ಇಂದು ಜಿಎಸ್‌ಟಿ ಕೌನ್ಸಿಲ್ ಸಭೆ; ರಾಜ್ಯಗಳಿಗೆ ಸಿಗುತ್ತಾ ಬಾಕಿ ಹಣ?

ದೇಶದಲ್ಲಿ ಎರಡನೇ ಅಲೆಯ ಕರೋನಾ ಶುರುವಾದ ಬಳಿಕ ಮೊದಲ ಬಾರಿಗೆ ಹಾಗೂ ಎಂಟು ತಿಂಗಳ ಬಳಿಕ ಇಂದು ಮತ್ತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆ ನಡೆಯಲಿದೆ. ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜಿಎಸ್‌ಟಿ ಸಂಗ್ರಹ ಕಡಿಮೆ ಆಗಿರುವ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅವುಗಳ ಪಾಲಿನ ಮೊತ್ತವನ್ನು ಬಿಡುಗಡೆ ಮಾಡಿದಿರುವ ಹಾಗೂ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳ ಮೇಲೆ ಜಿಎಸ್‌ಟಿ ಹಾಕಬಾರದೆಂಬ ಒತ್ತಾಯ ಕೇಳಿಬರುತ್ತಿರುವ ಕಾರಣಗಳಿಗೆ ಈ ಬಾರಿಯ ಜಿಎಸ್‌ಟಿ ಕೌನ್ಸಿಲ್ ಸಭೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಪಾವತಿಸಬೇಕಾದ ಜಿಎಸ್‌ಟಿ ಪರಿಹಾರದ ಕೊರತೆಯನ್ನು 2.69 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ, ಅದರಲ್ಲಿ 1.58 ಲಕ್ಷ ಕೋಟಿ ರೂ. ಈ ವರ್ಷ ಸಾಲ ಪಡೆಯಬೇಕಾಗುತ್ತದೆ. ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯದ ಕೊರತೆಯನ್ನು ಸರಿದೂಗಿಸಲು ರಾಜ್ಯಗಳಿಗೆ ಐಷಾರಾಮಿ, ಡಿಮೆರಿಟ್ ಮತ್ತು ಪಾಪ ಸರಕುಗಳ ಮೇಲಿನ ಸೆಸ್ ಮೂಲಕ 1.11 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲು ನಿರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಜಿಎಸ್‌ಟಿ ಕೌನ್ಸಿಲ್ ಸಭೆಗೆ ಮುಂಚಿತವಾಗಿ ರಾಜ್ಯಗಳೊಂದಿಗೆ ಹಂಚಿಕೊಂಡ ಕಾರ್ಯಸೂಚಿಯ ಟಿಪ್ಪಣಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಆದಾಯವು ಚೇತರಿಕೆ ಕಾಣಬಹುದಾದರೂ, ಪರಿಹಾರದ ಅಗತ್ಯತೆ ಮತ್ತು ಸೆಸ್ ಮೂಲಕ ಸಂಗ್ರಹಿಸಿದ ಮೊತ್ತದ ನಡುವೆ ಇನ್ನೂ ಅಂತರವಿರುತ್ತದೆ. 2021-22ರ ಬಜೆಟ್ ಜಿಎಸ್‌ಟಿ ಆದಾಯದಲ್ಲಿ ಶೇಕಡಾ 17ರಷ್ಟು ಬೆಳವಣಿಗೆಯನ್ನು ಪಡೆದುಕೊಂಡಿದೆ. ಅಂದರೆ ಮಾಸಿಕವಾಗಿ ಜಿಎಸ್‌ಟಿ ಆದಾಯ 1.1 ಲಕ್ಷ ಕೋಟಿ ರೂ. ಆಗಲಿದೆ. ಇದೇ ಲೆಕ್ಕಾಚಾರದ ಆಧಾರದ ಮೇಲೆ ಫೆಬ್ರವರಿ 2021ರಿಂದ ಜನವರಿ 2022ರ ಅವಧಿಯಲ್ಲಿ ಸಂರಕ್ಷಿತ ಆದಾಯ ಮತ್ತು ಪರಿಹಾರ ಬಿಡುಗಡೆಯ ನಂತರ ನಿಜವಾದ ಆದಾಯದ ನಡುವಿನ ಅಂತರವು ಸುಮಾರು 1.6 ಲಕ್ಷ ಕೋಟಿ ರೂ.ಗೆ ಏರಲಿದೆ ಎಂಬ ಅಂದಾಜನ್ನೂ ಹೊಂದಿದೆ. 

ಕಳೆದ 2020-21ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಆದಾಯದ ಕೊರತೆಯನ್ನು ಸರಿದೂಗಿಸಲು ಕೇಂದ್ರವು ರಾಜ್ಯಗಳ ಪರವಾಗಿ ಸಾಲ ಪಡೆದು 1.10 ಲಕ್ಷ ಕೋಟಿ ರೂ.ಗಳ ಪೈಕಿ 68,700 ಕೋಟಿ ರೂ.ಗಳನ್ನು ಸೆಸ್ ವಿಧಿಸುವ ಮೂಲಕ ಸಂಗ್ರಹಿಸಲಾಗಿದೆ. ಇದು ದೇಶದ ಆರ್ಥಿಕತೆ ಮತ್ತು ಕೇಂದ್ರ ಸರ್ಕಾರದ ಲೆಕ್ಕಾಚಾರಗಳಾಗಿವೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್ ಸರಕು ಮತ್ತು ಸೇವಾ ತೆರಿಗೆ  ಕೌನ್ಸಿಲ್ ಸಭೆ ಕರೆದಿದ್ದಾರೆ.

ಬಾಕಿ ಹಣದ ನಿರೀಕ್ಷೆಯಲ್ಲಿ ರಾಜ್ಯಗಳು

ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜಿಎಸ್‌ಟಿ ಸಂಗ್ರಹ ಕಡಿಮೆ ಆಗಿದೆ ಎಂಬ ನೆಪ ಹೇಳಿಕೊಂಡು ಕೇಂದ್ರ ಸರ್ಕಾರ ಮತ್ತೊಮ್ಮೆ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಬಾಬತ್ತನ್ನು ಕೊಡಲು ಹಿಂದೇಟು ಹಾಕಬಹುದು.‌ ಆದರೆ ಇದೇ ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ರಾಜ್ಯಗಳ ಬೊಕ್ಕಸಗಳೂ ಬರಿದಾಗಿದ್ದು ರಾಜ್ಯಗಳು ತಮ್ಮ ಪಾಲಿನ‌ ಹಣಕ್ಕೆ ಒಕ್ಕೊರಲಿನಿಂದ ಆಗ್ರಹಿಸುವ ಸಾಧ್ಯತೆ ಇದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಿಂದಲೂ ಇಂಥ ಒತ್ತಾಯ ಕೇಳಿಬರುವ ಸಾಧ್ಯತೆ ಇದೆ. ಕಷ್ಟದಲ್ಲಿರುವ ರಾಜ್ಯಗಳಿಗೆ ಬಾಕಿ ಹಣ ನೀಡುವ ಮೂಲಕ ಕೇಂದ್ರ ಸರ್ಕಾರ ಸಹಾಯ ಮಾಡುವುದೇ? ರಾಜ್ಯಗಳಿಗೆ ಹಣ ಸಿಗಲಿದೆಯಾ ಬಾಕಿ ಹಣ? ಎಂಬ ಪ್ರಶ್ನೆಗಳಿಗೆ ಇಂದಿನ ಸಭೆಯಲ್ಲಿ ಉತ್ತರ ದೊರಕಲಿದೆ.

2017ರ ಜುಲೈ 1ರಂದು ಜಾರಿಯಾದ ಜಿಎಸ್‌ಟಿ ಕಾನೂನಿನ ಪ್ರಕಾರ ಮೊದಲ ಐದು ವರ್ಷಗಳಲ್ಲಿ ಯಾವುದೇ ರೀತಿಯ ಆದಾಯ ನಷ್ಟವಾದರೂ ರಾಜ್ಯಗಳಿಗೆ ಎರಡು ತಿಂಗಳ ಪರಿಹಾರವನ್ನು ನೀಡಲೇಬೇಕು. ಹೀಗೆ ರಾಜ್ಯಗಳ ಬೇಡಿಕೆಗೆ ಕಾನೂನಿನ ಬಲವೂ ಇರುವುದರಿಂದ ರಾಜ್ಯ ಸರ್ಕಾರಗಳಿಗೆ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ಪರಿಹಾರದ ಬಾಬತ್ತನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿದೆ ಎಂದು ಕೂಡ ಹೇಳಲಾಗುತ್ತಿದೆ‌. ಅಂತಿಮವಾಗಿ ಕೇಂದ್ರ ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು. 

ಇದಲ್ಲದೆ ಕೊವಿಡ್ ಸಂಬಂಧಿಸಿದ ಔಷಧಿಗಳಿಗೆ ಜಿಎಸ್‌ಟಿ ವಿನಾಯಿತಿ ಕೊಡುವಂತೆ ಬಿಜೆಪಿಯೇತರ ರಾಜ್ಯಗಳು ಸಭೆಯಲ್ಲಿ ಒತ್ತಾಯ ಮಾಡುವ ಸಾಧ್ಯತೆ ಇದೆ. ಜೊತೆಗೆ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ಸೇರಿಸುವ ಬಗ್ಗೆಯೂ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಈ ಎಡರೂ ವಿಷಯಗಳನ್ನು ಪರಿಗಣಿಸುವ ಸಾಧ್ಯತೆಗಳಿಲ್ಲ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...