ಪುಷ್ಪ 2 (Pushpa 2) ಸಿನಿಮಾದಿಂದ ನಟ ಅಲ್ಲು ಅರ್ಜುನ್ ಗೆ (Allu arjun) ಎಷ್ಟು ಯಶಸ್ಸು ಸಿಕ್ಕಿದ್ಯೋ ಅಷ್ಟೇ ಸಂಕಷ್ಟಗಳು ಕೂಡ ಎದುರಾಗಿವೆ. ಕಾಲ್ತುಳಿತದಿಂದ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಈಗ ನಟನುಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಇಂದು ಅಲ್ಲು ಅರ್ಜುನ್ ಗೆ ವಿಚಾರಣೆಗೆ ಮುನ್ನವೆ ಮೊದಲಿಗೆ ಬೌನ್ಸರ್ ನ (Bouncer) ಪೊಸರು ಅರೇಸ್ಟ್ ಮಾಡಿದ್ದಾರೆ. ಹೈದರಾಬಾದ್ ನ ಚಿಕ್ಕಡಪಲ್ಲಿ ಪೋಲಿಸರು ಬೌನ್ಸರ್ ಆ್ಯಂಟೋನಿಯನ್ನು ಬಂಧಿಸಿದ್ದಾರೆ. ಸಂಧ್ಯಾ ಥೇಟರ್ (Sandhya theatre) ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಬೌನ್ಸರ್ ಪಾತ್ರ ಬಹುಮುಖ್ಯವಾಗಿದ್ದು, ಅಂದು ಬೌನ್ಸರ್ ತಳ್ಳಾಟಕ್ಕೆ ಮಹಿಳೆ ರೇವತಿ ಕೆಳಗೆ ಬಿದ್ದಿದ್ದಳು ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನಲೆ ಆ್ಯಂಟನಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗಿದ್ದು,ಸದ್ಯ ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ A11 ಆರೋಪಿಯಾಗಿದ್ದಾರೆ.