ಬೆಂಗಳೂರು: ಏ.13: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು, H.D.ಕೋಟೆ ST ಮೀಸಲು ಕ್ಷೇತ್ರದಿಂದ ಕೃಷ್ಣನಾಯಕ್ ಕಣಕ್ಕೆ ಇಳಿಯಲಿದ್ದಾರೆ. ಇತ್ತ ಬಿಜೆಪಿ ನಾಯಕರಿಗೆ K.R.ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, 2ನೇ ಪಟ್ಟಿಯಲ್ಲೂ K.R ಕ್ಷೇತ್ರಕ್ಕೆ ಟಿಕೆಟ್ ಪ್ರಕಟವಾಗಿಲ್ಲ. ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಿದ್ದು, K.R ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದೇ ಬಿಜೆಪಿ ಅಚ್ಚರಿ ಮೂಡಿಸಿದೆ.
ರಾಮದಾಸ್ ಗೆ ಅದೃಷ್ಟ..?
ರಾಮದಾಸ್ಗೆ ಈ ಬಾರಿ ಟಿಕೆಟ್ ತಪ್ಪಿಸಬೇಕೆಂದು ಸಾಕಷ್ಟು ಕಸರತ್ತು ನಡೀತಾಯಿದೆ . ದೆಹಲಿಮಟ್ಟದಲ್ಲಿ ರಾಜಕೀಯ ಜೋರಿದ್ದು , ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ,ರಾಜೀವ್ ತೀವ್ರ ಪೈಪೋಟಿ ತೋರಿದ್ದಾರೆ . ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಹೆಸರು ತೆರೆಮರೆಯಲ್ಲಿ ಓಡಾಡ್ತಿದ್ದು , ಅಂತಿಮವಾಗಿ ಹೈಕಮಾಂಡ್ ಯಾರಿಗೆ ಬಹುಪರಾಕ್ ಹೇಳಲಿದೆ ಅನ್ನೋದು ಸದ್ಯದ ಕೌತುಕವಾಗಿದೆ.
ಬಿಜೆಪಿ ಭದ್ರಕೋಟೆ..
ಕೆಆರ್ ಕ್ಷೇತ್ರ ಕಳೆದ 30 ವರ್ಷದಿಂದ ಬಿಜೆಪಿ ಭದ್ರಕೋಟೆ. ಬಹುಪಾಲು ಇಲ್ಲಿನ ಜನ ಬಿಜೆಪಿಗೆ ಜೈ ಅಂದಿದ್ದಾರೆ . ಆದ್ರೆ ಹಾಲಿ ಶಾಸಕ ರಾಮದಾಸ್ಗೆ ಟಿಕೆಟ್ ನೀಡದಂತೆ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಹೈ ಕಮಾಂಡ್ಗೆ ಮನವಿ ಮಾಡಿದ್ದಾರೆ . ಈ ಕಾರಣದಿಂದಲೇ ಸಾಕಷ್ಟು ಅಳೆದು ತೂಗಿ ಟಿಕೆಟ್ ಘೋಷಣೆಗೆ ಹೈ ಕಮಾಂಡ್ ಮುಂದಾಗಿದೆ . ಈಗಾಗಲೇ ಶಾಸಕ ರಾಮದಾಸ್ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿದೆ ಎನ್ನಲಾಗಿದೆ
ಬುಧವಾರ ರಾತ್ರಿ ಹೈ ಡ್ರಾಮಾ..!
ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ಮಾಡದ ಹಿನ್ನೆಲೆ ಶಾಸಕ ರಾಮದಾಸ್ ಕಚೇರಿ ಮುಂದೆ ಬುಧವಾರ ಕಾರ್ಯಕರ್ತರು ಜಮಾಯಿಸಿದ್ರು .ಮೈಸೂರಿನ ಚಾಮುಂಡಿಪುರಂ ನಿವಾಸದ ಬಳಿ ಇರುವ ಕಚೇರಿ ಮುಂದೆ ಹೈಡ್ರಾಮಾ ನಡೆಯಿತು. ಶಾಸಕ ರಾಮದಾಸ್ಗೆ ಟಿಕೆಟ್ ಘೋಷಣೆ ಮಾಡದ್ದಕ್ಕೆ ಆಕ್ರೋಶ ವ್ಯಕ್ತವಾಯ್ತು. ಟಿಕೆಟ್ ನೀಡದಿರುವುದಕ್ಕೆ ಕಣ್ಣೀರಿಟ್ಟ ಮಹಿಳಾ ಕಾರ್ಯಕರ್ತೆಯರು , ಖಂಡಿತವಾಗಿಯೂ ರಾಮದಾಸ್ ಅವ್ರಿಗೆ ಟಕೆಟ್ ಕೊಡ್ಬೇಕು ಅಂತ ಆಗ್ರಹಿಸಿದ್ರು. ಈ ವೇಳೆ ಬಿಜೆಪಿ ಕಾರ್ಯಕರ್ತ ವಿಷ ಕುಡಿಯಲು ಯತ್ನಿಸಿದ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ನಲ್ಲೂ ಪೈಪೋಟಿ..
ಬಿಜೆಪಿಯಂತೆ ಕಾಂಗ್ರೆಸ್ನಲ್ಲೂ ಕೆಆರ್ ಕ್ಷೇತ್ರದ ರಣಕಲಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಮಾಜಿ ಶಾಸಕ ಎಂ.ಕೆ. ಸೋಮಶೇಖರ್ , ಯುವ ಮುಖಂಡರಾದ ಪ್ರದೀಪ್ ಕುಮಾರ್ , ನವೀನ್ ಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ . ಬಹುತೇಕ ಮುಂದಿನ 2 ದಿನಗಳಲ್ಲಿ ಎಲ್ಲಾ ಕೌತುಕಕ್ಕೂ ತೆರೆಬೀಳುವ ಸಾಧ್ಯತೆ ಇದೆ.