• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*

ಪ್ರತಿಧ್ವನಿ by ಪ್ರತಿಧ್ವನಿ
July 28, 2025
in Top Story, ಕರ್ನಾಟಕ, ಸಿನಿಮಾ
0
5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*
Share on WhatsAppShare on FacebookShare on Telegram

ಸ್ಯಾಂಡಲ್ ವುಡ್ ನಲ್ಲಿ ತನ್ನ ಟೈಟಲ್ ಮೂಲಕ ಬಹಳಷ್ಟು ಸದ್ದನ್ನ ಮಾಡಿರುವಂತಹ ಚಿತ್ರ “ಬ್ರ್ಯಾಟ್” (BRAT). ಅದರಲ್ಲೂ ವಿಶೇಷವಾಗಿ “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಯಶಸ್ವಿ ಕಾಂಬಿನೇಷನ್ ಹೆಸರಾಂತ ನಿರ್ದೇಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಇಬ್ಬರ ಮೂಡಿಯಲ್ಲಿ ಸಿದ್ದವಾಗುತ್ತಿರುವಂತಹ “ಬ್ರ್ಯಾಟ್” ಚಿತ್ರವನ್ನ ಯಶಸ್ವಿ ನಿರ್ಮಾಪಕ “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ಮಂಜುನಾಥ್ ಕಂದಕೂರ್ ನಿರ್ಮಿಸುತ್ತಿದ್ದು , ಈ “ಬ್ರ್ಯಾಟ್” ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

ADVERTISEMENT

ಸಂಯೋಜನೆಯಲ್ಲಿ ಇವೆಲ್ಲ ಹಾಡುಗಳು ಮೂಡಿ ಬರುತ್ತಿದ್ದು , ಈಗ ಬ್ರ್ಯಾಟ್ ಚಿತ್ರದ “ನಾನೇ ನೀನಂತೆ…” ಎಂಬ ಹಾಡು ಆನಂದ್ ಆಡಿಯೋ ಮೂಲಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಈ ಹಾಡು ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಹಾಡನ್ನು ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ಕನ್ನಡದ ಫಿಮೇಲ್ ವರ್ಷನ್ “ಸರಿಗಮಪ” ಖ್ಯಾತಿಯ ಲಹರಿ ಮಹೇಶ್ ಹಾಡಿದ್ದಾರೆ. ಉಳಿದ ನಾಲ್ಕು ಭಾಷೆಗಳಲ್ಲಿ ಫೀಮೇಲ್ ವರ್ಷನ್ ಸಿರೀಶ ಹಾಡಿದ್ದಾರೆ. ಹಿಂದಿಯಲ್ಲಿ ಮೇಲ್ ವರ್ಷನ್ ನಿಹಾಲ್ ತವ್ರು ಹಾಗೂ ತೆಲುಗು – ತಮಿಳಿನಲ್ಲಿ ಶ್ರೀಕಾಂತ್ ಹರಿಹರನ್ ಹಾಡಿದ್ದಾರೆ.

ಈ ಹಿಂದೆ ಶಶಾಂಕ್, ಅರ್ಜುನ್ ಜನ್ಯ ಹಾಗೂ ಸಿದ್ ಶ್ರೀರಾಮ್ ಅವರ ಕಾಂಬಿನೇಶನ್ ನಲ್ಲಿ “ಲವ್ 360” ಚಿತ್ರದ “ಜಗವೇ ನೀನು ಗೆಳತಿಯೇ” ಹಾಡು ಭರ್ಜರಿ ಯಶಸ್ಸು ಕಂಡಿತ್ತು‌. ಈಗ ಈ ಹಾಡಿಗೂ ಎಲ್ಲಾ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಎಲ್ಲೆಡೆ ಬಾರಿ ವೈರಲ್ ಆಗಿ ಸದ್ದು ಮಾಡುತ್ತಿದೆ. ಇಡೀ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು , ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು. ನಾಯಕ ನಟ ಡಾರ್ಲಿಂಗ್ ಕೃಷ್ಣ ಮಾತನಾಡುತ್ತ ನನ್ನ ಹಾಗೂ ಶಶಾಂಕ್ ಅವರ ಕಾಂಬಿನೇಶನ್ “ಕೌಸಲ್ಯ ಸುಪ್ರಜಾ ರಾಮ” ಚಿತ್ರ ಉತ್ತಮ ಪ್ರಶಂಸೆಯನ್ನು ಪಡೆದು ಯಶಸ್ಸನ್ನ ಕಂಡಿತ್ತು. ಈಗ ಮತ್ತೊಮ್ಮೆ ಅದೇ ಸಾಲಿನಲ್ಲಿ ಬರುತ್ತಿರುವ ನಮ್ಮ “ಬ್ರ್ಯಾಟ್” ಚಿತ್ರವು ಸಾಗಲಿದೆ .

ಈಗಾಗಲೇ ನನ್ನ ಈ ಚಿತ್ರದ ಫಸ್ಟ್ ಲುಕ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ನಮ್ಮ ನಿರ್ದೇಶಕ ಶಶಾಂಕ್ ಹಾಗೂ ತಂಡವೇ ಕಾರಣ. ಚಿತ್ರ ಕೂಡ ಬಹಳ ಉತ್ತಮವಾಗಿ ಬಂದಿದ್ದು, ಇಂದು ಬಿಡುಗಡೆಯಾದ ಹಾಡು ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸಿದ್ ಶ್ರೀರಾಮ್ ಹಾಗೂ ಲಹರಿ ಅವರ ಗಾಯನ ಹಾಡಿಗೆ ಪೂರಕವಾಗಿದೆ. ಪ್ರತಿ ಒಂದು ಹಾಡು ವಿಭಿನ್ನವಾಗಿದ್ದು, ಮುಂದಿನ ತಿಂಗಳು ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಆ ಹಾಡಂತೂ ನನ್ನ ಮಗಳಿಗೆ ಬಹಳ ಇಷ್ಟ , ನಮ್ಮ ಚಿತ್ರದ ಎಲ್ಲಾ ಹಾಡುಗಳನ್ನು ನೋಡಿ , ಚಿತ್ರವನ್ನು ಪ್ರೋತ್ಸಾಹಿಸಿ ಎಂದರು. ಈ ಚಿತ್ರದ ನಿರ್ದೇಶಕ ಶಶಾಂಕ್ ಮಾತನಾಡುತ್ತಾ ನನ್ನ ಹಾಗೂ ಅರ್ಜುನ್ ಜನ್ಯ ಅವರ ಕಾಂಬಿನೇಶನ್ ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಪ್ರೇಕ್ಷಕರ ಮನಸನ್ನ ಗೆದ್ದು ಯಶಸ್ವಿಯಾಗಿದೆ. ಈಗ ಆ ಸಾಲಿಗೆ “ನಾನೇ ನೀನಂತೆ” ಹಾಡು ಕೂಡ ಸೇರಲಿದೆ.

ನನ್ನ ಸಿನಿ ಜರ್ನಿಯಲ್ಲೇ ಅತೀ ಹೆಚ್ಚು ವೆಚ್ಚದಲ್ಲಿ ಮೂಡಿಬಂದಿರುವ ಹಾಡಿದು. ಈ ಹಾಡಿನ ಟ್ಯೂನ್ ಅಂತಿಮಗೊಳಿಸಲು ಸುಮಾರು 6 ತಿಂಗಳ ಸಮಯ ಬೇಕಾಯಿತು. ನಿರ್ಮಾಪಕ ಮಂಜುನಾಥ್ ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿದ್ ಶ್ರೀರಾಮ್ ಅವರ ಧ್ವನಿಯಂತೂ ಹೇಳಿ ಮಾಡಿಸಿದ ಹಾಗಿದೆ. ಹಿಂದಿಯಲ್ಲಿ ಕನ್ನಡದ ಹುಡುಗ ನಹಾಲ್ ತವ್ರು , ತಮಿಳು, ಮಲೆಯಾಳಂ ನಲ್ಲಿ ಶ್ರೀಕಾಂತ್ ಹರಿಹರನ್ ಈ ಹಾಡನ್ನು ಹಾಡಿದ್ದಾರೆ‌. ಕನ್ನಡದಲ್ಲಿ ಫೀಮೇಲ್ ವರ್ಷನ್ ಲಹರಿ ಮಹೇಶ್ ಹಾಡಿದ್ದು , ಉಳಿದ ನಾಲ್ಕು ಭಾಷೆಗಳಲ್ಲಿ ಹೆಣ್ಣು ಧ್ವನಿ ಸಿರೀಶ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಕನ್ನಡದಲ್ಲಿ ಈ ಹಾಡನ್ನು ನಾನೇ ಬರೆದಿದ್ದೇನೆ. ಆನಂದ್ ಆಡಿಯೋ ಮೂಲಕ ನಮ್ಮ ಚಿತ್ರದ ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಉಳಿದ ಹಾಡುಗಳು ಸಹ ಬಿಡುಗಡೆಯಾಗಲಿದೆ. ಹಂತ ಹಂತವಾಗಿ ಪ್ರಚಾರವನ್ನು ಮಾಡುವ ಮೂಲಕ ಅಕ್ಟೋಬರ್ ನಲ್ಲಿ ಚಿತ್ರವನ್ನ ತೆರೆಯ ಮೇಲೆ ತರುವ ಯೋಜನೆ ಇದೆ ಎಂದರು. ನಟಿ ಮನಿಶಾ ಕಂದಕೂರ್ ಮಾತನಾಡುತ್ತಾ ನಾನು ಮೂಲತಃ ಕನ್ನಡದ ಹುಡುಗಿ. ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ಈ ಚಿತ್ರದಲ್ಲಿ ನನ್ನದು ಮಧ್ಯಮ ವರ್ಗದ ಹುಡುಗಿ ಪಾತ್ರ. ಚಿತ್ರದಲ್ಲೂ ನನ್ನ ಪಾತ್ರದ ಹೆಸರು ಕೂಡ ಮನಿಶಾ. ಇಂದು ಬಿಡುಗಡೆಯಾಗಿರುವ “ನಾನೇ ನೀನಂತೆ” ನನ್ನ ಇಷ್ಟದ ಹಾಡು ಎಂದರು. ಈ ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡುತ್ತ ನಮ್ಮ ಮೊದಲ ನಿರ್ಮಾಣದ “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ಗೆಲುವಿಗೆ ನೀವೆಲ್ಲಾ ನೀಡಿದ ಪ್ರೋತ್ಸಾಹವೇ ಕಾರಣ. ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ.

ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಿಸಿರುವ ಈ ಹಾಡು ಸುಮಧುರವಾಗಿದೆ‌. ಸದ್ಯದಲ್ಲೇ ಚಿತ್ರ ಬರಲಿದ್ದು , ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ ಎಂದರು.ಇನ್ನು ಈ ಕಾರ್ಯಕ್ರಮದ ವೇದಿಕೆ ಮೇಲಿದ್ದಂತಹ ಗಾಯಕಿ ಲಹರಿ , ಆನಂದ್ ಆಡಿಯೋ ಶ್ಯಾಮ್, ನೃತ್ಯ ನಿರ್ದೇಶಕ‌ ಕಲೈ ಮಾಸ್ಟರ್ ಹಾಗೂ ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಈ ಚಿತ್ರದ ಹಾಡಿನ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡುವ ಮೂಲಕ ಅದ್ದೂರಿಯಾಗಿ ಚಿತ್ರವನ್ನು ತೆರೆಯ ಮೇಲೆ ತರಲಿದ್ದಾರಂತೆ.

Tags: #sandalwood #lovemoctail3 #milananagaraj #darlingkrishna #upcomingmovie #goodnews #kannadacinema #pratidhvani #pratidhvanidigital #pratidhvaninews
Previous Post

RCB Stampede: ಪೊಲೀಸ್ ಆಯುಕ್ತ ದಯಾನಂದ ಅಮಾನತು ಹಿಂಪಡೆದ ಸರ್ಕಾರ..!!

Next Post

ಕರ್ನಾಟಕಕ್ಕೆ ವಲಸೆ ಬರುವ ಅನೇಕರು ಕನ್ನಡ ಕಲಿಯಲು ಆಸಕ್ತಿ ತೋರಿಸುವುದಿಲ್ಲ

Related Posts

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ
Top Story

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

by ಪ್ರತಿಧ್ವನಿ
April 30, 2026
0

ದಶಕದ ಹಿಂದೆ ರಾಜ್ಯವನ್ನೇ ಕಂಗೊಳಿಸಿದ್ದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ರಕರಣದ...

Read moreDetails
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
Next Post
ಕರ್ನಾಟಕಕ್ಕೆ ವಲಸೆ ಬರುವ ಅನೇಕರು ಕನ್ನಡ ಕಲಿಯಲು ಆಸಕ್ತಿ ತೋರಿಸುವುದಿಲ್ಲ

ಕರ್ನಾಟಕಕ್ಕೆ ವಲಸೆ ಬರುವ ಅನೇಕರು ಕನ್ನಡ ಕಲಿಯಲು ಆಸಕ್ತಿ ತೋರಿಸುವುದಿಲ್ಲ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada