• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಟೊಮ್ಯಾಟೋ ಜ್ವರ: ಕೇರಳ ಪ್ರಯಾಣಿಕರ ಮೇಲೆ ಹದ್ದಿನ‌ಕಣ್ಣು !

ಕರ್ಣ by ಕರ್ಣ
May 18, 2022
in ಕರ್ನಾಟಕ
0
ಟೊಮ್ಯಾಟೋ ಜ್ವರ: ಕೇರಳ ಪ್ರಯಾಣಿಕರ ಮೇಲೆ ಹದ್ದಿನ‌ಕಣ್ಣು !
Share on WhatsAppShare on FacebookShare on Telegram

ರಾಜಧಾನಿಯಲ್ಲಿ ಕೊರೊನಾ ಆತಂಕ ದೂರವಾಯ್ತು ಅಂತ ನೆಮ್ಮದಿಯ ನಿಟ್ಟುಸಿರುವ ಬಿಡುತ್ತಿದ್ದ ಜನರಿಗೂ ಇದೀಗ ಟೊಮ್ಯಾಟೊ ಜ್ವರ ಕಾಟ ಶುರುವಾಗಿದ್ದು, ಮತ್ತದೆ ಕೊರೊನಾ ಭೀತಿಯಂತೆ ಟೊಮ್ಯಾಟೊ ಫ್ಲೂ ಭೀತಿ ಕಾಡಲಿಕ್ಕೆ ಶುರುಮಾಡಿದೆ. ಕೇರಳದಲ್ಲಿ ಸಾಕಷ್ಟು ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ದಿನೆ ದಿನೆ ವರದಿಯಾಗುತ್ತಿದ್ದು, ಇದರಿಂದ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹೊಸ ಸೋಂಕು ಮಕ್ಕಳಿಗೆ ಹೆಚ್ಚು ಕಾಣಸಿಕೊಳ್ಳುವ ಸೂಚನೆ ಇರೋದ್ರಿಂದ ಇನ್ನೆಲ್ಲಿ ನಮ್ಮ ಮಕ್ಕಳಿಗೆ ಹೊಸ ರೋಗಾಣು ಕಾಣಿಸಿಕೊಳ್ಳುತ್ತದೆಯೋ ಎನ್ನುವ ಭಯ ಮರುಕಳಿಸಿದೆ.

ADVERTISEMENT

ಜೊತೆಗೆ  ಬಿಬಿಎಂಪಿ ಸೇರಿ ಆರೋಗ್ಯ ಇಲಾಖೆಗೆ ಈ ಹೊಸ ಮಾಧರಿಯ ರೋಗಾಣುವಿನಿಂದ ದೊಡ್ಡ ತಲೆನೋವಾಗಿದೆ. ಇದಿರಂದಾಗಿ ರಾಜ್ಯದಲ್ಲಿರುವ ಮಕ್ಕಳಿಗೆ ಸಮಸ್ಯೆಯಾಗದಂತೆ, ವೈರಾಣು ಹರಡದಂತೆ ಆಯಾ ರಾಜ್ಯಗಳ ಆರೋಗ್ಯಾಧಿಕಾರಿಗಳಿಗೆ ತುರ್ತು ಕೆಲಸಕ್ಕೆ ಮುಂದಾಗಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈಗಾಗಲೇ ರಾಜ್ಯಕ್ಕೂ ಕಾಲಿಡ್ತಾ ಟೊಮ್ಯಾಟೊ ಫ್ಲೂ ರೋಗ ಎಂಬ ಅನುಮಾನ ಎಲ್ಲೆಡೆ ಸುಳಿದಾಡುತ್ತಿದೆ. ಕೇರಳ ಗಡಿಪ್ರದೇಶವನ್ನ ಹಂಚಿಕೊಂಡಿರುವ ಉಡುಪಿ ಭಾಗದಲ್ಲಿ ನಾಲ್ಕು ವರ್ಷದ ಮಗುವಿನಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಮಾಹಿತಿ ಇದೆ‌. ಇದೇ ಕಾರಣಕ್ಕಾಗಿ ಬೆಂಗಳೂರಿಗೂ ವ್ಯಾಪಿಸುವ ಆತಂಕ ಮನೆ ಮಾಡಿದ್ದು, ನಗರದಲ್ಲಿ ಟೊಮ್ಯಾಟೊ ಜ್ವರದ ಬಗ್ಗೆ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

ಕೊರೋನಾ ಮೊಬೈಲ್ ಟೆಸ್ಟಿಂಗ್ ಸೆಂಟರ್ ಮಾದರಿಯಲ್ಲೇ ಕ್ರಮ !

ರಾಜ್ಯದಲ್ಲಿ ಟೊಮ್ಯಾಟೊ ಜ್ವರದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಬಸ್ ಸ್ಟ್ಯಾಂಡ್ ಗಳು ಹಾಗು ರೈಲ್ವೇ ನಿಲ್ದಾಣಗಳಲ್ಲಿ ಮೊಬೈಲ್ ಟೆಸ್ಟಿಂಗ್ ಸೆಂಟರ್ ತೆರೆಯಲಿ ಪಾಲಿಕೆ ನಿರ್ಧಾರ ಮಾಡಿದೆ. ಬೆರಳೆಣಿಕೆಯಷ್ಟು ಗುಣ ಲಕ್ಷಣಗಳು ಮಾತ್ರ ಟೊಮ್ಯಾಟೊ ಜ್ವರ ಬಗ್ಗೆ ಇರುವ ಮಾಹಿತಿ ಕಾರಣ, ಈ ಪಟ್ಟಿಯಲ್ಲಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಅಂತಹ ಮಕ್ಕಳನ್ನ ತಪಾಸಣೆ ನಡೆಸಲು ಪಾಲಿಕೆ‌ ಸಿದ್ಧವಾಗಿದೆ ವಿಶೇಷವಾಗಿ ಕೇರಳದಿಂದ ಬರುವ ಪ್ರವಾಸಿಗರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಟೊಮ್ಯಾಟೋ ಫೀವರ್ ಟೆಸ್ಟ್ ಬಗ್ಗೆ ಗೊಂದಲದಲ್ಲಿರುವ ಆರೋಗ್ಯ ಇಲಾಖೆ !

ಜ್ವರ ಹರುಡುವಿಕೆಯ ವೇಗ, ಚಿಕಿತ್ಸೆಯ ಬಗ್ಗೆ ಸಿಗ್ತಿಲ್ಲ ಸ್ಪಷ್ಟವಾದ ಚಿತ್ರಣ ರಾಜ್ಯ ಆರೋಗ್ಯ ಇಲಾಖೆಗೆ ಇಲ್ಲ. ಹೀಗಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಆರೋಗ್ಯ ಇಲಾಖೆಗೆ ಟೊಮೆಟೋ ಜ್ವರದ ಬಗ್ಗೆ ಅಲರ್ಟ್ ಆಗಿರುವಂತೆ ಸೂಚಿಸಿದೆ. ಜೊತೆಗೆ ಕೊರೋನಾ ಆರಂಭಿಕ ಹಂತದ ರೀತಿ ತಾತ್ಸಾರ ಮಾಡದಂತೆ ಎಚ್ಚರಿಕೆ ನೀಡಿದೆ. ಹೆಚ್ಚು ಹರಡುವಿಕೆ ಕಂಡು ಬಂದರೆ ಕೋವಿಡ್ ಐಸೋಲೇಷನ್ ಮೆಷರ್ಸ್ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.

ಸದ್ಯಕ್ಕೆ ಕೇರಳದಿಂದ ಬರುವ ಬಸ್, ಟ್ರೈನ್ ಗಳಲ್ಲಿ ತಪಾಸಣೆ !

ಕೇರಳಿಂದ ರಾಜ್ಯಕ್ಕೆ ಬರುವ ಬಸ್ ಗಳು ಸೇರಿದಂತೆ ಇನ್ನಿತರ ವಾಹನಗಳನ್ನ ಆಯಾ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ರೀತಿ ತಪಾಸಣೆ ಮಾಡಲಾಗ್ತಿದೆ. ಮಕ್ಕಳಲ್ಲಿ ಜ್ವರ, ಮೈಮೇಲೆ ಗುಳ್ಳೆ ಇರುವ ಲಕ್ಷಣಗಳೆನಾದ್ರು ಕಂಡುಬಂದ್ರೆ ಅಂಥಾ ಮಕ್ಕಳಿಗೆ ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಕೆಲಸಕ್ಕೆ‌ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಮುಂದಾಗಿದೆ.

Tags: Covid 19ಕರೋನಾಕೋವಿಡ್-19
Previous Post

ಇಂದಿರಾ ಹಾದಿಯಲ್ಲಿ ಮೋದಿ, ಕಾಂಗ್ರೆಸ್‌ ಹಾದಿಯಲ್ಲಿ ಬಿಜೆಪಿ…!

Next Post

ನಾಳೆಯೇ SSLC ಫಲಿತಾಂಶ : ಇಲ್ಲಿದೆ ವೆಬ್ಸೈಟ್ಗಳ ಮಾಹಿತಿ!

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ದ್ವಿತೀಯ ಪಿಯು ಮರು ಪರೀಕ್ಷೆ ಗೊಂದಲ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್

ನಾಳೆಯೇ SSLC ಫಲಿತಾಂಶ : ಇಲ್ಲಿದೆ ವೆಬ್ಸೈಟ್ಗಳ ಮಾಹಿತಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada