ಬೆಂಗಳೂರು: ಮುಂಬರುವ ಲೋಕಸಭಾ(Loka Saba) ಚುನಾವಣೆಯಲ್ಲಿ ತಮ್ಮ ಲೋಕಸಭೆ ವ್ಯಾಪ್ತಿಯ ಅಭ್ಯರ್ಥಿಯ ಗೆಲುವಿನ ಹೊಣೆಯನ್ನು ಸಚಿವರ ಹೆಗಲಿಗೆ ನೀಡಿರುವ ಕಾಂಗ್ರೆಸ್(Congress) ಹೈಕಮಾಂಡ್(High Command), ಲೋಕಸಭೆಯಲ್ಲಿ ಸೂಕ್ತ ಕೆಲಸ ಮಾಡದಿದ್ದರೆ ಸಚಿವರ ತಲೆದಂಡ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಈ ಸಂಬಂಧವಾಗಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಚಿವರ ಸಭೆ ವಿಚಾರವಾಗಿ ಮಾಹಿತಿ ನೀಡಿರುವ ಸಚಿವ ಡಾ.ಜಿ. ಪರಮೇಶ್ವರ್, ಲೋಕಸಭೆ ಚುನಾವಣೆ ದೃಷ್ಟಿಯಿಂದ ನಿನ್ನೆ ಹೈಕಮಾಂಡ್ ಸಭೆ ಮಾಡಿ, ನಿರ್ದಿಷ್ಟ ಸೂಚನೆ ನೀಡಿದೆ. ಪಂಚಾಯತಿ ಹಂತದ ಸಮಿತಿ, ಕ್ಯಾಂಪೇನ್ ಮಾಡೋದು, ಅಭ್ಯರ್ಥಿ ಆಯ್ಕೆ ಆದ ಮೇಲೆ ಏನ್ ಮಾಡಬೇಕು ಅಂತ ಸೂಚನೆ ನೀಡಿದೆ. ಆ ಮೂಲಕ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ನಮಗೆ ಸೂಚನೆ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ನಮ್ಮನ್ನ ಉಸ್ತುವಾರಿಗಳನ್ನ ಮಾಡಿದ್ದು, ವೇಣುಗೋಪಾಲ್, ಸುರ್ಜೇವಾಲ, ಶಶಿಕಾಂತ್ ಸೆಂಥಿಲ್ ಸಭೆ ಮಾಡಿದರು. ಸೆಂಥಿಲ್ ಅವರು ನಮ್ಮ ನ್ಯಾಷನಲ್ ಕೋ ಅರ್ಡಿನೇಷನ್ ಕಮಿಟಿಗೆ ಅಧ್ಯಕ್ಷರಾಗಿದ್ದು, ಅನೇಕ ಸೂಚನೆಗಳನ್ನು ಕೊಟ್ಟಿದ್ದಾರೆ. ಸಭೆಯಲ್ಲಿ ಒಬ್ಬೊಬ್ಬರು ಏನು ಮಾಡಬೇಕು, ಹೈಕಮಾಂಡ್ ಏನು ನಿರೀಕ್ಷೆ ಮಾಡುತ್ತೆ ಅಂತ ಹೇಳಿದ್ದಾರೆ. ಕಳೆದ ಬಾರಿ ಒಂದು ಸೀಟು ಮಾತ್ರ ಗೆದ್ದಿದ್ದೆವು, ಈ ಬಾರಿ ಅಂತಹ ಫಲಿತಾಂಶ ಪುನರಾವರ್ತಿ ಆಗಬಾರದು ಅಂತ ಸೂಚನೆ ನೀಡಿದ್ದಾರೆ. ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಈ ಬಾರಿ ಹೆಚ್ಚು ಸೀಟು ಗೆಲ್ಲಿಸಿ ಕೊಡಬೇಕು ಅಂತ ಸೂಚನೆ ಕೊಟ್ಟಿದ್ದಾರೆ. 28 ಗೆಲ್ಲಲು ಸಾಧ್ಯತೆ ಇದೆ, ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಅಂತ ಹೇಳಿದ್ದಾರೆ. ಎಲ್ಲಾ ಮಾಹಿತಿಗಳನ್ನು ಕನೆಕ್ಟ್ ಸೆಂಟರ್‌ಗೆ ಮಾಹಿತಿ ಕೊಡಬೇಕಿದ್ದು, ಚುನಾವಣೆಗೆ ಮಹತ್ವ ಕೊಟ್ಟು ಕೆಲಸ ಮಾಡಲು ಸೂಚನೆ ನೀಡಿದ್ದಾರೆ ಎಂದರು.
ಸಚಿವರಿಗೆ ಕ್ಷೇತ್ರ ಗೆಲ್ಲೋ ಟಾಸ್ಕ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆಯಲ್ಲಿ ಉತ್ತಮ ರಿಸಲ್ಟ್ ಕೊಡದೇ ಇರೋ ಸಚಿವರ ತಲೆ ದಂಡ ಆಗುತ್ತದೆ ಅಂತ ಹೈಕಮಾಂಡ್ ಹೇಳಿದೆ. ಸಚಿವರ ಸ್ಪರ್ಧೆ ಬಗ್ಗೆ ನಿನ್ನೆ ಸಭೆಯಲ್ಲಿ ಮಾತಾಡಿಲ್ಲ. ನಿರೀಕ್ಷೆ ಫಲಿತಾಂಶ ಬಾರದೇ ಹೋದರೆ ಸಚಿವರು ತಲೆ ದಂಡ ಅಂತಾನು ಹೇಳಿದ್ದಾರೆ. ಸಚಿವರು ಚುನಾವಣೆ ಸಿರಿಯಸ್ ಆಗಿ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಗೆಲ್ಲೋ ಕಡೆ ಸೋತರೆ ಅದನ್ನ ಸಹಿಸೊಲ್ಲ, ಅದನ್ನ ನಾವು ಸೀರಿಯಸ್ ಆಗಿ ತಗೋತೀವಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಸಚಿವರು ಚುನಾವಣೆ ಸಿರಿಯಸ್ ಆಗಿ ತಗೊಂಡಿಲ್ಲ ಅಂದ್ರೆ ಕಷ್ಟ ಆಗುತ್ತೆ ಅಂತ ಹೇಳಿದ್ದಾರೆ. ಲೋಕಸಭೆ ಚುನಾವಣೆ ಗೆಲುವಿನ ಟಾಸ್ಕ್ ರೀಚ್ ಆಗದೇ ಹೋದ್ರೆ ಸಚಿವರ ತಲೆದಂಡ ಫಿಕ್ಸ್ ಎಂದು ಹೈಕಮಾಂಡ್ ನಾಯಕರಿಂದ ಸಚಿವರಿಗೆ ಟಾಸ್ಕ್ ಕೊಟ್ಟಿದೆ ಎಂದ ಪರಮೇಶ್ವರ್, ಸಚಿವರಿಗೆ ಖಡಕ್ ಆಗಿ ಹೈಕಮಾಂಡ್ ನಾಯಕರು ಸೂಚನೆ ಕೊಟ್ಟಿದ್ದಾರೆ. ಜವಾಬ್ದಾರಿ ತೆಗೆದುಕೊಳ್ಳದೇ ಕಡೆಗಣಿಸಿದರೆ ಸಚಿವ ಸ್ಥಾನ ಮುಂದುವರಿಯುವುದು ಅನುಮಾನ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಿನ್ನೆ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿಲ್ಲ. ಕೇವಲ ಚುನಾವಣೆ ಪ್ರಚಾರ, ಸಿದ್ದತೆ ಬಗ್ಗೆ ಮಾತ್ರ ಚರ್ಚೆ ಆಗಿದೆ. ಯಾವುದೇ ಹೆಸರು ನಿನ್ನೆ ಸಭೆಯಲ್ಲಿ ಚರ್ಚೆ ಆಗಿಲ್ಲ. ಆದಷ್ಟು ಬೇಗ ಅಭ್ಯರ್ಥಿ ಮಾಡಿಕೊಡಿ ಅಂತ ಕೇಳಿದ್ದೇವೆ. ಸುರ್ಜೇವಾಲ ಆದಷ್ಟು ಬೇಗ ರಾಜ್ಯಕ್ಕೆ ಬಂದು ಸಭೆ ಮಾಡಿ ಪಟ್ಟಿ ಫೈನಲ್ ಮಾಡಿ ಹೈಕಮಾಂಡ್ ಬಳಿ ತೆಗೆದುಕೊಂಡು ಹೋಗ್ತಾರೆ ಎಂದು ವಿವರಿಸಿದರು.
ಮುಸ್ಲಿಂ, ಕ್ರಿಶ್ಚಿಯನ್ ಮತ ಪಡೆಯಲು ಬಿಜೆಪಿಯಿಂದ ಮೋದಿ ಪರ ಅಭಿಯಾನ ಶುರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಮೋದಿ ಪರ ಅಭಿಯಾನ ಶುರು ಮಾಡಿದ್ದಾರೆ. ಯಾರು ಏನೇ ಮಾಡಿದ್ರು ಎಲ್ಲರು ಜನರ ಬಳಿಯೇ ಹೋಗಬೇಕು. ಮತದಾರರ ಬಳಿ ಹೋಗೋಕೆ ನಮಗೆ ಏನು ಆಕ್ಷೇಪ ಇಲ್ಲ. ಯಾರು ಮತದಾರರ ಬಳಿ ಹೋಗಿ ಮತ ಕೇಳಬಹುದು. ಬಿಜೆಪಿ,ಕಾಂಗ್ರೆಸ್ ಒಂದೊಂದು ರೀತಿ ಮತ ಕೇಳೋ ಪ್ರಕ್ರಿಯೆ ಮಾಡುತ್ತದೆ. ಅಂತಿಮವಾಗಿ ಮತ ಹಾಕೋರು ಜನರು. ಮತದಾರನ ತೀರ್ಮಾನ ಯಾರು ಊಹೆ ಮಾಡಲು ಆಗೊಲ್ಲ ಎಂದರು.






