• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಭೆಯಲ್ಲಿ ಸದಸ್ಯರು ಆಡಿದ ಮಾತುಗಳಿಗೆ ಸಂಪೂರ್ಣ ರಕ್ಷಣೆ ಇದೆ: ವಕೀಲ ಪ್ರಭುಲಿಂಗ ನಾವದಗಿ

ಪ್ರತಿಧ್ವನಿ by ಪ್ರತಿಧ್ವನಿ
February 21, 2025
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

“ಸದನ ನಡೆಯಲಿ ಅಥವಾ ಬಿಡಲಿ, ಅಲ್ಲಿ ಆಡಿದ ಮಾತುಗಳಿಗೆ ಸಂಬಂಧಿಸಿದಂತೆ ಸದಸ್ಯರಿಗೆ ಸಂಪೂರ್ಣ ವಿನಾಯಿತಿ ಇರಲಿದೆ ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಬಲವಾಗಿ ಪ್ರತಿಪಾದಿಸಿದರು.

ADVERTISEMENT


ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಳ‌ರ್ ವಿರುದ್ಧ ಅಶ್ಲೀಲ ಹೇಳಿಕೆ ನೀಡಿದ ಆರೋಪ ಸಂಬಂಧ ಬಾಗೇವಾಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಿ ಟಿ ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರ ಸಿ ಟಿ ರವಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪ್ರಕರಣದಲ್ಲಿ ದೂರುದಾರೆಯಾಗಿರುವ ಸಚಿವ ಲಕ್ಷ್ಮಿ ಹೆಬ್ಬಾಳ್ಳರ್ ಬಗ್ಗೆ ಅರ್ಜಿದಾರರಿಗೆ ಗೌರವವಿದೆ. ಶಾಸನಸಭೆಯಲ್ಲಿ ಶಾಸಕರು ನೀಡಿದ ಹೇಳಿಕೆ ಅಥವಾ ಮಾಡಿದ ಚರ್ಚೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಂವಿಧಾನದಲ್ಲಿ ನಿರ್ಬಂಧವಿದೆ. ಸದನದಲ್ಲಿ ಹೇಳಿಕೆಗೆ ಸಂಬಂಧಿಸಿದಂತೆ ಶಾಸಕರಿಗೆ ರಕ್ಷಣೆಯಿದೆ” ಎಂದರು.

“ಸದನ ನಡೆಯುತ್ತಿತ್ತೇ, ಇಲ್ಲವೇ ಎಂದು ಕಾರ್ಯಾಂಗ ಹೇಳಲಾಗದು. ಇದು ಶಾಸಕಾಂಗದ ಭಾಗವೇ? ಇಲ್ಲವೇ ಎಂಬುದನ್ನು ಶಾಸಕಾಂಗವೇ ನಿರ್ಧರಿಸಬೇಕು. ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ಸಭಾಪತಿ ಪ್ರಕರಣವನ್ನು ವಿಸ್ತರಿಸದಂತೆ ಮನವಿ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಇದು ಅತ್ಯಂತ ಪ್ರಮುಖ ವಿಚಾರವಾಗಿದೆ. ಎಫ್‌ಐಆರ್ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದರೆ ರವಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಆಗ ಸಭಾಪತಿಯೂ ನ್ಯಾಯಾಲಯದ ಮುಂದೆ ನಿಂತು ಉತ್ತರಿಸಬೇಕಾಗಿ ಬರಬಹುದು” ಎಂದರು.


ಅಶ್ಲೀಲ ಪದ ಬಳಕೆ ಪ್ರಕರಣ: ಸಿ ಟಿ ರವಿ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಘಟನೆ ನಡೆದಾಗ ಸದನ ಮುಂದೂಡಲ್ಪಟ್ಟಿತ್ತು. ಸಭಾಪತಿ ನೀಡಿರುವ ವರದಿಯಲ್ಲಿ ಸದನ ಚಾಲ್ತಿಯಲ್ಲಿರಲಿಲ್ಲ. ಆಕ್ಷೇಪಾರ್ಹವಾದ ಭಾಷೆ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಸದನ ಮುಂದೂಡಿದ ಸಮಯದಲ್ಲಿ ಶಾಸಕರು (ಆ ಸದನದ ಸದಸ್ಯರು) ನೀಡಿದ ಹೇಳಿಕೆಗೆ ಯಾವುದೇ ರಕ್ಷಣೆ ಇಲ್ಲ. ಈ ಪ್ರಕರಣದಲ್ಲಿ ಹೆಬ್ಬಾಳ್ಳರ್‌ ವಿರುದ್ಧ ಸಿ ಟಿ ರವಿ ನೀಡಿರುವ ಹೇಳಿಕೆ ಸಂಬಂಧ ಪ್ರಕರಣ ದಾಖಲಿಸಿರುವುದು ಸೂಕ್ತವಾಗಿದೆ” ಎಂದರು.
ಈ ಮಧ್ಯೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಪರ ವಕೀಲರು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿತು.

Tags: Belgavi ParlimentBJPcongressCT Ravihigh courtKarnatakaLakshmi hebbalkarMLAMLC CT RaviparlimentPolicePrabhulinga Navadagisiddaramaiah
Previous Post

‘ಡ್ಯೂಡ್‍’ ಚಿತ್ರದ ಹಾಡು ಬಿಡುಗಡೆ ಮಾಡಿದ ಮೇಘನಾ ರಾಜ್‍..!!

Next Post

ಪ್ಲಾಸ್ಟಿಕ್ ನಿಂದ ತಯಾರಿಸಿದಂತಹ ಬಾಕ್ಸ್ ಗಳನ್ನ ಟಿಫನ್ / ಲಂಚ್ ಬಾಕ್ಸ್ ಆಗಿ ಬಳಸುವುದು ಹಾನಿಕಾರಿ- ಯಾಕೆ?

Related Posts

ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೂಡಲೇ ರದ್ದುಪಡಿಸಿ: ರಾಜ್ಯಪಾಲರಿಗೆ IISc ತಜ್ಞರ ವರದಿ! ಕಾರಣವೇನು?
Top Story

ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೂಡಲೇ ರದ್ದುಪಡಿಸಿ: ರಾಜ್ಯಪಾಲರಿಗೆ IISc ತಜ್ಞರ ವರದಿ! ಕಾರಣವೇನು?

by ಪ್ರತಿಧ್ವನಿ
September 1, 2026
0

ಬೆಂಗಳೂರಿನ ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (IISc) ತಜ್ಞರ ತಂಡ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರೊ. ಆಶೀಶ್ ವರ್ಮಾ ನೇತೃತ್ವದ ಸಿವಿಲ್...

Read moreDetails
ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

September 1, 2026
ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

September 1, 2026
ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

September 1, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

September 1, 2026
Next Post
ಪ್ಲಾಸ್ಟಿಕ್ ನಿಂದ ತಯಾರಿಸಿದಂತಹ ಬಾಕ್ಸ್ ಗಳನ್ನ ಟಿಫನ್ / ಲಂಚ್ ಬಾಕ್ಸ್ ಆಗಿ ಬಳಸುವುದು ಹಾನಿಕಾರಿ- ಯಾಕೆ?

ಪ್ಲಾಸ್ಟಿಕ್ ನಿಂದ ತಯಾರಿಸಿದಂತಹ ಬಾಕ್ಸ್ ಗಳನ್ನ ಟಿಫನ್ / ಲಂಚ್ ಬಾಕ್ಸ್ ಆಗಿ ಬಳಸುವುದು ಹಾನಿಕಾರಿ- ಯಾಕೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada