• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮರಗೆಣಸಿನ ಎಲೆಯಿಂದ ವಿದ್ಯುತ್ ಉತ್ಪಾದಿಸಿದ ತಿರುವನಂತಪುರದ ಸಂಶೋಧನಾ ಸಂಸ್ಥೆ : ಇಂಧನ ಬಿಕ್ಕಟ್ಟಿಗೆ ಸಿಗಲಿದೆಯೇ ಪರಿಹಾರ?

ಫಾತಿಮಾ by ಫಾತಿಮಾ
May 3, 2022
in ದೇಶ
0
ಮರಗೆಣಸಿನ ಎಲೆಯಿಂದ ವಿದ್ಯುತ್ ಉತ್ಪಾದಿಸಿದ ತಿರುವನಂತಪುರದ ಸಂಶೋಧನಾ ಸಂಸ್ಥೆ : ಇಂಧನ ಬಿಕ್ಕಟ್ಟಿಗೆ ಸಿಗಲಿದೆಯೇ ಪರಿಹಾರ?
Share on WhatsAppShare on FacebookShare on Telegram

ದೇಶದಲ್ಲಿ ಕಲ್ಲಿದ್ದಲು ಪೂರೈಕೆಯನ್ನು ಸರಾಗಗೊಳಿಸುವ ಸಲುವಾಗಿ ರೈಲ್ವೆಯು ಕಳೆದ ಎರಡು ವಾರಗಳಲ್ಲಿ ಪ್ರತಿದಿನ 16 ಮೇಲ್ ಮತ್ತು ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ. ಮೇ 24 ರವರೆಗೆ ಒಟ್ಡು 670 ಪ್ಯಾಸೆಂಜರ್ ರೈಲುಗಳ ಟ್ರಿಪ್‌ಗಳನ್ನು ಮೊಟಕುಗೊಳಿಸಲಾಗುತ್ತದೆ ಎಂದೂ ವರದಿಯಾಗಿವೆ. ಇನ್ನೊಂದೆಡೆ ಭಾರತವು ಪ್ರಸ್ತುತ ಆರು ವರ್ಷಗಳಲ್ಲಿ ಅತ್ಯಂತ ಕೆಟ್ಟ ವಿದ್ಯುತ್ ಕೊರತೆಯನ್ನೂ ಎದುರಿಸುತ್ತಿದೆ. ಮತ್ತೊಂದೆಡೆ ರಷ್ಯಾ ಯುಕ್ರೇನ್ ಯುದ್ಧವು ತೈಲ ಬೆಲೆಯ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ.

ADVERTISEMENT

ಇಂಧನ ಬಿಕ್ಕಟ್ಟಿನ ಬಗ್ಗೆ ಹೆಚ್ಚುತ್ತಿರುವ ಈ ಕಳವಳಗಳ ಮಧ್ಯೆ, ದೇಶದ ಅಗ್ರಗಣ್ಯ ಸಂಶೋಧನಾ ಸಂಸ್ಥೆಯಾದ ಸೆಂಟ್ರಲ್ ಟ್ಯೂಬರ್ ರಿಸರ್ಚ್ ಇನ್ಸ್ಟಿಟ್ಯೂಟ್ ಟಪಿಯೋಕಾ ಎಲೆಗಳಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಪ್ರಾಯೋಗಿಕ ಯಶಸ್ಸನ್ನು ಸಾಧಿಸಿದೆ ಎಂದು ಹೇಳಿಕೊಂಡಿದೆ.

ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಅಡಿಯಲ್ಲಿ ತಿರುವನಂತಪುರಂನಲ್ಲಿರುವ ಸೆಂಟ್ರಲ್ ಟ್ಯೂಬರ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಟಿಸಿಆರ್ಐ) ಹೊಸ ಆವಿಷ್ಕಾರದೊಂದಿಗೆ ಬಂದಿದ್ದು, ಇದು ಶುದ್ಧ ಇಂಧನ ಮೂಲಗಳ ಆವಿಷ್ಕಾರದಲ್ಲಿ ತೊಡಗಿರುವ ಭಾರತಕ್ಕೆ ಸಿಕ್ಕ ಯಶಸ್ಸು ಎಂದೇ ಪರಿಗಣಿಸಲಾಗುತ್ತಿದೆ. ಅಣುಶಕ್ತಿ ಇಲಾಖೆಯಿಂದ ಅನುದಾನಿತ ಯೋಜನೆಯಡಿಯಲ್ಲಿ ಸಿಟಿಸಿಆರ್‌ಐನ ಪ್ರಧಾನ ವಿಜ್ಞಾನಿ ಡಾ.ಸಿ.ಎ.ಜಯಪ್ರಕಾಶ್ ನೇತೃತ್ವದಲ್ಲಿ ಈ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು.

‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆಯಡಿ ಪ್ರೆಸ್ ಇನ್‌ಫರ್ಮೇಶನ್ ಬ್ಯೂರೋದ ಆಶ್ರಯದಲ್ಲಿ ಶುಕ್ರವಾರ ಸಿಟಿಸಿಆರ್‌ಐಗೆ ಭೇಟಿ ನೀಡಿದ ಹಿಮಾಚಲ ಪ್ರದೇಶದ ಪತ್ರಕರ್ತರ ಗುಂಪಿನ ಮುಂದೆ ಈ ಪ್ರಯೋಗವನ್ನು ಪ್ರಸ್ತುತಪಡಿಸಲಾಗಿದೆ ಎಂದು ಸಂಶೋಧನಾ ಕೇಂದ್ರದ ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.

“ಟ್ಯಾಪಿಯೋಕಾ ಎಲೆಗಳಿಂದ ಕೀಟನಾಶಕ ಅಣುಗಳನ್ನು ಯಾಂತ್ರಿಕವಾಗಿ ಹೊರತೆಗೆದ ನಂತರದ ತ್ಯಾಜ್ಯವನ್ನು ಮೆಥನೋಜೆನೆಸಿಸ್ಗೆ ಒಳಪಡಿಸಲಾಯಿತು. ತರುವಾಯ, ಅನಪೇಕ್ಷಿತ ಅನಿಲಗಳನ್ನು ಸ್ಕ್ರಬ್ ಮಾಡುವ ಮೂಲಕ ಅನಿಲ ಸಂಕೀರ್ಣದಿಂದ ಶುದ್ಧ ಮೀಥೇನ್ ಅನ್ನು ಪ್ರತ್ಯೇಕಿಸಲಾಯಿತು. ಅಂತಿಮವಾಗಿ, ಮಿಥೇನ್ ಅನ್ನು ಬಲೂನ್‌ಗಳಲ್ಲಿ ಸಂಗ್ರಹಿಸಲಾಯಿತು ಮತ್ತು ಪವರ್ ಹಾಕ್ ಬಯೋಗ್ಯಾಸ್ ಜನರೇಟರ್‌ಗಳ ತ್ರಿಶೂರ್ ಮೂಲದ ಟೆಕ್ನೋಪ್ರೆನಿಯರ್ ಫ್ರಾನ್ಸಿಸ್ ಒದಗಿಸಿದ ಕಸ್ಟಮೈಸ್ ಮಾಡಿದ ಜನರೇಟರ್‌ನ ಸಹಾಯದಿಂದ ವಿದ್ಯುತ್ ಉತ್ಪಾದನೆಗೆ ಬಳಸಲಾಯಿತು.” ಎಂದು ಅದು ಹೇಳಿದೆ. ಮರಗೆಣಸಿನಿಂದ (ಟಪಿಯೋಕಾ) ವಿದ್ಯುತ್ ಉತ್ಪಾದಿಸಲ್ಪಟ್ಟ ಕಾರಣ, ಅಂತಿಮ ಉತ್ಪನ್ನವನ್ನು CASSA DIPAH ಎಂದು ನಾಮಕರಣ ಮಾಡಲಾಗಿದೆ. “ಪ್ರತಿ ಹೆಕ್ಟೇರ್‌ಗೆ ಸುಮಾರು 5 ಟನ್ ಎಲೆಗಳು ಮತ್ತು ಕೊಂಬೆಗಳಷ್ಟು ಟಪಿಯೋಕಾ ಕೊಯ್ಲನ್ನು ಬಳಸಲಾಗಿದೆ. ಈ ಪ್ರಯೋಗದ ಯಶಸ್ಸಿನಿಂದ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಇದು ತೋರಿಸುತ್ತದೆ ”ಎಂದೂ ಅದು ಹೇಳಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ, 7 ಕೆಜಿ ಕೆಸುವಿನ ಎಲೆಗಳ ತ್ಯಾಜ್ಯದಿಂದ 1kwa ವಿದ್ಯುತ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅನ್ವೇಷಣೆಗಳು ನಡೆದರೆ ಟಪಿಯೋಕಾ ರೈತರಿಗೆ ಇದು ಮತ್ತೊಂದು ಆದಾಯದ ಮೂಲಕ್ಕೆ ಕಾರಣವಾಗಬಹುದು ಎಂದು ಜಯಪ್ರಕಾಶ್ ಹೇಳುತ್ತಾರೆ. ಇದರ ಜೊತೆಗೆ ಇಂಧನ ಮೂಲವಾಗಿಯೂ ಉಪಯೋಗವಾದರೆ ದೇಶದ ಇಂಧನ‌ ಬಿಕ್ಕಟ್ಟಿಗೆ ಅತಿ ದೊಡ್ಡ ಪರಿಹಾರವಾಗಲಿದೆ.

Tags: BJPCongress PartyCovid 19ಇಂಧನ ಬಿಕ್ಕಟ್ಟುನರೇಂದ್ರ ಮೋದಿಬಿಜೆಪಿಮರಗೆಣಸಿನ ಎಲೆರುವನಂತಪುರವಿದ್ಯುತ್ ಉತ್ಪಾದನೆ
Previous Post

ರಾಜಸ್ಥಾನ್ ಗೆ 7 ವಿಕೆಟ್ ಆಘಾತ: ಕೆಕೆಆರ್ ಪ್ಲೇಆಫ್ ಆಸೆ ಜೀವಂತ

Next Post

ಸಮಕಾಲೀನ ಬಸವಣ್ಣ ಮತ್ತು ಸಮಾಜ ಸುಧಾರಣೆ

Related Posts

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..
Top Story

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

by ಪ್ರತಿಧ್ವನಿ
April 30, 2026
0

ಹಾವೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ ಮೇ 4 ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ವವೊ...

Read moreDetails
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
Next Post
ಗೋಹತ್ಯೆ ನಿಷೇಧ ಕಾಯ್ದೆ ಎಫೆಕ್ಟ್ :‌ ಹಿಂದುತ್ವ ರಾಜಕಾರಣ ಹಿಂದೂ ರೈತರಿಗೆ ತಂದಿಟ್ಟ ಆರ್ಥಿಕ ನಷ್ಟ!

ಗೋಹತ್ಯೆ ನಿಷೇಧ ಕಾಯ್ದೆ ಎಫೆಕ್ಟ್ :‌ ಹಿಂದುತ್ವ ರಾಜಕಾರಣ ಹಿಂದೂ ರೈತರಿಗೆ ತಂದಿಟ್ಟ ಆರ್ಥಿಕ ನಷ್ಟ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada