ಟ್ರಾವಲ್ ಮಾಡುವುದು ಹೋಸ ಜಾಗವನ್ನು ಎಕ್ಸ್ಪ್ಲೋರ್ ಮಾಡುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲಾ.. ಪ್ರತಿಯೊಬ್ಬರು ಕೂಡಾ ಇಷ್ಟ ಪಡ್ತಾರೆ.. ಆದರೆ ಕಲವರು ಮಾತ್ರ ಟ್ರಾವಲ್ ,ಟ್ರಿಪ್ ಅಂದ್ರೆ ಭಯ ಪಡುತ್ತಾರೆ, ಅದಕ್ಕೆ ಮುಖ್ಯ ಕಾರಣ ಪ್ರಾಯಾಣ ಸುಸ್ತು ಹಾಗೂ ವಾಂತಿಯಾಗುವಂತದ್ದು..ಮಾತ್ರವಲ್ಲದೆ ಹೆಚ್ಚು ಜನಕ್ಕೆ ಕಾಲು ಊತ ಬರುತ್ತದೆ..ಊತವನ್ನು ಕಡಿಮೆ ಮಾಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ಪ್ರಯಾಣಿಸುವ ಮೊದಲು
ನೀರು ಹೆಚ್ಚು ಕುಡಿಯಿರಿ
ದೇಹದಲ್ಲಿ ನೀರಿನಂಶ ಹೆಚ್ಚಿರುವುದು ಅಗತ್ಯ ವಿಷವನ್ನು ಹೊರಹಾಕಲು ಮತ್ತು ದ್ರವದ ಧಾರಣವನ್ನು ಕಡಿಮೆ ಮಾಡಲು ಸಹಾಯಕಾರಿ.!
ವ್ಯಾಯಾಮ ಮಾಡಿ
ದೈಹಿಕ ಚಟುವಟಿಕೆಯು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.ಮುಖ್ಯವಾಗಿ ಟ್ರಾವೆಲ್ ಮಾಡಿವ ಒಂದೆರಡು ಗಂಟೆ ಮುಂಚೆ ವ್ಯಾಯಾಮ ಮಾಡಿ.
ಆರಾಮದಾಯಕ ಚಪ್ಪಲಿ ಧರಿಸಿ
ನಿಮ್ಮ ಪಾದಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಉತ್ತಮ ಹಾಗೂ ಕಂಫರ್ಟ್ ಇರುವಂತಹ ಶೂಸ್ ಅಥವಾ ಚಪ್ಪಲಿ ಧರಿಸಿ.

ಪ್ರಯಾಣದ ಸಮಯದಲ್ಲಿ
ಬ್ರೇಕ್ ತೆಗೆದುಕೊಳ್ಳಿ
ರಕ್ತ ಪರಿಚಲನೆ ಸುಧಾರಿಸಲು ಮತ್ತು ಬಿಗಿತವನ್ನು ಕಡಿಮೆ ಮಾಡಲು ಪ್ರತಿ ಗಂಟೆಗೊಮ್ಮೆ ಬ್ರೇಕ್ ತೆಗೆದುಕೊಳ್ಳಿ ೫ ನಿಮಿಷಗಳ ಕಾಲ ಎದ್ದು ಓಡಾಡಿ.
ಕಾಲುಗಳನ್ನು ಸ್ಟ್ರೇಟ್ಚ್ ಮಾಡಿ
ರಕ್ತ ಪರಿಚಲನೆ ಸುಧಾರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ನಿಮ್ಮ ಕಾಲುಗಳನ್ನು ಸ್ಟ್ರೇಟ್ಚ್ ಮಾಡಿ.ಇದರಿಂದ ಸ್ವೆಲ್ಲಿಂಗ್ ಆಗುವುದಿಲ್ಲ ಹಾಗೂ ರಿಲ್ಯಾಕ್ಸ್ ಆಗುತ್ತದೆ.
ಕಂಪ್ರೆಷನ್ ಸಾಕ್ಸ್ ಧರಿಸಿ
ಕಂಪ್ರೆಷನ್ ಸಾಕ್ಸ್ ರಕ್ತ ಪರಿಚಲನೆ ಸುಧಾರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.