ರಾಜ್ಯದಲ್ಲಿ ಶಕ್ತಿ ಯೋಜನೆ (Shakthi Scheme) ಜಾರಿಯಾಗಿದ್ದರಿಂದ ಕೆಎಸ್ಆರ್ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ಸಾರಿಗೆ ಬಸ್ಗಳಲ್ಲಿ ಮಹಿಳೆಯರ ( womens ) ಪ್ರಯಾಣ ಹೆಚ್ಚಾಗಿದೆ. ಇದರಿಂದ ಬಸ್ಗಳು( Bus ) ಓವರ್ ರಶ್ ಆಗ್ತಾ ಇದೆ. ಹೀಗಾಗಿ ಬಸ್ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೇಶನ್ ( ksrtc staff and workers federation ) ಆಗ್ರಹಿಸಿದೆ.

ಸದ್ಯದ ಮಟ್ಟಿಗೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಇದು ಒಂದು ರೀತಿಯಾಗಿ ಒಳ್ಳೆಯ ವಿಚಾರವಾದ್ರು, ಬಸ್ಗಳ ಸಂಖ್ಯೆ ಕಡಿಮೆಯಾಗಿದೆ. ಚಾಲಕರು ಮತ್ತು ನಿರ್ವಾಹಕರು ( bus drivers and conductors ) ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಇದಕ್ಕೆ ಬಸ್ ಸಂಖ್ಯೆ ಹೆಚ್ಚಿಸುವುದೊಂದೇ ಪರಿಹಾರ ಅಂತ ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್, ಗೌರವಾಧ್ಯಕ್ಷ ಸಿದ್ಧನಗೌಡ ಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಖಾಸಗಿ ಬಸ್ಗಳು ಸಾಕಷ್ಟು ಇವೆ. ಆದ್ರೆ ಈಗ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಸಿಕ್ಕಿರೋದ್ರಿಂದ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿದೆ. ದೇವರಾಜ ಅರಸು ಕಾಲದಲ್ಲಿ ದಿ ಕಾಂಟ್ರ್ಯಾಕ್ಟ್ ಕ್ಯಾರೇಜಸ್ ಅಬಾಲಿಷನ್ ಆಯಕ್ಟ್-1976 ಜಾರಿ ಮಾಡಿದ್ದರಿಂದಾಗಿನೇ ಇವತ್ತು ಕರ್ನಾಟಕದ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆ ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯೋದಕ್ಕೆ ಸಾಧ್ಯವಾಯಿತು.
ಆದ್ರೆ ಆವಾಗ ಆಗ ಮಂಕಾಗಿದ್ದ ಖಾಸಗಿ ಬಸ್ ನೌಕರರಿಗೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡಲಾಗಿತ್ತು. ಈಗ ಖಾಸಗಿ ಬಸ್ಗಳನ್ನು ನಿಗಮಗಳಿಗೆ ತೆಗೆದುಕೊಂಡು, ಸಮಗ್ರ ಪ್ರದೇಶ ಯೋಜನೆ ಅಂದ್ರೆ ಕಾಂಪ್ರಹೆನ್ಸಿವ್ ಏರಿಯಾ ಸ್ಕೀಮ್ ಜಾರಿ ಮಾಡಬೇಕು ಅಂತ ಒತ್ತಾಯವನ್ನ ಮಾಡಿದ್ದಾರೆ.
ಕೆಎಸ್ಆರ್ಟಿಸಿ ಸಾರಿಗೆ ನಿಗಮದಲ್ಲಿ ಈಗ 16,969 ಹುದ್ದೆಗಳು ಖಾಲಿ ಇದೆ. ಅವಿಗಳನ್ನ ಭರ್ತಿ ಮಾಡಬೇಕು. ಇದನ್ನ ಹೊರತು ಪಡಿಸಿದ್ರೆ ರಾಜ್ಯದಲ್ಲಿ ನಿಗಮದ ಬಸ್ಗಳು ಹೋಗದ ಸುಮಾರು 2,500ಕ್ಕೂ ಅಧಿಕ ಹಳ್ಳಿಗಳನ್ನ ಶ್ರೀನಿವಾಸಮೂರ್ತಿ ಅವರ ಏಕಸದಸ್ಯ ಸಮಿತಿ ಗುರುತಿಸಿದೆ. ಅಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಆ ಮೂಲಕ ಸಾರಿಗೆ ಇಲಾಖೆಗೆ ಪುನಶ್ಚೇತನ ಕೂಡ ಸಿಗುತ್ತದೆ. ಜೋತೆಗೆ ಶಕ್ತಿ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗೋದಕ್ಕೆ ಕೂಡ ಸಹಕಾರಿ ಆಗಲಿದೆ ಅಂತ ತಿಳಿಸಿದ್ದಾರೆ.