
ಬೆಳಗಾವಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಸಭೆಗೆ ಬರುವಂತೆ ರೆಬೆಲ್ ಶಾಸಕರಿಗೆ ಆರ್ ಅಶೋಕ್ ಆಹ್ವಾನ ಕೊಟ್ಟಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿಗೆ ಆಹ್ವಾನ ನೀಡಿದರೂ ಸಭೆಗೆ ಬರುವುದಿಲ್ಲ ಎಂದಿದ್ದಾರೆ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ. ವಿಧಾನಸಭೆಯ ಲಾಂಜ್‌ನಲ್ಲಿ ತಮ್ಮ ಕೊಠಡಿಯಲ್ಲಿ ಯತ್ನಾಳ್ ಹಾಗೂ ರಮೇಶ್ ಕರೆದು ಮಾತಾಡಿದರೂ ಇಬ್ಬರು ನಾಯಕರು ಸಭೆಗೆ ಬಂದಿಲ್ಲ. ಅಲ್ಲದೇ ಸದನದಲ್ಲಿ ತಾವು ಎತ್ತುವ ವಿಷಯಗಳಿಗೆ ಸಹಕಾರ ಕೂಡುವಂತೆಯೂ ಮನವಿ ಮಾಡಿದ್ದಾರೆ ಆರ್ ಅಶೋಕ್.

ಪ್ರತಿಪಕ್ಷ ನಾಯಕ ಅಶೋಕ್ ಮೇಲೆ ರೆಬೆಲ್‌ಗಳು ಸಾಫ್ಟ್ ಕಾರ್ನರ್ ತೋರಿಸಿದ್ದು, ವಿಜಯೇಂದ್ರ ವಿರುದ್ಧ ಮುನಿಸು ಮುಂದುವರಿದಿದೆ. ವಿಧಾನಸಭೆಯ ಲಾಂಜ್‌ನಲ್ಲಿ ಎದುರು ಬದುರು ಆದರೂ ಯತ್ನಾಳ್ ಹಾಗೂ ವಿಜಯೇಂದ್ರ ಮಾತಾಡಿಲ್ಲ. ಅಶೋಕ್ ಇಲ್ಲದ ಸಮಯದಲ್ಲಿ ಅವರ ಕೊಠಡಿಯಲ್ಲಿ ಹೋಗಿ ಕೂತಿದ್ದ ಯತ್ನಾಳ್, ಅದೇ ವೇಳೆ ಅಲ್ಲಿಗೆ ಬಂದು ಎದುರಿಗೆ ವಿಜಯೇಂದ್ರ ಕಾಫಿ ಕುಡಿಯುತ್ತಾ ಕುಳಿತಿದ್ದರು. ವಿಜಯೇಂದ್ರ ಎದುರಿಗೆ ಕೂತಿದ್ರು ನೋಡಿದರೂ ನೋಡದೆಯೇ ಸಿಟ್ಟಿನಿಂದ ಹೊರಕ್ಕೆ ಹೋಗಿದ್ದಾರೆ ಯತ್ನಾಳ್. ಬೆಳಗ್ಗೆ ಇದೇ ಕೊಠಡಿಯಲ್ಲಿ ಯತ್ನಾಳ್ ಹಾಗೂ ರಮೇಶ್ ಜೊತೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಚರ್ಚಿಸಿದ್ದರು. ಪಕ್ಷದ ಕೆಲವು ಆಂತರಿಕ ವಿಷಯಗಳು ಹಾಗೂ ಸದನದಲ್ಲಿ ಒಟ್ಟಿಗೆ ಹೋರಾಟದ ಬಗ್ಗೆ ಚರ್ಚಿಸಿದ್ದರು
ಬೆಳಗಾವಿಯಲ್ಲಿ ಬಿಜೆಪಿ ಶಾಸಕಂಗ ಪಕ್ಷದ ಸಭೆ ಬಳಿಕ ಆರ್ ಅಶೋಕ ಪ್ರತಿಕ್ರಿಯೆ ನೀಡಿದ್ದು, ಒಂದು ಗಂಟೆವರೆಗೂ ಸಭೆ ಮಾಡಿದ್ದೇವೆ. ಬಿಜೆಪಿ ಶಾಸಕರು ವಿಧಾನಸಭೆ ಹಾಗು ವಿಧಾನ ಪರಿಷತ್‌ನಲ್ಲಿ ಏನ ಚರ್ಚೆ ಮಾಡಬೇಕು. ಅನುದಾನದ ತಾರತಮ್ಯ ಆಗತ್ತಿದೆ. ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡುತ್ತಿದ್ದಾರೆ, ಈ ಎಲ್ಲ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಪ್ರವಾಹ, ಆರೋಗ್ಯ, ರಸ್ತೆ, ಮೂಲ ಸೌಕರ್ಯದ ಬಗ್ಗೆ ಚರ್ಚೆ ಮಾಡುವುದರ ಬಗ್ಗೆ ಚರ್ಚೆ ಮಾಡಲಾಯಿತು. ಮಲೆನಾಡ ವಿಷಯದ ಬಗ್ಗೆ ಚರ್ಚೆ ಆಗುತಿಲ್ಲ, ಅದರ ಬಗ್ಗೆ ಕೂಡಾ ಸದನದಲ್ಲಿ ಮಾತಾಡಬೇಕು. ರಾಜ್ಯದಲ್ಲಿ ಅತಿ ಹೆಚ್ಚಾಗಿ ಭ್ರಷ್ಟಾಚಾರ ಆಗುತ್ತಿದೆ. ಈ ಎಲ್ಲ ವಿಚಾರದ ಬಗ್ಗೆ ಚರ್ಚೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ, ಉತ್ತರ ಕರ್ನಾಟಕ ಅಭಿವೃದ್ಧಿ, ನೀರಾವರಿ ಬಗ್ಗೆ ಚರ್ಚೆ ಆಗಬೇಕು ಎಂದಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಹಾಗು ರಮೇಶ್ ಜಾರಕಿಹೋಳಿ ಸಭೆಗೆ ಗೈರು ಹಾಜರಾದ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಯತ್ನಾಳ್ ಹಾಗೂ ರಮೇಶ ಜಾರಕಿಹೋಳಿ ಫೋನಿನಲ್ಲಿ ಮಾತಾಡಿದ್ದೇನೆ. ಅಧಿವೇಶನದಲ್ಲಿ ನಾವೆಲ್ಲ ಒಟ್ಟಾಗಿ ಇದ್ದೇವೆ. ನಾಳೆ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗುತ್ತೇವೆ. ಇದೊಂದು ತುಘಲಿಕ್ ಆಡಳಿತ, ಹೋರಾಟ ತಡೆಯುವ ಯತ್ನ ನಡೆದಿದೆ ಎಂದಿದ್ದಾರೆ ಆರ್ ಅಶೋಕ್. ಒಟ್ಟಾರೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಮಾಹಿತಿ ಬಹಿರಂಗ ಆಗಿದೆ.











