ನಟಿ ರನ್ಯಾ ರಾವ್ (Actress Ranya rao) ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ (Gold smuggling case) ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಕೆಲ ಸಚಿವರ ಹೆಸರುಗಳು ಕೇಳಿಬಂದಿದ್ದು ಕೂಡಲೇ ಸಿಎಂ ಸಿದ್ದರಾಮಯ್ಯ (Cm Siddaramaiah) ಅಲರ್ಟ್ ಆದಂತೆ ಕಾಣುತ್ತಿದೆ.

ನಟಿ ರನ್ಯಾ ಪ್ರಕರಣವನ್ನು ಪ್ರತಿಪಕ್ಷ ಬಿಜೆಪಿ (Bjp) ಸದನದೊಳಗೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ. ಇಬ್ಬರು ಪ್ರಭಾವಿ ಸಚಿವರು (Ministers) ರನ್ಯಾಗೆ ಸಹಾಯ ಮಾಡಿದ್ದಾರೆಂಬ ಚರ್ಚೆ ಬಿರುಸುಗೊಂಡಿದೆ. ಪ್ರಕರಣದ ಮೇಲೆ ಪ್ರಭಾವದ ಬೀರುವ ಜೊತೆಗೆ ಗೋಲ್ಡ್ ಸ್ಮಗ್ಲಿಂಗ್ಗೆ ಪರೋಕ್ಷ ಸಹಕಾರದ ಆರೋಪ ಕೂಡ ಕೇಳಿ ಬಂದಿದ್ದು, ಪ್ರತಿಪಕ್ಷಗಳು ಅಧಿವೇಶನದ ವೇಳೆಯೇ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಹೀಗಾಗಿ ನಿನ್ನೆ ಇದೇ ವಿಚಾರವನ್ನ ಸದನದಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ (Bjp MLA Sunil kumar) ಪ್ರಸ್ತಾಪಿಸಿ, ಇಬ್ಬರು ಸಚಿವರು ಯಾರು ಎಂಬುದು ಬಹಿರಂಗವಾಗಬೇಕೆಂದು ಒತ್ತಾಯಿಸಿದ್ರು. ಈ ಮೂಲಕ ಸರ್ಕಾರಕ್ಕೆ ಮುಜುಗರ ಸೃಷ್ಟಿಸಲು ಬಿಜೆಪಿ ತಂತ್ರ ರೂಪಿಸಿದೆ.