• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಉಕ್ರೇನ್ – ರಷ್ಯಾ ಸಂಘರ್ಷ (Russian Ukraine War) | ಕರ್ನಾಟಕದ ವಿದ್ಯಾರ್ಥಿಗಳ ಸಂಪರ್ಕಕ್ಕೆ ತುರ್ತು ಆಪರೇಷನ್ ಸೆಂಟರ್ ಕಾರ್ಯಾಚರಣೆ

ಕರ್ಣ by ಕರ್ಣ
February 25, 2022
in ಕರ್ನಾಟಕ, ದೇಶ, ವಿದೇಶ
0
ಉಕ್ರೇನ್ – ರಷ್ಯಾ ಸಂಘರ್ಷ (Russian Ukraine War) | ಕರ್ನಾಟಕದ ವಿದ್ಯಾರ್ಥಿಗಳ ಸಂಪರ್ಕಕ್ಕೆ ತುರ್ತು ಆಪರೇಷನ್ ಸೆಂಟರ್ ಕಾರ್ಯಾಚರಣೆ
Share on WhatsAppShare on FacebookShare on Telegram

ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು (Russian Ukraine War) ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಕ್ಷಣ‌ಕ್ಷಣಕ್ಕೂ ಬಾಂಬ್ ಸದ್ದು ಕೇಳಿಸುತ್ತಿವೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಉಕ್ರೇನ್ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎನ್ನಲಾಗಿದೆ. ಇದರ ನಡುವೆ ಭಾರತೀಯ ವಿದ್ಯಾರ್ಥಿಗಳು (indian students) ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಭಾರತೀಯ ವಿದ್ಯಾರ್ಥಿಗಳನ್ನು ವಾಪಾಸ್ ಕರೆತರಲು ಬೇಕಾದ ಚಿಂತನೆಗಳು ವಿದೇಶಾಂಗ ಸಚಿವಾಲಯ ನಡೆಸುತ್ತಿದೆ. ಇದರ ಜೊತೆಗೆ ಕರ್ನಾಟಕ ವಿದ್ಯಾರ್ಥಿಗಳು ಕೂಡ ಭಯದ ವಾತಾವರಣದಲ್ಲಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ (karnataka government) ತುರ್ತು ಆಪರೇಷನ್ ಸೆಂಟರ್ ತೆರೆದಿದ್ದು ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿ ವಿದೇಶಾಂಗ ಸಚಿವಾಲಯಕ್ಕೆ ರಚಾನಿಸುತ್ತಿದೆ.

ADVERTISEMENT

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಿದ ನಿರ್ದೇಶಕ ಮನೋಜ್ ರಾಜನ್ (manoj rajan)  ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಕಂದಾಯ ಇಲಾಖೆಯ (Revenue Department) ಕಚೇರಿಯಲ್ಲಿ ತುರ್ತು ಆಪರೇಷನ್ ಸೆಂಟರ್ ತೆರೆಯಲಾಗಿದೆ. ಉಕ್ರೇನ್ ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳ ಸುರಕ್ಷಿತೆಯ ನಿಟ್ಟಿನಲ್ಲಿ ಕೆಲಸಗಳು ಆರಂಭವಾಗಿದೆ. 

ಈವರೆಗೆ ತುರ್ತು ಆಪರೇಷನ್ ಸೆಂಟರ್ ನಲ್ಲಿ ಒಟ್ಟು 281 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಇರುವುದಾಗಿ ವರದಿಯಾಗಿದೆ. ಪೋಷಕರ ಹಾಗೂ ಸಂಬಂಧಪಟ್ಟವರಿಂದ ಬಂದ ಮಾಹಿತಿಯ ಆಧಾರದ ಮೇರೆಗೆ ಈ ವರದಿ ತಯಾರಿಸಲಾಗಿದೆ. ಈ ವರದಿಯನ್ನು ಈಗಾಗಲೇ ಸರ್ಕಾರದ ಒಪ್ಪಿಗೆ ಪಡೆದು ವಿದೇಶಾಂಗ ಸಚಿವಾಲಯಕ್ಕೆ ರವಾನಿಸಲಾಗಿದೆ. ಅಲ್ಲದೆ ಸುಗಮ ಸಂಪರ್ಕಕ್ಕೆ ರಾಜ್ಯ ಸರ್ಕಾರ ಒಂದು ಆ್ಯಪ್ ಹಾಗೂ ಜಾಲತಾಣವನ್ನು ಸಿದ್ಧಪಡಿಸಿದ್ದು, ಈ ಮೂಲಕ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಮಾಹಿತಿ ಹಂಚಿಕೊಂಡರೆ ಸಾಕು. ukraine.karnataka.tech ಎಂಬ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರು ಮಾಹಿತಿ ಲಗತ್ತಿಸಿದರೆ ಕೂಡಲೇ ತುರ್ತು ಆಪರೇಷನ್ ಸೆಂಟರ್ ಬೇಕಾದ ಕ್ರಮಗಳ ಭರವಸೆ ನೀಡಿದೆ. 

ಸುರಕ್ಷಿತೆ, ಆಹಾರ, ರಕ್ಷಣೆ ಹೀಗೆ ಮೂರು ವಿಭಾಗವನ್ನು ಮಾಡಿ ಈ ತುರ್ತು ಆಪರೇಷನ್ ಸೆಂಟರ್ ತಂಡ ಕೆಲಸ ಮಾಡಲಿದೆ. ಮೊದಲು ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಸುರಕ್ಷತೆಗೆ ಆಧ್ಯತೆ ಕೊಡಲಾಗಿದೆ. ಬಳಿಕ ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಎಂಬೆಸ್ಸಿ ಮೂಲಕ ತಲುಪಿಸುವ ಕೆಲಸ ನಡೆಯಲಿದೆ. ಅದಾದ ಬಳಿಕ ಪರಿಸ್ಥಿತಿ ನೋಡಿಕೊಂಡಿ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವ ಕೆಲಸವಾಗಲಿದೆ ಎಂದು ಈ ಕಾರ್ಯಾಚರಣೆ ಜವಾಬ್ದಾರಿ ಹೊತ್ತಿರುವ ಮನೋಜ್ ರಾಜನ್ ತಿಳಿಸಿದ್ದಾರೆ.

ಒಟ್ಟಾರೆ ಉಕ್ರೇನ್ – ರಷ್ಯಾ ನಡುವಣ ಈ ಸಂಘರ್ಷ ಜಗತ್ತಿನಾದ್ಯಂತ ಇರುವ ಜನರ ನಿದ್ದೆಗೆಡಿಸಿದೆ. ಯಾವ ಕ್ಷಣದಲ್ಲೂ ಬೇಕಿದ್ದರೂ ಸಂಘರ್ಷ ಮತ್ತಷ್ಟು ಭೀಕರಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿವೆ.

Tags: Indian StudentsKarnataka Governmentmanoj rajanRevenue DepartmentRussianRussian President Vladimir PutinRussian Ukraine WarUkraineUkrainian President Volodymyr Zelenskiyಉಕ್ರೇನ್ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಕಂದಾಯ ಇಲಾಖೆಕರ್ನಾಟಕ ಸರ್ಕಾರಭಾರತೀಯ ವಿದ್ಯಾರ್ಥಿಗಳುಮನೋಜ್‌ ರಂಜನ್ರಷ್ಯಾರಷ್ಯಾ ಉಕ್ರೇನ್‌ ಸಮರವಾಲ್ಡಿಮರ್‌ ಪುಟಿನ್
Previous Post

K R PETE | ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟೂರಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

Next Post

ರಷ್ಯಾ – ಉಕ್ರೇನ್ ಸಮರ (Russian Ukraine War) | ರಷ್ಯಾ ದಾಳಿಗೆ 137 ಮಂದಿ ಸಾವು; KYIV ಮೇಲೆ ಕ್ಷಿಪಣಿ ದಾಳಿ : ಇಲ್ಲಿದೆ 10 ಅಂಶಗಳು 

Related Posts

Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ
Top Story

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

by ಪ್ರತಿಧ್ವನಿ
June 13, 2026
0

ಬೆಂಗಳೂರು: ರಾಜ್ಯದ ಟಿಯರ್-2 ಹಾಗೂ ಟಿಯರ್-3 ನಗರಗಳು ಮತ್ತು ಪಟ್ಟಣಗಳ ಯುವಕರಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರವೇಶವನ್ನು ವಿಸ್ತರಿಸುವ ಹಾಗೂ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು...

Read moreDetails
ಜೈವಿಕ ತಂತ್ರಜ್ಞಾನ, ಕೈಗಾರಿಕೆ – ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ 27 ಕೋಟಿಗೂ ಅಧಿಕ ಅನುದಾನ : ಪ್ರಿಯಾಂಕ್‌ ಖರ್ಗೆ

ಜೈವಿಕ ತಂತ್ರಜ್ಞಾನ, ಕೈಗಾರಿಕೆ – ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ 27 ಕೋಟಿಗೂ ಅಧಿಕ ಅನುದಾನ : ಪ್ರಿಯಾಂಕ್‌ ಖರ್ಗೆ

June 13, 2026
Actor Doddanna: ಸಾವು ವದಂತಿ ಬೆನ್ನಲ್ಲೇ ದೇವಾಲಯ ಸುತ್ತಿದ ನಟ ದೊಡ್ಡಣ್ಣ

Actor Doddanna: ಸಾವು ವದಂತಿ ಬೆನ್ನಲ್ಲೇ ದೇವಾಲಯ ಸುತ್ತಿದ ನಟ ದೊಡ್ಡಣ್ಣ

June 13, 2026
ಕರ್ನಾಟಕ ಎಐಸಿಸಿ ಉಸ್ತುವಾರಿ ಸುರ್ಜೆವಾಲರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಲಾಸ್‌ !

ಇದು ಸಾಮಾನ್ಯ ಮನುಷ್ಯನ ಬಜೆಟ್ ಉಳಿವಿನ ಹೋರಾಟ: ಬಿಜೆಪಿ ವಿರುದ್ಧ ಸುರ್ಜೆವಾಲ ಕಿಡಿ

June 13, 2026
ಭಾಷಾ ಸೌಜನ್ಯ-ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವ..!

ಭಾಷಾ ಸೌಜನ್ಯ-ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವ..!

June 13, 2026
Next Post
ರಷ್ಯಾ – ಉಕ್ರೇನ್ ಸಮರ (Russian Ukraine War) | ರಷ್ಯಾ ದಾಳಿಗೆ 137 ಮಂದಿ ಸಾವು; KYIV ಮೇಲೆ ಕ್ಷಿಪಣಿ ದಾಳಿ : ಇಲ್ಲಿದೆ 10 ಅಂಶಗಳು 

ರಷ್ಯಾ – ಉಕ್ರೇನ್ ಸಮರ (Russian Ukraine War) | ರಷ್ಯಾ ದಾಳಿಗೆ 137 ಮಂದಿ ಸಾವು; KYIV ಮೇಲೆ ಕ್ಷಿಪಣಿ ದಾಳಿ : ಇಲ್ಲಿದೆ 10 ಅಂಶಗಳು 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada