• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

ಪ್ರತಿಧ್ವನಿ by ಪ್ರತಿಧ್ವನಿ
December 3, 2024
in Top Story, ಅಂಕಣ, ಅಭಿಮತ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿದೇಶ, ವಿಶೇಷ, ಶೋಧ, ಸಿನಿಮಾ, ಸೌಂದರ್ಯ
0
Share on WhatsAppShare on FacebookShare on Telegram

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಧಿಕ್ಕಾರಕ್ಕಿಂತ ಆಧಿಕಾರ ಮುಖ್ಯ ಎಂದು “ವಾರ್ನರ್‌” ಮೂಲಕ ಹೇಳಿದ ರಿಯಲ್ ಸ್ಟಾರ್.. ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಹಾಗೂ ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ .

ADVERTISEMENT

ಜಿ.ಮನೋಹರನ್ ( G Manohar) ಮತ್ತು ಕೆ.ಪಿ.ಶ್ರೀಕಾಂತ್(KP Shree Kanth) ನಿರ್ಮಿಸಿರುವ, ಸುಮಾರು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರದ ವಾರ್ನರ್ ಬಿಡುಗಡೆಯಾಗಿದೆ. ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಟೀಸರ್ ಹಾಗೂ ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಆದರೆ ಉಪೇಂದ್ರ ಅವರು ಇವೆರಡನ್ನೂ ಬಿಡುಗಡೆ ಮಾಡದೆ ವಾರ್ನರ್ ಬಿಡುಗಡೆ ಮಾಡಿದ್ದಾರೆ. ಈ‌ ವಾರ್ನರ್ ನಲ್ಲಿ 2040ರ ಕಾಲಘಟ್ಟದ‌ ಪರಿಸ್ಥಿತಿಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. “UI” ಚಿತ್ರ ಇದೇ ತಿಂಗಳ 20 ರಂದು ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

International Day of Persons with Disabilities ಕಾರ್ಯಕ್ರಮದಲ್ಲಿ Siddaramaiah, DKS ಭಾಗಿ #pratidhvani

ಕಿತ್ತು ತಿನ್ನುವ ಬಡತನದ ಜಾಗಕ್ಕೆ ಐಶಾರಾಮಿ ಕಾರಿನಲ್ಲಿ ಆಗಮಿಸುವ ನಾಯಕ ಜನರ ದಿಕ್ಕಾರಕ್ಕೆ ಸೆಡ್ಡು ಹೊಡೆದು “ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ” ಎನ್ನುವ ಪವರ್ ಪುಲ್ ಸಂಭಾಷಣೆ , ಕಣ್ಮನ ಸೆಳೆಯುವ ಛಾಯಾಗ್ರಹಣ “ವಾರ್ನರ್” ನಲ್ಲಿದ್ದು, ಕೋವಿಡ್ ನಿಂದ ಜಾಗತಿಕ ಹಣದುಬ್ಬರ ಸಮಸ್ಯೆ ಸೃಷ್ಟಿಸಿದರೆ ಕೃತಕ‌ಬುದ್ದಿ ಮತ್ತೆಯಿಂದ ನಿರುದ್ಯೋಗ ಸಮಸ್ಯೆ, ಯುದ್ದದಿಂದ 2040 ರಲ್ಲಿ ದೇಶ ಹೇಗಿರಬಹುದು ಎನ್ನುವುದನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಉಪೇಂದ್ರ.

ಉಚಿತ ಮೊಬೈಲ್ ವಿತರಣೆ, ಮಂಗಳ ಗ್ರಹಕ್ಕೆ ಲಗ್ಗೆ, ಅತ್ಯಾಧುನಿಕ ಶಸ್ತಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದರೂ, ಬಾಳೆ ಹಣ್ಣು ಖರೀದಿ ಮಾಡಲು ಸಾದ್ಯವಾಗದ ಬಡತನದ ಬೇಗೆಯ ತಿರುಳು ಹೊಂದಿರುವ ಈ “UI” ಚಿತ್ರದ “ವಾರ್ನರ್” ಕನ್ನಡ(Kannada), ತೆಲುಗು(Telugu), ತಮಿಳು(Tamil), ಹಿಂದಿ(Hindhi) ಮತ್ತು ಮಲೆಯಾಳಂ(Malayalam)ನಲ್ಲಿ ಬಿಡುಗಡೆಯಾಗಿದೆ.

“ವಾರ್ನರ್” (Warner)ಬಿಡುಗಡೆ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಈ ವೇಳೆ ಮಾತನಾಡಿದ ‌ನಟ,ನಿರ್ದೇಶಕ ಉಪೇಂದ್ರ(Upendra), ಈ ಚಿತ್ರ ಇದೇ 20 ರಂದು ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ನಾನು, ನನ್ನ ಚಿತ್ರಗಳ ಯಾವುದೇ ವಿಷಯವನ್ನು ಬಿಡುಗಡೆ ಪೂರ್ವದಲ್ಲಿ ಜನರಿಗೆ ತೋರಿಸುವುದಿಲ್ಲ. ಬಿಡುಗಡೆ ಆದ ಮೇಲೆ ಜನ ಅದನ್ನು ನೋಡಲಿ ಎಂದು ಆಸೆ ಪಡುವವನು ನಾನು. ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಜನರಿಗೆ ತಮ್ಮ ಚಿತ್ರದ ಬಗ್ಗೆ ಟೀಸರ್ ಹಾಗೂ ಟ್ರೇಲರ್ ಗಳ ಮೂಲಕ ತಲುಪಿಸುವ ಪ್ರಯತ್ನವಾಗುತ್ತಿದೆ. ಹಾಗಾಗಿ ನಾನು “ವಾರ್ನರ್” ರಿಲೀಸ್ ಮಾಡಿದ್ದೇನೆ. ಇನ್ನು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಿಲ್ಲ. ಇನ್ನೇನಿದರೂ ಜನರು ಚಿತ್ರಮಂದಿರದಲ್ಲೇ ಚಿತ್ರ ನೋಡಬೇಕು. ಚಿತ್ರದ ಗೆಲುವಿನಲ್ಲಿ ಪ್ರೇಕ್ಷಕರ ನಿರ್ಧಾರವೇ ಅಂತಿಮ. ಏಕೆಂದರೆ, ಇಪ್ಪತ್ತೈದು ವರ್ಷಗಳ ಹಿಂದೆ (25 Years Back) ನಾನು A ಚಿತ್ರವನ್ನು ನಿರ್ದೇಶಿಸಿದ್ದಾಗ, ಗಾಂಧಿನಗರದವರಿಗೆ, ಮಿತ್ರರಿಗೆ ಹೀಗೆ ಯಾರೊಬ್ಬರಿಗೂ ಸಿನಿಮಾ ಇಷ್ಟ ಆಗಿರಲಿಲ್ಲ. ಆದರೆ ಜನರಿಗೆ ಚಿತ್ರ ಬಹಳ ಇಷ್ಟವಾಯಿತು.‌ ಅದಕ್ಕೆ ಆ ಚಿತ್ರದ ದಾಖಲೆ ಯಶಸ್ಸೇ ಉದಾಹರಣೆ. ನಾನು ಜನರಿಗೆ ಕನ್ ಫ್ಯೂಸ್ ಮಾಡುವುದಿಲ್ಲ. ಕನ್ ವಿನ್ಸ್ ಮಾಡುತ್ತೇನೆ ಎಂದರು.

ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮಾತನಾಡಿ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತೇವೆ. ಅಮೇರಿಕಾ, ಕೆನಡಾ, ಮದ್ಯ ಪ್ರಾಚ್ಯ ಆಸ್ಟ್ರೇಲಿಯಾ ಸೇರಿದಂತೆ ಮತ್ತಿತರ ಕಡೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ಇದು ಎಲ್ಲರ ಪಾಯಿಂಟ್ ಆಫ್ ವ್ಯೂ ನಲ್ಲಿ ಮಾಡಿದ ಸಿನಿಮಾ. 100 ವರ್ಷದ ನಂತರ ಉಪೇಂದ್ರ ಎನ್ನುವ ನಿರ್ದೇಶಕ ಇದ್ದರು ಎನ್ನುವುದನ್ನು ಈಗಲೇ ತೋರಿಸುತ್ತಿದ್ದಾರೆ. ಸಾಮಾಜಿಕ‌ ವಿಷಯ, ತತ್ವಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳ‌ ಬಗ್ಗೆ ಮಾತನಾಡುತ್ತಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್(Ajneesh Lokanath).

ಸಾಹಸ ನಿರ್ದೇಶಕ ರವಿವರ್ಮ ಹಾಗೂ ಚೇತನ್ ಡಿಸೋಜಾ ಮಾತನಾಡಿ ಉಪೇಂದ್ರ ಜೊತೆ ಸಿನಿಮಾ ಮಾಡುವುದೆಂದರೆ ಪ್ರತಿ‌ಬಾರಿಯೂ ಅಪ್ ಡೇಟ್ ಆಗಬೇಕು ಎಂದರು. ಸಹ ನಿರ್ಮಾಪಕ ನವೀನ್ ಮನೋಹರನ್ ಹಾಗೂ ಲಹರಿ ವೇಲು ಚಿತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ನಿರ್ಮಾಪಕ ಜಿ.ಮನೋಹರನ್ ಹಾಗೂ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags: ui kannada movieui movie kannadaui movie teaserui movie trailerui new movie trailerui the movieui upendra movie kannadaui upendra movie teluguupendraupendra kannada movieupendra movieupendra moviesupendra new movieupendra new movie trailerupendra super movieupendra telugu movieupendra ui movieupendra ui movie kannadaupendra ui movie teluguupendra ui movie trailerupendra ui teaserupendra ui trailer
Previous Post

ಟೈಗರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು ‘ಬಲರಾಮನ ದಿನಗಳು’ ಚಿತ್ರದ ಫಸ್ಟ್ ಲುಕ್,

Next Post

ಕಾನೂನು ಬಾಹೀರ ನೊಂದಣೀಗೆ ಖಡಿವಾಣ.!! ಸಿದ್ದರಾಮಯ್ಯ.

Related Posts

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
ಕರ್ನಾಟಕ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

by ಪ್ರತಿಧ್ವನಿ
March 4, 2026
0

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ (BEA) ಸಂಯುಕ್ತವಾಗಿ, Rajiv Gandhi University of Health Sciences (RGUHS) ಸಮನ್ವಯದಲ್ಲಿ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
Next Post

ಕಾನೂನು ಬಾಹೀರ ನೊಂದಣೀಗೆ ಖಡಿವಾಣ.!! ಸಿದ್ದರಾಮಯ್ಯ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada