
ಬೆನ್ನು ನೋವಿನ ಕಾರಣಕ್ಕೆ ಮಧ್ಯಂತರ ಬೇಲ್ ಪಡೆದು ಜೈಲಿನಿಂದ ಹೊರ ಬಂದಿರುವ ನಟ ದರ್ಶನ್, ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ಟೆಸ್ಟ್‌ಗಳನ್ನು ಮಾಡಿದ್ದು, ಟೆಸ್ಟ್ ರಿಪೋರ್ಟ್ ಈಗಾಗಲೇ ವೈದ್ಯರ ಕೈ ಸೇರಿದೆ. ಇಂದು ವೈದ್ಯರ ತಂಡ ಸಭೆ ನಡೆಸಿ ಟ್ರೀಟ್‌ಮೆಂಟ್ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ.
ಬಿಜಿಎಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನ್ ಮಾಡಿದ್ದು, L1, L5ನಲ್ಲಿ ಸಮಸ್ಯೆ ಹೇಗಿದೆ..? ಕಾಲು ನೋವಿಗೆ ಪ್ರಮುಖ ಕಾರಣ ಏನು ಅನ್ನೋ ಬಗ್ಗೆಯೂ ರಿಪೋರ್ಟ್ ಆಧಾರದಲ್ಲಿ ಸೋಮವಾರ ವೈದ್ಯರ ತಂಡ ಚರ್ಚೆ ನಡೆಸಲಿದೆ. ಆ ಬಳಿಕ ದರ್ಶನ್ ಮತ್ತು ಕುಟುಂಬಸ್ಥರ ಜೊತೆಗೂ ವೈದ್ಯರು ಚರ್ಚೆ ನಡೆಸಿ ಆಪರೇಷನ್ ಮಾಡಬೇಕಾ..? ಅಥವಾ ಫಿಸಿಯೋಥೆರಪಿ ಸಾಕಾ..? ಅನ್ನೋ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಅನ್ನೊ ಮಾಹಿತಿ ಹೊರಬಿದ್ದಿದೆ.
ದರ್ಶನ್ ವೈದ್ಯಕೀಯ ಚಿಕಿತ್ಸೆ ಬಗ್ಗೆ ಎಲ್ಲಾ ತಪಾಸಣೆ ನಡೆಸಿರುವ ಬಿಜಿಎಸ್ ವೈದ್ಯರ ರಂಡ, ಇಂದು ಚರ್ಚೆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಆ ಬಳಿಕ ಕೋರ್ಟ್‌ಗೆ ಮಾಹಿತಿ ಕೊಡಲಿದ್ದಾರೆ ಎನ್ನಲಾಗಿದೆ.. ಹೈಕೋರ್ಟ್‌ನಲ್ಲಿ ಜಾಮೀನು ಕೊಡುವಾಗ 1 ವಾರದಲ್ಲಿ ವೈದ್ಯಕೀಯ ವರದಿ ಕೊಡುವಂತೆ ಷರತ್ತು ವಿಧಿಸಿದೆ, ಮಂಗಳವಾರ ಅಥವಾ ಬುಧವಾರ ನ್ಯಾಯಾಲಯಕ್ಕೆ ವೈದ್ಯಕೀಯ ವರದಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.









