ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ಜೋರಾಗಿದ್ದು, ಉಕ್ರೇನ್ ರಾಜಧಾನಿ KYIVನಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಇಲ್ಲಿಯವರೆಗೂ 137 ಉಕ್ರೇನ್ ಸೈನಿಕರು ಹಾಗೂ ನಾಗರಿಕರು ಸೇರಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.
ಈ ಸಮರದ ಸುತ್ತಲಿನ ಪ್ರಮುಖ 10 ಅಂಶಗಳು ಇಲ್ಲಿವೆ
1) ಶುಕ್ರವಾರ ಮುಂಜಾನೆ ಕೈವ್ ಪ್ರದೇಶದಲ್ಲಿ ಎರಡು ದೊಡ್ಡ ಸ್ಪೋಟಗಳು ಸಂಭವಿಸಿದ್ದು, ರಷ್ಯಾ ಕ್ಷಿಪಣಿ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಆದರೆ, ಇದಕ್ಕೆ ಪ್ರತಿಯಾಗಿ ಉಕ್ರೇನ್ ವಾಯು ಪಡೆ ಕ್ಷಿಪಣಿ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.
2) ಕೈವ್ ನಗರದ ಮೇಲೆ ರಷ್ಯಾದಿಂದ ಭಯಾನಕ ಕ್ಷಿಪಣಿ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 1941ರಲ್ಲಿ ಉಕೇನ್ ಮೇಲೆ ನಾಜಿ ಜರ್ಮನಿಯಿಂದ (Germany) ಈ ರೀತಿಯ ದಾಳಿಯನ್ನು ಮಾಡಲಾಗಿತ್ತು. ಆಗ ದೇಶ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು ಮತ್ತು ಈಗಲೂ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ.
3) ರಷ್ಯಾದ ಅತಿಕ್ರಮಣ ವಿರುದ್ದ ವಿಡಿಯೋ ಒಂದನ್ನು ಹೊರಬಿಟ್ಟಿರುವ ಉಕ್ರೇನ್‌ನ ಅಧ್ಯಕ್ಷ ವೊಲ್ಡೊಮಿರ್ ಝೆಲೆನ್ಸ್ಕಿ (Ukrainian President Volodymyr Zelensky) ಕೈವ್ ನಲ್ಲಿ ಯೂರೋಪಿಯನ್ ರಾಷ್ಟ್ರದ ಮೇಲೆ ಎರಡನೇ ಅತಿ ದೊಡ್ಡ ಯುದ್ದವಾದ ನಂತರ ಇದು ನಡೆಯುತ್ತಿದೆ. ರಷ್ಯಾದ ಆಕ್ರಮಣಕಾರರು ನಮ್ಮ ಸೈನ್ಯವು ತಕ್ಕ ಪ್ರತ್ಯತ್ತರ ನೀಡುತ್ತಿದೆ. ನಮ್ಮನ್ನು ನಂಬರ್ 1 Enemy ಎಂದು ಗುರುತಿಸಿದೆ ಮತ್ತು ನನ್ನ ಕುಟುಂಬವನ್ನು ಎರಡನೇ ಗುರಿಯಾಗಿಸಿದೆ. ನಾನು ರಾಜಧಾನಿಯಲ್ಲಿಯೇ ಉಳಿಯುತ್ತೇನೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

4) ಉಕೇನ್ (Ukrainian) ವಿರುದ್ದ ಅಟ್ಟಹಾಸ ಮುಂದುವರೆಸಿರುವ ರಷ್ಯಾ ಮಾಸ್ಕೋ ಮೇಲೆ ತನ್ನ ನಿರ್ಬಂಧ ಹೇರಿರುವುದು ಸಾಕಾಗುವುದಿಲ್ಲ ಮತ್ತು ಉಕ್ರೇನ್ ತನ್ನ ದೇಶವನ್ನು ಏಕಾಂಗಿಯಾಗಿ ರಕ್ಷಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
5) ಉಕೇನ್ ಮೇಲೆ ರಷ್ಯಾದ ಆಕ್ರಮಣವು ರಷ್ಯಾದ ಮೇಲೆ ತೀವ್ರ ಆರ್ಥಿಕ ನಿರ್ಬಂಧಗಳನ್ನು ವಿಧಿಸುತ್ತಿದೆ. ಪಾಶ್ಚಿಮಾತ್ಯ ಬ್ಯಾಂಕುಗಳ ಮೇಲೆ ಇದು ತೀವ್ರ ಪರಿಣಾಮ ಬೀರುತ್ತದೆ ಎಂದು US ಅಧ್ಯಕ್ಷ ಜೋ ಬೈಡನ್ (US President Biden) ಶ್ವೇತಭವನದಲ್ಲಿ ಬಾ಼ನದ ವೇಳೆ ಹೇಳಿದ್ದಾರೆ.
6) ರಷ್ಯಾದ ಮೇಲೆ ನೇರವಾಗಿ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಬೈಡೆನ್ ಹೇಳಿದ್ದಾರೆ. ಪುಟಿನ್ ತಮ್ಮ ಎರಡು ದಶಕಗಳ ಆಡಳಿತದಲ್ಲಿ ಅಕ್ರಮ ಸಂಪತ್ತನ್ನು ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ.
7) ಪಾಶ್ಚಿಮಾತ್ಯ ರಾಷ್ಟ್ರ ಹಾಗೂ ಉಕ್ರೇನ್ ತೀವ್ರ ರಷ್ಯಾವ SWIFT ಒಕ್ಕೂಟದಿಂದ ಅಂತರಾಷ್ಟೀಯ ಪಾವತಿ ವ್ಯವಸ್ಥೆಯನ್ನು ಕಡಿತಗೊಳಿಸುವ ಬಗ್ಗೆ ಹೆಚ್ಚು ಒತ್ತಡವಿದೆ. ಪಾಶ್ಚಿಮಾತ್ಯ ದೇಶಗಳು ಒಂದು ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕಾರಣ ಮೂಲಭೂತವಾಗಿ ದುರ್ಬಲಗೊಳಿಸಲು ಸಾಧ್ಯವಾಗದ ಕಾರಣ ಇದು ಸಧ್ಯಕ್ಕೆ ಸಾಧ್ಯವಿಲ್ಲ ಎಂದು ಬೈಡೆನ್ ಹೇಳಿದ್ದಾರೆ.
8) ಉಕ್ರೇನ್ ಬಿಕ್ಕಟ್ಟಿನ ಕುರಿತು ಅಮೆರಿಕಾ ಭಾರತದ ಜೊತೆ ಸಮಾಲೋಚನೆ ನಡೆಸಲಿದೆ. ಭಾರತವು ರಷ್ಯಾದೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. US ಜೊತೆಗೆ ಕಾರ್ಯತಂತ್ರದ ಪಾಲುದಾರಿಕೆಯೂ ಸಹ ಅರ್ಧ ದಶಕದಲ್ಲಿ ವೇಗವಾಗಿ ಬೆಳೆದಿದೆ.

9) ರಷ್ಯಾ ಅಧ್ಯಕ್ಷರ ಜೊತೆಗೆ ತಡರಾತ್ರಿ ದೂರವಾಣಿ ಕರೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ (PM Narendra Modi) ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಕರೆಯೂ ಉಕ್ರೇನ್ ಭಾರತದ ಮಧ್ಯಸ್ಥಿಕೆ ಕೋರಿದ ಕೆಲವೇ ಘಂಟೆಗಳಲ್ಲಿ ನಡೆದಿದೆ.
10) ಉಕ್ರೇನ್‌ನಲ್ಲಿ ಜನಾಂಗೀಯ ಹತ್ಯೆಗೆ ಒಳಗಾದ ರಷ್ಯಾದ ನಾಗರೀಕರು ಸೇರಿದಂತೆ ಜನರನ್ನು ರಕ್ಷಿಸಲು ರಷ್ಯಾದಿಂದ ವಿಶೇಷ ಮಿಲಿಟರಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.