KPSC ನೇಮಕಾತಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ವಿಚಾರಣೆ ಕೈಬಿಟ್ಟ ಯಡಿಯೂರಪ್ಪ ಸರ್ಕಾರ: ಕೆ‌ಆರ್‌ಎಸ್ ಪಕ್ಷ ಕಿಡಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಪಾವತಿಸಬೇಕಾದ ಜಿಎಸ್‌ಟಿ ಪರಿಹಾರದ ಕೊರತೆಯನ್ನು 2.69 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ, ಅದರಲ್ಲಿ 1.58 ಲಕ್ಷ ಕೋಟಿ ರೂ. ಈ ವರ್ಷ ಸಾಲ ಪಡೆಯಬೇಕಾಗುತ್ತದೆ. ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯದ ಕೊರತೆಯನ್ನು ಸರಿದೂಗಿಸಲು ರಾಜ್ಯಗಳಿಗೆ ಐಷಾರಾಮಿ, ಡಿಮೆರಿಟ್ ಮತ್ತು ಪಾಪ ಸರಕುಗಳ ಮೇಲಿನ ಸೆಸ್ ಮೂಲಕ 1.11 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲು ನಿರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಜಿಎಸ್‌ಟಿ ಕೌನ್ಸಿಲ್ ಸಭೆಗೆ ಮುಂಚಿತವಾಗಿ ರಾಜ್ಯಗಳೊಂದಿಗೆ ಹಂಚಿಕೊಂಡ ಕಾರ್ಯಸೂಚಿಯ ಟಿಪ್ಪಣಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಆದಾಯವು ಚೇತರಿಕೆ ಕಾಣಬಹುದಾದರೂ, ಪರಿಹಾರದ ಅಗತ್ಯತೆ ಮತ್ತು ಸೆಸ್ ಮೂಲಕ ಸಂಗ್ರಹಿಸಿದ ಮೊತ್ತದ ನಡುವೆ ಇನ್ನೂ ಅಂತರವಿರುತ್ತದೆ. 2021-22ರ ಬಜೆಟ್ ಜಿಎಸ್‌ಟಿ ಆದಾಯದಲ್ಲಿ ಶೇಕಡಾ 17ರಷ್ಟು ಬೆಳವಣಿಗೆಯನ್ನು ಪಡೆದುಕೊಂಡಿದೆ. ಅಂದರೆ ಮಾಸಿಕವಾಗಿ ಜಿಎಸ್‌ಟಿ ಆದಾಯ 1.1 ಲಕ್ಷ ಕೋಟಿ ರೂ. ಆಗಲಿದೆ. ಇದೇ ಲೆಕ್ಕಾಚಾರದ ಆಧಾರದ ಮೇಲೆ ಫೆಬ್ರವರಿ 2021ರಿಂದ ಜನವರಿ 2022ರ ಅವಧಿಯಲ್ಲಿ ಸಂರಕ್ಷಿತ ಆದಾಯ ಮತ್ತು ಪರಿಹಾರ ಬಿಡುಗಡೆಯ ನಂತರ ನಿಜವಾದ ಆದಾಯದ ನಡುವಿನ ಅಂತರವು ಸುಮಾರು 1.6 ಲಕ್ಷ ಕೋಟಿ ರೂ.ಗೆ ಏರಲಿದೆ ಎಂಬ ಅಂದಾಜನ್ನೂ ಹೊಂದಿದೆ. 

ಕಳೆದ 2020-21ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಆದಾಯದ ಕೊರತೆಯನ್ನು ಸರಿದೂಗಿಸಲು ಕೇಂದ್ರವು ರಾಜ್ಯಗಳ ಪರವಾಗಿ ಸಾಲ ಪಡೆದು 1.10 ಲಕ್ಷ ಕೋಟಿ ರೂ.ಗಳ ಪೈಕಿ 68,700 ಕೋಟಿ ರೂ.ಗಳನ್ನು ಸೆಸ್ ವಿಧಿಸುವ ಮೂಲಕ ಸಂಗ್ರಹಿಸಲಾಗಿದೆ. ಇದು ದೇಶದ ಆರ್ಥಿಕತೆ ಮತ್ತು ಕೇಂದ್ರ ಸರ್ಕಾರದ ಲೆಕ್ಕಾಚಾರಗಳಾಗಿವೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್ ಸರಕು ಮತ್ತು ಸೇವಾ ತೆರಿಗೆ  ಕೌನ್ಸಿಲ್ ಸಭೆ ಕರೆದಿದ್ದಾರೆ.

ಬಾಕಿ ಹಣದ ನಿರೀಕ್ಷೆಯಲ್ಲಿ ರಾಜ್ಯಗಳು
ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜಿಎಸ್‌ಟಿ ಸಂಗ್ರಹ ಕಡಿಮೆ ಆಗಿದೆ ಎಂಬ ನೆಪ ಹೇಳಿಕೊಂಡು ಕೇಂದ್ರ ಸರ್ಕಾರ ಮತ್ತೊಮ್ಮೆ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಬಾಬತ್ತನ್ನು ಕೊಡಲು ಹಿಂದೇಟು ಹಾಕಬಹುದು.‌ ಆದರೆ ಇದೇ ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ರಾಜ್ಯಗಳ ಬೊಕ್ಕಸಗಳೂ ಬರಿದಾಗಿದ್ದು ರಾಜ್ಯಗಳು ತಮ್ಮ ಪಾಲಿನ‌ ಹಣಕ್ಕೆ ಒಕ್ಕೊರಲಿನಿಂದ ಆಗ್ರಹಿಸುವ ಸಾಧ್ಯತೆ ಇದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಿಂದಲೂ ಇಂಥ ಒತ್ತಾಯ ಕೇಳಿಬರುವ ಸಾಧ್ಯತೆ ಇದೆ. ಕಷ್ಟದಲ್ಲಿರುವ ರಾಜ್ಯಗಳಿಗೆ ಬಾಕಿ ಹಣ ನೀಡುವ ಮೂಲಕ ಕೇಂದ್ರ ಸರ್ಕಾರ ಸಹಾಯ ಮಾಡುವುದೇ? ರಾಜ್ಯಗಳಿಗೆ ಹಣ ಸಿಗಲಿದೆಯಾ ಬಾಕಿ ಹಣ? ಎಂಬ ಪ್ರಶ್ನೆಗಳಿಗೆ ಇಂದಿನ ಸಭೆಯಲ್ಲಿ ಉತ್ತರ ದೊರಕಲಿದೆ.
2017ರ ಜುಲೈ 1ರಂದು ಜಾರಿಯಾದ ಜಿಎಸ್‌ಟಿ ಕಾನೂನಿನ ಪ್ರಕಾರ ಮೊದಲ ಐದು ವರ್ಷಗಳಲ್ಲಿ ಯಾವುದೇ ರೀತಿಯ ಆದಾಯ ನಷ್ಟವಾದರೂ ರಾಜ್ಯಗಳಿಗೆ ಎರಡು ತಿಂಗಳ ಪರಿಹಾರವನ್ನು ನೀಡಲೇಬೇಕು. ಹೀಗೆ ರಾಜ್ಯಗಳ ಬೇಡಿಕೆಗೆ ಕಾನೂನಿನ ಬಲವೂ ಇರುವುದರಿಂದ ರಾಜ್ಯ ಸರ್ಕಾರಗಳಿಗೆ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ಪರಿಹಾರದ ಬಾಬತ್ತನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿದೆ ಎಂದು ಕೂಡ ಹೇಳಲಾಗುತ್ತಿದೆ‌. ಅಂತಿಮವಾಗಿ ಕೇಂದ್ರ ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು. 

ಇದಲ್ಲದೆ ಕೊವಿಡ್ ಸಂಬಂಧಿಸಿದ ಔಷಧಿಗಳಿಗೆ ಜಿಎಸ್‌ಟಿ ವಿನಾಯಿತಿ ಕೊಡುವಂತೆ ಬಿಜೆಪಿಯೇತರ ರಾಜ್ಯಗಳು ಸಭೆಯಲ್ಲಿ ಒತ್ತಾಯ ಮಾಡುವ ಸಾಧ್ಯತೆ ಇದೆ. ಜೊತೆಗೆ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ಸೇರಿಸುವ ಬಗ್ಗೆಯೂ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಈ ಎಡರೂ ವಿಷಯಗಳನ್ನು ಪರಿಗಣಿಸುವ ಸಾಧ್ಯತೆಗಳಿಲ್ಲ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...