ್ಲಿಷ್ ಗಳಲ್ಲೇ ನಡೆಯುತ್ತವೆ. ಇದರ ಉದ್ದೇಶವದರೂ ಏನು? ಕನ್ನಡಿಗರಿಗೆ ಉದ್ಯೋಗ ನಿರಾಕರಣೆಯ ಹಿಂದಿನ ಕುತಂತ್ರವಾದರೂ ಯಾಕೆ?

ರೈಲ್ವೆಯಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪರೀಕ್ಷೆ ನಡೆಸಲಾಗುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಕ್ರಾಂತಿಕಾರಿ ಹೋರಾಟದಿಂದಾಗಿ ಈಗ ಕನ್ನಡದಲ್ಲೂ ಪರೀಕ್ಷೆ ಬರೆಯುವ ಅವಕಾಶವಿದೆ. ಆದರೆ ಅಲ್ಲೂ ಸಹ ಮೇಲಿನ ಹಂತದ ಹುದ್ದೆಗಳ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅವಕಾಶವಿಲ್ಲ.

ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವಿಲ್ಲದಂತಾಗಿರುವಾಗ ಯುಪಿಎಸ್ ಸಿ ಪರೀಕ್ಷೆಗಳೇ ಯಾಕೆ ಬೇಕು ಎಂದು ನಾವು ಕೇಳಬೇಕಾಗುತ್ತೆ. ನಮ್ಮ ರಾಜ್ಯದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೆಪಿಎಸ್ ಸಿ ಮೂಲಕವೇ ನೇಮಕ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸುವ ಕಾಲ ಬಂದಿದೆ.

ಭಾರತ ಒಕ್ಕೂಟದಲ್ಲಿ ಗೌರವದ ಸ್ಥಾನ ಪಡೆಯಬೇಕಿದ್ದ ಕನ್ನಡಿಗರನ್ನು ತಮ್ಮ ಹಕ್ಕುಗಳಿಗಾಗಿ ಅಂಗಲಾಚುವ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ. ಒಕ್ಕೂಟದ ರಾಜ್ಯಗಳ ಪೈಕಿ ಅತಿಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯ ಕರ್ನಾಟಕ. ಆದರೂ ನಮ್ಮ ಮೇಲೆ ಈ ದೌರ್ಜನ್ಯಗಳು ನಡೆಯುತ್ತಲೇ ಇವೆ.

ಯುಪಿಎಸ್ ಸಿ ಮಾತ್ರವಲ್ಲ, ಒಕ್ಕೂಟ ಸರ್ಕಾರದ ಅಡಿಯಲ್ಲಿ ನಡೆಯುವ ಎಲ್ಲ ಉದ್ಯೋಗಗಳ ಎಲ್ಲ ಹಂತದ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಇದು ನಮ್ಮ ಸಂವಿಧಾನಬದ್ಧ ಹಕ್ಕು. ಇದನ್ನು ನಿರಾಕರಿಸುವ ಯಾವುದೇ ಶಕ್ತಿಗಳ ವಿರುದ್ಧ ಕರ್ನಾಟಕ ರಕ್ಷಣಾ‌ ವೇದಿಕೆ ಹೋರಾಟ ಮುಂದುವರೆಸಲಿದೆ. #UPSCInKannada #ಕನ್ನಡದಲ್ಲಿUPSC

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಕುರಿತು ಜನರ ಅಭಿಪ್ರಾಯ ಹೀಗಿದೆ

https://twitter.com/imrankhanyermal/status/1447067819003322370?s=20

@mkstalin@KanimozhiDMK
There was a campiagn organised to demand UPSC exams in Kannada. Currently, there are 3 levels in UPSC exams.

Preliminary exam-(multiple choice questions) questions will be only in Hindi/English

Continue… . #ಕನ್ನಡದಲ್ಲಿUPSC#UPSCInKannada

— ಅರುಣ್ ಜಾವಗಲ್ | Arun Javgal (@ajavgal) October 10, 2021
https://twitter.com/vasantshetty81/status/1447066345854550021?s=20

I fully support #UPSCInKannada #ಕನ್ನಡದಲ್ಲಿUPSC campaign. @PMOIndia should understand and respect the aspirations of Kannadigas. UPSC must conduct prelims in Kannada too.

— Harshakumar Kugwe (@hk81) October 10, 2021

#UPSCInKannada

Further Shows how Union Govt is Not Supporting GROWTH OF NATIVE LANGUAGES OF INDIA. https://t.co/YixzhjjVhV

— Kannadiga 💛❤️ (@I_am_KANNADIGA) October 10, 2021

The British held Administrative exams in English because those clearing it were serving the British, by keeping administrative exams in English and Hindi only, the union government is showing whom it intends to serve. We need #UPSCInKannada #ಕನ್ನಡದಲ್ಲಿUPSC https://t.co/VTq0yTO7JU

— ಅಮೋಘವರ್ಷ (@nripatunga) October 10, 2021

Can @PMOIndia tell the people of India why students can take Union government exams in only English and Hindi .

Why not in Kannada, Tamil, Telugu, Bengali, Marathi etc? Are students of other states second class citizens?
#ServeInMyLanguage ||
#UPSCInKannada ||#ಕನ್ನಡದಲ್ಲಿUPSC pic.twitter.com/BlWvW0W4en

— Deepak Gowda (@DeepakGowda__) October 10, 2021
Tags: BJPCongress PartyCovid 19UPSCInKannadaಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮಾಗಡಿಯ “ಲಿಂಕ್ ಕೆನಾಲ್” ಯೋಜನೆ: ಮರು ಮುಂಜೂರಾತಿಗೆ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಮನವಿ

Next Post

ಮಂಗಳೂರಿನ ಕಾಲೇಜೊಂದರ ಪಾರ್ಕೊಂದಕ್ಕೆ ಸ್ಟಾನ್ ಸ್ವಾಮಿ ಹೆಸರಿನಲ್ಲಿ ನಾಮಕರಣ ಮಾಡುವ ಯೋಚನೆ : ಬಲಪಂಥೀಯ ಗುಂಪುಗಳ ವಿರೋಧ

Related Posts

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?
Top Story

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

by ಪ್ರತಿಧ್ವನಿ
May 12, 2026
0

ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ...

Read moreDetails
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
Next Post
ಮಂಗಳೂರಿನ ಕಾಲೇಜೊಂದರ ಪಾರ್ಕೊಂದಕ್ಕೆ ಸ್ಟಾನ್ ಸ್ವಾಮಿ  ಹೆಸರಿನಲ್ಲಿ ನಾಮಕರಣ ಮಾಡುವ ಯೋಚನೆ : ಬಲಪಂಥೀಯ ಗುಂಪುಗಳ ವಿರೋಧ

ಮಂಗಳೂರಿನ ಕಾಲೇಜೊಂದರ ಪಾರ್ಕೊಂದಕ್ಕೆ ಸ್ಟಾನ್ ಸ್ವಾಮಿ ಹೆಸರಿನಲ್ಲಿ ನಾಮಕರಣ ಮಾಡುವ ಯೋಚನೆ : ಬಲಪಂಥೀಯ ಗುಂಪುಗಳ ವಿರೋಧ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada