ಸಿ.ಟಿ ರವಿ ಬಂಧನದ ಹಿಂದೆ ಕೊಲೆ ಸಂಚು ಇತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ. ತಮ್ಮನ್ನು ಕೊಲೆ ಮಾಡೋ ಸಂಚಿತ್ತು ಎಂದು ಸ್ವತಃ ಸಿ.ಟಿ.ರವಿ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಏನು ನಡೀತಿದೆ..? ಇದರ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಎಂದಿದ್ದಾರೆ. ಇನ್ನು ಅಧಿಕಾರಿಗಳ ವರ್ತನೆ ನಾವು ಖಂಡಿಸುತ್ತೇವೆ. ಸರ್ಕಾರ ಒಂದೇ ಇರಲ್ಲ. ಬೆಳಗಾವಿ ಕಮೀಷನರ್ ಎಚ್ಚರಿಕೆಯಿಂದ ಇರಬೇಕು. ಸರ್ಕಾರ ಬದಲಾಗತ್ತೆ ಎಚ್ಚರ ಎಂದು ಗುಡುಗಿದ್ದಾರೆ.
ಸಿ.ಟಿ ರವಿ ಬಂಧಿಸಿದ್ದು ಕಾನೂನು ಬಾಹಿರ ಪ್ರಕ್ರಿಯೆ ಎಂದಿರುವ ಪ್ರಹ್ಲಾದ್ ಜೋಶಿ, ಖಾನಾಪೂರ, ಕಬ್ಬಿ ಗದ್ದೆ ಕಡೆ ಕರಕೊಂಡು ಹೋಗ್ತೀರಿ..? ಈ ಬಗ್ಗೆ ಕಮೀಷನರ್ ಅತ್ಯಂತ ಬಾಲಿಶ ಹೇಳಿಕೆ ಕೊಡುತಿದ್ದಾರೆ. ವಿಧಾನಸೌಧಕ್ಕೆ ನುಗ್ಗಿದವರ ಬಂಧನ ಆಗಿಲ್ಲ. ರಾಜಕೀಯವಾಗಿ ಹೋರಾಟ ಮಾಡಿ, ಕಾನೂನು ಹೋರಾಟ ಮಾಡಿ ಎಂದು ಸಿಟಿ ರವಿ ಅವರಿಗೆ ಸಲಹೆ ಕೊಟ್ಟಿದ್ದಾನೆ. ಬೆಳಗಾವಿ ಕಮೀಷನರ್‌ಗೆ ಕಾನೂನಿನ ಪಾಠ ಆಗಬೇಕು. ಇದಕ್ಕೆ ನಾನು ಯಾವುದೇ ಸಹಾಯ ಮಾಡಲು ಸಿದ್ದ ಎಂದಿದ್ದಾರೆ.
ಸುವರ್ಣ ವಿಧಾನ ಸೌಧದಲ್ಲಿ ಆದ ಘಟನೆ ಬಗ್ಗೆ ತರಾತುರಿಯಲ್ಲಿ FIR ಮಾಡಿದ್ದಾರೆ. ಕಂಪ್ಲೇಟ್ ಕೊಟ್ಟವರು ಸಚಿವರ ಆಪ್ತ ಸಹಾಯಕ. ಅವರು ಒಳಗಡೆ ಇದ್ರಾ, ಕಮೀಷನರ್ ಗೆ ಕಾಮನ್ ಸೆನ್ಸ್ ಬೇಡ್ವಾ.? ಬೆಳಗಾವಿ ಕಮೀಷನರ್ IPS ಆಗಲು ಅನ್ ಫಿಟ್ ಎಂದಿದ್ದಾರೆ. ವಿರೋಧ ಪಕ್ಷದ ನಾಯಕರು ದೂರು ಕೊಟ್ಟರು ಇದುವರೆಗೂ ದೂರು ದಾಖಲಾಗಿಲ್ಲ. ಛಲವಾದಿ ನಾರಾಯಣ ಸ್ವಾಮಿ ಹರಿಜನರು ಅಂತಾ ಮಾತಾಡಿಸಿಲ್ವಾ.. ಕಮೀಷನರ್..? ಅದೊಂದು ಸಾಂವಿಧಾನಿಕ ಹುದ್ದೆ ಎಂದಿರುವ ಪ್ರಹ್ಲಾದ್ ಜೋಶಿ, ಗೌರವಾನ್ವಿತ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರು. ಅವರು ಹರಿಜನರು ಅಂತಾ ಅವರನ್ನು ಮಾತಾಡಿಸಿಲ್ವಾ ಎಂದು ಜೋಶಿ ಗರಂ ಆಗಿದ್ದಾರೆ.