ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಕರೋನಾ ಸೋಂಕಿನ ಪ್ರಮಾಣ ಇಳಿಕೆ ಕಾಣುತ್ತಿದ್ದರೂ, ಮಹಾರಾಷ್ಟ್ರಹಾಗೂ ಕೇರಳದಲ್ಲಿ ಮಾತ್ರ ಇನ್ನು ಚಿಂತೆಯ ವಿಷಯವಾಗಿಯೇ ಉಳಿದಿದೆ. ಕೇರಳದಲ್ಲಿ ಎರಡನೇ ಅಲೆಯತೀವ್ರತೆ ಕೊಂಚ ಮಟ್ಟಿಗೆ ಇಳಿಕೆ ಕಂಡಿದ್ದರೂ ಸಂಪೂರ್ಣವಾಗಿ ತಣ್ಣಗಾಗಿಲ್ಲ. ಬಹಳಷ್ಟು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ 10%ಕ್ಕಿಂದ ಕೆಳಗೆ ಇಳಿದಿಲ್ಲ.
ಇದನ್ನು ಸಮರ್ಥಿಸಿಕೊಂಡಿರುವ ಕೇರಳದ ಆರೋಗ್ಯ ಮಂತ್ರಿ ವೀಣಾ ಜಾರ್ಜ್ ಅವರು, ಇದು ನಿರೀಕ್ಷಿಸಿದ್ದ ಬೆಳವಣಿಗೆ ಎಂದು ಹೇಳಿದ್ದಾರೆ.
“ಮೊದಲನೇ ಅಲೆ ಬಂದಾಗಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಇದು ಆತಂಕಪಡಬೇಕಾದ ವಿಚಾರವಲ್ಲ. ಸೋಂಕಿನ ತೀವ್ರತೆ ಗಣನೀವಾಗಿ ಇಳಿಕೆಯಾಗಿದೆ. ಆದರೆ, ಎರಡನೇ ಅಲೆಯ ಕೊನೆಗೊಳ್ಳುವಿಕೆ ಸ್ವಲ್ಪ ಮುಂದೂಡಲ್ಪಟ್ಟಿದೆ,” ಎಂದು ಅವರು ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆ ಏಪ್ರಿಲ್ ಮಧ್ಯ ಭಾಗದಲ್ಲಿ ಕೇರಳವನ್ನು ಅಪ್ಪಳಿಸಿತ್ತು, ಮೇ 12ರ ವೇಳೆಗೆ ಅದು ಉತ್ತುಂಗಕ್ಕೆ ಏರಿತ್ತು. ಪ್ರತಿ ದಿನ 43,000 ಪ್ರಕರಣಗಳು ವರದಿಯಾಗುತ್ತಿದ್ದವು. ಈಗ 10,000 ಪ್ರಕರಣಗಳು ವರದಿಯಾಗುತ್ತಿದೆ. ಇದು ನಮ್ಮ ಯೋಜನೆಯ ಭಾಗವೇ ಆಗಿತ್ತು. ನಾವು ಎರಡನೇ ಅಲೆಯು ಉತ್ತುಂಗಕ್ಕೆ ಏರುವ ಸಮುಯವನ್ನು ಮುಂದೂಡಲು ಯತ್ನಿಸಿದೆವು. ಈಗ ಅದರ ಕೊನೆಯೂ ಮುಂದೂಡಲ್ಪಡುತ್ತಿದೆ, ಎಂದು NDTVಗೆ ನಿಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
“ಕೇರಳ ರಾಜ್ಯದ ಆರೋಗ್ಯ ಕ್ಷೇತ್ರದ ಕ್ಷಮತೆಗಿಂತ ಹೆಚ್ಚಿನ ಪ್ರಕರಣಗಳು ವರದಿಯಾಗದಂತೆ ನೋಡಿಕೊಳ್ಳುವುದು ನ್ಮ ಉದ್ದೇಶವಾಗಿತ್ತು. ರಾಜ್ಯದಲ್ಲಿ ಯಾಯಾರಾದರೂ ಸೋಂಕಿಗೆ ಒಳಪಟ್ಟರೆ, ಅವರ ಪ್ರಥಮ, ದ್ವಿತಿಯ ಹಾಗೂ ತೃತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸವನ್ನೂ ಮಾಡುತ್ತಿದ್ದೆವೆ.ಇದರಿಂದಾಗಿ ನಿಖರವಾದ ಪರೀಕ್ಷೆಗಳನ್ನು ಮಾಡಲು ಸಾಧ್ಯವಾಗುತ್ತಿದೆ,” ಎಂದು ಅವರು ಹೇಳಿದ್ದಾರೆ.
ಸೋಂಕಿತರು ಯಾರ ಸಂಪರ್ಕಕ್ಕೆ ಬಂದಿರುತ್ತಾರೆಯೋ, ಅವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವುದು ನಮ್ಮ ಉದ್ದೇಶ. ಹೀಗೆ ಮಾಡುವುದರಿಂದ ಶೀಘ್ರದಲ್ಲಿ ಸೋಂಕಿತರನ್ನು ಪತ್ತೆ ಮಾಡಬಹುದು, ಎಂದಿದ್ದಾರೆ.
ಜನಸಂಖ್ಯೆಯ ಪ್ರಮಾಣ ದೇಶದ ಸರಾಸರಿಗಿಂತ ಕೇರಳದಲ್ಲಿ ದುಪ್ಪಟ್ಟಿದೆ. ಇದರೊಂದಿಗೆ, ರಾಜ್ಯದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಮಗಿರುವ ಅತೀ ದೊಡ್ಡ ಸವಾಲುಗಳು, ಎಂದು ಅವರು ಹೇಳಿದ್ದಾರೆ.