ವಿಧಾನಸೌಧದಲ್ಲಿ (Vidhanasoudha) ಅಳವಡಿಸಿದ್ದ ರಿಕ್ಲೇನರ್ ಚೇರ್ ಗಳನ್ನು (Reclainer chair) ಅದೇ ಕಂಪೆನಿಗೆ ವಾಪಸ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೀತಿ ವಿಧಾನಸಭೆಯ ಮೊಗಸಾಲೆಯಲ್ಲಿ ರಿಕ್ಲೇನರ್ ಚೇರ್ ಅಳವಡಿಕೆ ಕೆಲಸ ಶಾಸಕರ ವಿರೋಧ ವ್ಯಕ್ತವಾದ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಬಾರಿಯ ಬಜೆಟ್ ಅಧಿವೇಶನಕ್ಕೂ ಮುನ್ನ, ಶಾಸಕರಿಗೆ, ಹಿರಿಯ ರಾಜಕಾರಣಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸ್ಪೀಕರ್ ಯು.ಟಿ ಖಾದರ್ (Speaker UT Khadar) ಈ ನಿರ್ಧಾರ ಕೈಗೊಂಡಿದ್ದು,ಇದೀಗ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ. ಕೆಲವೇ ಕೆಲ ಶಾಸಕರು ಈ ಚೇರ್ ಬಳಸುತ್ತಿದ್ದ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ.
ಹೀಗಾಗಿ ಈ ಚೇರ್ ಗಳನ್ನು ಹಿಂಪಡೆಯುವಂತೆ ಚೇರ್ ಕಂಪನಿಗೆ ಸೂಚಿಸಲಾಗಿದ್ದು, ಸುಮಾರು 15 ರಿಕ್ಲೇನರ್ ಚೇರ್ ಗಳನ್ನು ಸಿಬ್ಬಂದಿ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ವಿಧಾನಸಭೆ ಮೊಗಸಾಲೆಯಲ್ಲಿ ಶಾಸಕರಿಗೆ ರೆಸ್ಟ್ ಮಾಡೋಕೆ ಹಾಕಲಾಗಿದ್ದ ಚೇರ್‌ಗಳು ಈಗ ಎತ್ತಂಗಡಿಯಾಗಿದೆ.