ಸಂಪೂರ್ಣವಾಗಿ ಮಣ್ಣಿನ ಮತ್ತು ಮರುಬಳಕೆಯ ಮರದಿಂದ ಮಾಡಿದ ಪರಿಸರ ಸ್ನೇಹಿ ಮನೆಯಲ್ಲೇ ಬಾಲ್ಯ ಕಳೆದವರು ನಾವೆಲ್ಲಾ. ಆದರೆ ಈ ಕಾಲದಲ್ಲಿ, ಅದರಲ್ಲೂ ಬೆಂಗಳೂರಿನಂತಹಾ ಮಹಾನಗರದಲ್ಲಿ ಇಂತಹ ಮನೆಯಲ್ಲಿ ವಾಸಿಸುವುದನ್ನು ಊಹಿಸಲು ಸಾಧ್ಯವಿದೆಯೇ? 28 ವರ್ಷ ಇಂಗ್ಲಡಿನಲ್ಲಿದ್ದು ನಂತರ 2018ರಲ್ಲಿ ಭಾರತಕ್ಕೆ ಮರಳಿ ಪರಿಸರ ಸ್ನೇಹಿ ಸುಸ್ಥಿರ ಮನೆಯನ್ನು ಕಟ್ಟಿ ಬದುಕು ಸಾಗಿಸುತ್ತಿರುವ ಬೆಂಗಳೂರಿನ ಬಾಲಾಜಿ ಮತ್ತು ವಾಣಿ ಕಣ್ಣನ್ ದಂಪತಿ ಸಾಧ್ಯ ಎಂದು ಹೇಳುತ್ತಿರುವುದೇ ಅಲ್ಲದೆ ತಮ್ಮ ಮಣ್ಣಿನ ಮನೆಯನ್ನು ತುಂಬ ಉಲ್ಲಾಸಕರವಾಗಿ ಕಾಣುವಂತೆ ಇಟ್ಟುಕೊಂಡಿದ್ದಾರೆ.
2009 ರಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ ಮಗುವಿನ ನ್ಯಾಪ್‌ಕಿನ್‌ಗಳು, ಪ್ಲಾಸ್ಟಿಕ್ ಬಾಟಲಿಗಳು, ಬೇಬಿ ಫೀಡ್ ಬಾಟಲಿಗಳ ಸಂಖ್ಯೆಯನ್ನು ಲೆಕ್ಕಾಚಾರ ಮಾಡುವಾಗ ಇದು ಎಷ್ಟು ಖರ್ಚು ಬೇಡುತ್ತದೆ ಅನ್ನುವುದು ಮಾತ್ರವಲ್ಲದೆ ಎಷ್ಟು ಪ್ರಕೃತಿ ವಿರೋಧಿ ಅನ್ನೋದು ಮೊದಲ ಬಾರಿ ಅರಿವಿಗೆ ಬಂತು ಎನ್ನುತ್ತಾರೆ ವಾಣಿ. ಹಾಗಾಗಿ ಅವರು ಪರ್ಯಾಯ ಮರುಬಳಕೆಯ ಆಯ್ಕೆಗಳನ್ನು ಹುಡುಕಿ ಯಶಸ್ವಿಯಾದರು . ಆಗಲೇ ಅವರೊಳಗೆ ಪ್ರಕೃತಿ ಸ್ನೇಹಿ ಮನೆಯ ಕಲ್ಪನೆಯೂ ಮೊಳಕೆಯೊಡೆದಿತ್ತು. ಆದರೆ ಅದು ಸಾಕಾರವಾದದ್ದು ಮಾತ್ರ 2020ರಲ್ಲಿ ಬೆಂಗಳೂರಿಗೆ ಬಂದು ಮನೆ ಹುಡುಕಲು ಪ್ರಾರಂಭಿಸಿದಾಗ.
2020ರಲ್ಲಿ ವಾಸಕ್ಕೊಂದು ಮನೆ ಹುಡುಕಲು ಪ್ರಾರಂಭಿಸಿದ ದಂಪತಿ ಬೆಂಗಳೂರಿನ ಅಪಾರ್ಟ್ಮೆಂಟ್ ಗಳ ಬೆಲೆ ನೋಡಿ ಆಘಾತಕ್ಕೀಡಾಗಿದ್ದರು. “ಆಗಲೇ ನಾವು, ಒಂದು ದಶಕದಿಂದ ಸುಸ್ಥಿರ ಮನೆಗಳನ್ನು ನಿರ್ಮಿಸುತ್ತಿರುವ ಬೆಂಗಳೂರಿನ ಮಹಿಜಾ ಸಂಸ್ಥೆಯ ಬಗ್ಗೆ ತಿಳಿದುಕೊಂಡೆವು ಮತ್ತು ಅವರನ್ನು ಸಂಪರ್ಕಿಸಿದೆವು” ಎಂದು ವಾಣಿ ಹೇಳುತ್ತಾರೆ. “ಆದರೆ ನಮ್ಮ ಆರಂಭವೇ ಉತ್ತಮವಾಗಿತ್ತು. 2400 ಚದರ ಅಡಿಯ ಭೂಮಿ ಮತ್ತದರ ಮೇಲೆ ಸುಸ್ಥಿರ ಪರಿಸರ ಸ್ನೇಹಿ ಮನೆ ಕಟ್ಟಲು ಸಿದ್ದರಿರುವ ಆರ್ಕಿಟೆಕ್ಟ್ ನಮಗೆ ದೊರಕಿದರು” ಎನ್ನುತ್ತಾರೆ.

ಈ ಬಗ್ಗೆ ಹೆಚ್ಚಿನ ವಿವರ ನೀಡುವ ಮೂರು ವರ್ಷಗಳಿಂದ ಮಹಿಜಾ ಅವರೊಂದಿಗೆ ಕೆಲಸ ಮಾಡುತ್ತಿರುವ ವಾಸ್ತುಶಿಲ್ಪಿ ಅನಿರುದ್ಧ್ ಜಗನ್ನಾಥನ್ ‘ಮನೆಯನ್ನು ಸಾಧ್ಯವಾದಷ್ಟು ಕಡಿಮೆ ಸಾಂಪ್ರದಾಯಿಕವಾಗಿ ಕಾಣುವಂತೆ ಮಾಡುವುದೇ’ ಕಲ್ಪನೆಯಾಗಿತ್ತು ಎನ್ನುತ್ತಾರೆ.
ಮನೆಗೆ ಬಳಸಿದ ಇಟ್ಟಿಗೆಗಳು
ಆರು ಸಮಾಗ್ರಿಗಳನ್ನು ಮಿಶ್ರ ಮಾಡಿ ಮನೆಯ ಇಟ್ಟಿಗೆಗಳನ್ನು ರಚಿಸಲಾಗಿದೆ. ಶೇಕಡಾ ಏಳರಷ್ಟು 7 ರಷ್ಟು ಸಿಮೆಂಟ್, ಮಣ್ಣು, ಕೆಂಪು ಮಣ್ಣು, ಸ್ಟೀಲ್ ಬ್ಲಾಸ್ಟ್, ಸುಣ್ಣದ ಕಲ್ಲು ಮತ್ತು ನೀರನ್ನು ಮಿಶ್ರಣಕ್ಕೆ ಬಳಸಲಾಗಿದೆ. ಈ ಇಟ್ಟಿಗೆಗಳನ್ನು ಬಳಸಿ ಗೋಡೆಗಳನ್ನು ಮಾಡಲಾಗಿದೆ. ಆದರೆ ಚಾವಣಿಯನ್ನು ಕೇವಲ ಮಣ್ಣಿನ ಬ್ಲಾಕ್ ಬಳಸಿ ಮಾಡಲಾಗಿದೆ.
ಸ್ಟೀಲ್ ರಾಡ್‌ಗಳು
“ಸಾಮಾನ್ಯವಾಗಿ ಉಕ್ಕಿನ ರಾಡ್‌ಗಳ ಮಧ್ಯೆ ಕಾಂಕ್ರೀಟ್ ಸುರಿದು ಸ್ಲ್ಯಾಬ್ ನಿರ್ಮಾಣ ಮಾಡಲಾಗುತ್ತದೆ. ನಾವು ಈ ಈ ಸಾಂಪ್ರದಾಯಿಕ ವಿಧಾನದ ಬದಲಿಗೆ, ಸ್ಕ್ರ್ಯಾಪ್ ಕೀಬೋರ್ಡ್‌ಗಳು, ತೆಂಗಿನ ಚಿಪ್ಪುಗಳು ಇತ್ಯಾದಿಗಳೊಂದಿಗೆ ಬೇಸ್ ಅನ್ನು ರಚಿಸಿ ಮತ್ತು ಅದರ ಮಧ್ಯೆ ಮಣ್ಣು ತುಂಬಿ ಸ್ಲ್ಯಾಬ್ ರಚಿಸಿದೆವು” ಎನ್ನುತ್ತಾರೆ ಅನಿರುದ್ಧ್ ಜಗನ್ನಾಥ್.

ಕೈತೋಟ
ಮೆಂತೆ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಇತ್ಯಾದಿಗಳನ್ನು ಹೊಂದಿರುವ 1000 ಅಡಿಯ ಕೈತೋಟವಿದ್ದು, ಇದನ್ನು ದಂಪತಿ ತಮ್ಮ ಆಹಾರದಲ್ಲಿ ಬಳಸುತ್ತಾರೆ. ಆದರೆ ವಾಣಿಯವರು ಹೇಳುವಂತೆ ಇದು ಒಂದೆರಡು ವರ್ಷಗಳ ಹಿಂದೆ ಎರಡು ಎಕರೆಯಲ್ಲಿ ಆರಂಭಿಸಿದ ಸಾವಯವ ಕೃಷಿಯ ಕಿರು ಆವೃತ್ತಿಯೇ ಆಗಿದ್ದು ಅಡುಗೆಗೆ ಬೇಕಾಗಿರುವ ಎಲ್ಲಾ ಪದಾರ್ಥಗಳೂ ಅವರಿಗೆ ಕೃಷಿಯಿಂದಲೇ ಲಭ್ಯವಾಗುತ್ತದೆ.
ಮರ
ಈ ಮನೆಯಲ್ಲಿ ಬಳಸಲಾಗಿರುವ ಈಗಾಗಲೇ ಕೆಡವಲಾಗಿರುವ ಮನೆಗಳಿಂದ ತೆಗೆದು ಮರುಬಳಕೆ ಮಾಡಲಾಗಿದೆ.
ಕೂಲಿಂಗ್
ನಮಗೆ ಕೃತಕ ಕೂಲಿಂಗ್ ಅಗತ್ಯವೇ ಇಲ್ಲ ಎನ್ನುತ್ತಾರೆ ವಾಣಿ. “ನಮ್ಮ ಆರ್ಕಿಟೆಕ್ಟ್, ಸಂಜೆ 6.30 ರ ನಂತರ ಮಾತ್ರ ದೀಪಗಳನ್ನು ಆನ್ ಮಾಡುವ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಿದ್ದು, ಸನ್‌ರೂಫ್‌ಗಳು ಉಳಿದ ಸಮಯದಲ್ಲಿ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತವೆ” ಎನ್ನುತ್ತಾರೆ ಅಲ್ಲದೆ ಬೆಳಕಿನ ಪ್ರತಿಫಲನ ಮತ್ತು ನೈಸರ್ಗಿಕವಾಗಿ ಮನೆ ತಂಪಾಗಿರುವಂತೆಯೂ ಮನೆಯನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಅವರು.

ಸೌರಶಕ್ತಿ
ಕುಟುಂಬಕ್ಕೆ ಅಗತ್ಯವಿರುವ ವಿದ್ಯುತ್ ಅನ್ನು ಸೌರಶಕ್ತಿ ನೀಡುತ್ತದೆ. ಆನ್ ಗ್ರಿಡ್ ವ್ಯವಸ್ಥೆಯ ಮೂಲಕ ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್ ಅನ್ನು ಪ್ರತಿ ಯೂನಿಟ್‌ಗೆ 3 ರೂ.ಗೆ ಮರಳಿ ಗ್ರಿಡ್‌ಗೆ ಕಳುಹಿಸಲಾಗುತ್ತದೆ ಎಂದು ವಾಣಿ ಹೇಳುತ್ತಾರೆ. 4.8 KW ನ 11 ಸೌರ ಫಲಕಗಳಿದ್ದು ಈ ದಂಪತಿ ವಿದ್ಯುತ್ ಬಿಲ್ ಪಾವತಿಸಬೇಕಾಗಿ ಬರುವುದಿಲ್ಲ.
ನೀರಿನ ಸರಬರಾಜು ಮನೆಯಿಂದ 200 ಮೀ ದೂರದಲ್ಲಿರುವ ಸಮುದಾಯದ ಬೋರ್‌ವೆಲ್‌ಗಳು ಇವರಿಗೆ ನೀರು ಒದಗಿಸುತ್ತವೆ.






