• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

18 ವರ್ಷಗಳ ತಪಸ್ಸಿಗೆ ಫಲ ಸಿಗುವ ಕಾಲ ಸನಿಹ – RCB ಕಪ್ ಗೆಲ್ಲಲ್ಲು ಇನ್ನೊಂದೇ ಮೆಟ್ಟಿಲು!

Chetan by Chetan
June 2, 2025
in Top Story, ಕರ್ನಾಟಕ, ಕ್ರೀಡೆ, ದೇಶ, ವಾಣಿಜ್ಯ, ವಿಶೇಷ, ಸ್ಟೂಡೆಂಟ್‌ ಕಾರ್ನರ್
0
18 ವರ್ಷಗಳ ತಪಸ್ಸಿಗೆ ಫಲ ಸಿಗುವ ಕಾಲ ಸನಿಹ – RCB ಕಪ್ ಗೆಲ್ಲಲ್ಲು ಇನ್ನೊಂದೇ ಮೆಟ್ಟಿಲು!
Share on WhatsAppShare on FacebookShare on Telegram

ಕೋಟ್ಯಂತರ ಅಭಿಮಾನಿಗಳ ಪಾಲಿನ ಆ ನಿರೀಕ್ಷೆ ನಿಜವಾಗುವ ಕ್ಷಣ ಬಂದೇ ಬಿಟ್ಟಿದೆ. ಹೌದು ಹಲವು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bangalore) ತಂಡ ಐಪಿಎಲ್ (IPL) ಫೈನಲ್ ಪ್ರವೇಶ ಮಾಡಿದೆ. ಇದುವರೆಗೂ ಕಪ್ ಗೆಲ್ಲದ ಆರ್.ಸಿ.ಬಿ (RCB) ಈ ಬಾರಿ ಕ್ಯೂ ಗೆಲ್ಲೋದು ಪಕ್ಕಾ ಎಂಬ ನಿರೀಕ್ಷೆ ಹುಟ್ಟುಹಾಕಿದೆ. 

ADVERTISEMENT

ಐಪಿಎಲ್ 2025 ರ (ipl 2025) ಕ್ವಾಲಿಫೈಯರ್ 1 ರಲ್ಲಿ (Qualifier 1) ಪಂಜಾಬ್ ಕಿಂಗ್ಸ್ ವಿರುದ್ಧದ ಅದ್ಭುತ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bangalore) ಐಪಿಎಲ್ 2025 ರ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.

ಈ ಮಧ್ಯೆ ನಿನ್ನೆ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಭರ್ಜರಿ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ. ಅಲ್ಲಿಗೆ ಐಪಿಎಲ್ 2025 ರ ಅಂತಿಮ ಕಾಳಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು V/S ಪಂಜಾಬ್ ಕಿಂಗ್ಸ್ ತಂಡ ಕಾದಾಡಲಿವೆ. 

ಈಗಾಗಲೇ ಆರ್.ಸಿ.ಬಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂಬ ವಿಶ್ವಾಸದಲ್ಲಿದ್ದು,ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಕಪ್ ನಮ್ಮದಾಗಬೇಕು ಅಂದ್ರೆ ಮತ್ತೊಮ್ಮೆ ಪಂಜಾಬ್ ತಂಡವನ್ನು ರಾಯಲ್ ಚಾಲೆಂಜರ್ಸ್ ಮಣಿಸಬೇಕಿದೆ. ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಒಟ್ಟು 3 ಪಂದ್ಯಗಳಲ್ಲಿ ಆರ್.ಸಿ.ಬಿ ಮತ್ತು ಪಂಜಾಬ್ ಮುಖಾಮುಖಿಯಾಗಿದ್ದು, ಈ ಪೈಕಿ ಎರಡೂ ಪಂದ್ಯಗಳಲ್ಲಿ ಆರ್.ಸಿ.ಬಿ ಗೆದ್ದು ಬೀಗಿದೆ. 

ಹೀಗಾಗಿ ಫೈನಲ್ಸ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಕಟ್ಟಿಹಾಕುವ ಕಲೆ ಆರ್.ಸಿ.ಬಿ ಆಟಗಾರರಿಗೆ ಚೆನ್ನಾಗಿಯೇ ತಿಳಿದಿದೆ ಎಂದೇ ಭಾವಿಸಬಹುದು. ಆದ್ರೆ ಪಂಜಾಬ್ ತಂಡವನ್ನು ಕಡೆಗಣಿಸುವಂತಿಲ್ಲ. ಯಾಕಂದ್ರೆ ಐದು ಬಾರಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಕ್ವಾಲಿಫೈಯರ್-2 ಪಂದ್ಯದಲ್ಲಿ ಪಂಜಾಬ್ ತಂಡ ಬಗ್ಗುಬಡಿದು ಫೈನಲ್ ಪ್ರವೇಶಿಸಿದೆ. 

ಹೀಗಾಗಿ ನಾಳಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗೋದ್ರಲ್ಲಿ ಅನುಮಾನವೇ ಇಲ್ಲ. ಸದ್ಯಕ್ಕಂತೂ ಆರ್.ಸಿ.ಬಿ ತಂಡ ಬಲಿಷ್ಠವಾಗಿಯೇ ಕಾಣುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ ಅದ್ಭುತವಾಗಿದೆ. ಫಿಲ್ ಸಾಲ್ಟ್ ಮತ್ತು ಕೊಹ್ಲಿ ಉತ್ತಮ ಆರಂಭ ಕಟ್ಟಿಕೊಟ್ಟರೆ, ಮಯಾಂಕ್ ಅಗರ್ವಾಲ್ , ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಕೃನಾಲ್ , ಟೀಮ್ ಡೇವಿಡ್ , ಶೆಪರ್ಡ್ ವರೆಗೂ ಕೂಡ ನಮ್ಮ ಬ್ಯಾಟಿಂಗ್ ಲೈನ್ ಅಪ್ ಇದೆ .

ಇನ್ನು ಬೌಲಿಂಗ್ ವಿಚಾರದಲ್ಲಿ ಹೇಜಲ್ ವುಡ್ ತಂಡಕ್ಕೆ ಮರಳಿರುವುದು ಆನೆ ಬಲ ಬಂದಂತಾಗಿದ್ದು, ಇನ್ನುಳಿದಂತೆ ಯಶ್ ದಯಾಳ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತಮ್ಮ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಬಿಟ್ರೆ ಪಂಜಾಬ್ ತಂಡವನ್ನು ಕಟ್ಟಿಹಾಕುವುದು ರಾಯಲ್ ಚಾಲೆಂಜರ್ಸ್ ಗೆ ಕಷ್ಟವೇನಲ್ಲ.

ಹೀಗಾಗಿ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದು, ಈಗಾಗಲೇ ಪಟಾಕಿಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಈ ಸಲಾ ಆರ್.ಸಿ.ಬಿ ಕಪ್ ಗೆದ್ರೆ 18 ವರ್ಷಗಳ ನಂತರ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸೋದಂತು ಸತ್ಯ. 

Tags: IPL 2025IPL finalspbksRCBShreya’s iyerVirat Kohli
Previous Post

ಆಟೋ ಚಾಲಕನಿಗೆ ಹಲ್ಲೆ ಮಾಡಿದ್ದ ಉತ್ತರ ಭಾರತದ ಮಹಿಳೆ ಚಾಲಕನ ಕಾಲಿಗೆ ಬಿದ್ದು ಕ್ಷಮೆ

Next Post

ವಿವಾದದ ಬಿರುಗಾಳಿ ಮಧ್ಯೆ ಕಮಲ್ ಭೇಟಿಯಾದ ರಂಜಿನಿ ರಾಘವನ್ – ..?! 

Related Posts

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ
ಕರ್ನಾಟಕ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

by ಪ್ರತಿಧ್ವನಿ
May 15, 2026
0

ಬೆಂಗಳೂರು: ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್, ಜನಿವಾರ, ಶಿವಧಾರ ಸೇರಿದಂತೆ ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ತೀವ್ರ...

Read moreDetails
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

May 14, 2026
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

May 14, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
Next Post
ವಿವಾದದ ಬಿರುಗಾಳಿ ಮಧ್ಯೆ ಕಮಲ್ ಭೇಟಿಯಾದ ರಂಜಿನಿ ರಾಘವನ್ – ..?! 

ವಿವಾದದ ಬಿರುಗಾಳಿ ಮಧ್ಯೆ ಕಮಲ್ ಭೇಟಿಯಾದ ರಂಜಿನಿ ರಾಘವನ್ - ..?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada