ಸೆಂಟ್ರಲ್ ವಿಸ್ಟಾ ಯೋಜನೆಯ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪೋಟೋ ಒಂದು ಎಲ್ಲಡೆ ವೈರಲ್ ಆಗಿದೆ. ಪೋಟೋದಲ್ಲಿ ಪ್ರಧಾನಿಯ ಛಾಯಾಚಿತ್ರ ತೆಗೆಯಲು ಫೋಟೊಗ್ರಾಫರ್ ನೆಲದ ಮೇಲೆ ಮಲಗಿದ್ದು ಈ ಪೋಟೋವನ್ನು ಇಟ್ಟುಕೊಂಡಿ ಪ್ರದಾನಿ ಮೋದಿ ಮತ್ತು ಬಿಜೆಪಿಯನ್ನು ಟ್ರಾಲ್ ಮಾಡಲಾಗಿತ್ತು. ಆದರೆ ಈ ಪೋಟೋ ಹಿಂದಿನ ಅಸಿಲಿಯತ್ತು ಬೂಮ್ (ಪ್ಯಾಕ್ಟ್ ಚೆಕ್) ವೆಬ್ ಸೈಟ್ ಬಹಿರಂಗಪಡಿಸಿದೆ.
ಅಮೇರಿಕಾ ಪ್ರವಾಸದಿಂದ ಹಿಂದಿರುಗಿದ ಪ್ರಧಾನ ಮಂತ್ರಿ ಸೆಪ್ಟೆಂಬರ್ 26, 2021 ರಂದು ಹೊಸ ಸಂಸತ್ ಭವನದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚಿನ ಸಮಯ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದ್ದರು. ಹೀಗೆ ಭೆಟಿ ನೀಡಿದ ಮೋದಿ ಅವರ ಛಾಯಾಚಿತ್ರಗಳನ್ನು ತೆಗೆದಿದ್ದು ಅವರ ಅಧೀಕೃತ ಪೇಸ್ ಬುಕ್ ಟ್ವೀಟರ್ ನಲ್ಲಿ ಹಾಕಿಕೊಂಡಿದ್ದರು. ‘ಫೋಟೋ-ಆಪ್’ ಪೋಟೋವನ್ನು ಪೋಸ್ಟ್ ಮಾಡಿ ಮೋದಿಯವರ ಈ ಭೇಟಿಯನ್ನು ಪ್ರತಿಪಕ್ಷಗಳು ಟೀಕಿಸಿದ್ದವು. ಈ ಪೋಟೋದ ಅಸಲಿಯತ್ತನ್ನು ತಿಳಿಯದ ಪ್ರತಿಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮುಖಭಂಗಕ್ಕೊಳಗಾಗಿದ್ದಾರೆ.
ಸೆಂಟ್ರಲ್ ವಿಸ್ಟಾ ಎಂಬುದು ದೆಹಲಿಯ 3.2 ಕಿಮೀ ವಿಸ್ತಾರ ಪ್ರದೇಶ ಸೇರಿದಂತೆ ಭಾರತದ ಕೆಲವು ಐತಿಹಾಸಿಕ ಹೆಗ್ಗುರುತುಗಳನ್ನು ಪುನರ್ ಅಭಿವೃದ್ಧಿಪಡಿಸುವ ಮೋದಿ-ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಚಲನಚಿತ್ರ ನಿರ್ಮಾಪಕ ಅವಿನಾಶ್ ದಾಸ್, “ಕ್ಯಾ ಆಂಗಲ್ ಹೈ ಫೋಟೋ” ಎಂದು ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಕೀಲರಾದ ದೀಪಿಕಾ ಸಿಂಗ್ ರಜಾವತ್ ಕೂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ರೋಹನ್ ಗುಪ್ತಾ ಕೂಡ “ತಿಂಗಳ ಬೆಸ್ಟ್ ಫೋಟೋಗ್ರಾಫರ್” ಎಂದು ಹೇಳುತ್ತಾ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿಯೂ ಅದೇ ಫೋಟೋ ವೈರಲ್ ಆಗಿದೆ.
ವಾಸ್ತವಾಂಶ ಪರಿಶೀಲನೆ – Fact Check
ವೈರಲ್ ಫೋಟೋದಲ್ಲಿ “ಇಂಡಿಯನ್ ಆರ್ಮಡಾ” ನ ವಾಟರ್ ಮಾರ್ಕ್ ಸ್ಪಷ್ಟವಾಗಿ ಕಾಣುತ್ತಿದೆ. ವಿಡಂಬನಾತ್ಮಕ ಟ್ವಿಟರ್ ಹ್ಯಾಂಡಲ್ “@indian_armada” ಇದೇ ಫೋಟೋವನ್ನು ಸೆಪ್ಟೆಂಬರ್ 27, 2021 ರಂದು ಪೋಸ್ಟ್ ಮಾಡಿದೆ.
ನಂತರ ನಾವು ಮೂಲ ಚಿತ್ರವನ್ನು ಪತ್ತೆಹಚ್ಚಲು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆವು ಮತ್ತು ಫೋಟೋವನ್ನು ನ್ಯೂಸ್ 18 ಲೇಖನದಲ್ಲಿ ಸೆಪ್ಟೆಂಬರ್ 26, 2021 ರಂದು ಪ್ರಕಟಿಸಲಾಗಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಅದೇ ದಿನಾಂಕದಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಬೂಮ್ ಸಹ Pxfuel ಹೆಸರಿನ ಸ್ಟಾಕ್ ಫೋಟೋ ವೆಬ್ಸೈಟ್ನಲ್ಲಿ ಛಾಯಾಗ್ರಾಹಕರ ಚಿತ್ರವನ್ನು ಕೀವರ್ಡ್ ಸರ್ಚ್ ಮಾಡಿದಾಗ ಸಿಕ್ಕಿದೆ. ಫೋಟೋದ ಬಲದಿಂದ ಎಡಕ್ಕೆ ಮಿರರ್ ಇಮ್ಯಾಜ್ ಮಾಡಿ ಛಾಯಾಚಿತ್ರವನ್ನು ಕಟ್ ಮಾಡಿ ಮೋದಿ ಪೋಟೋ ಜೊತೆಗೆ ಜೋಡಿಸಲಾದ ಪೋಟೀವನ್ನು ಸಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಮೂಲ ಚಿತ್ರಗಳು ಮತ್ತು ಮಾರ್ಫ್ ಮಾಡಿದ ಚಿತ್ರ ಎರಡೂ ಚಿತ್ರವನ್ನು ಕೆಳಗೆ ಕಾಣಬಹುದು.