ಚಂದ್ರನ ಅಂಗಳದಲ್ಲಿ ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಇಳಿದಿದ್ದು ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಈಗಾಗಲೇ ದೇಶದ ವಿಜ್ಞಾನಿಗಳು ಸೇರಿದಾಗಿ ದೇಶದ ಸಾಮಾನ್ಯ ನಾಗರಿಕರಲ್ಲೂ ಸಂತಸ ಮನೆ ಮಾಡಿದ್ದು ಭಾರತದ ಐತಿಹಾಸಿಕ ಸಾಧನೆಗೆ ಎಲ್ಲೆಡೆಯಿಂದಲೂ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದೇಶದ ವಿವಿಧಡೆ ಪಟಾಕಿ ಸಿಡಿಸಿ ಹಲವು ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನು ಮಾಡಿದ್ದು, ಕರ್ನಾಟಕದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿವೆ. ಇನ್ನು ಈ ಯಶಸ್ಸಿನ ಕುರಿತು ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಮೆಚ್ಚುಗೆಯ ಮಾತುಗಳನ್ನ ಹಾಡಿದ್ದಾರೆ.

ಚಂದ್ರನ ಮೇಲೆ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದ್ದು ಅಮೇರಿಕಾ, ರಷ್ಯಾ, ಚೀನಾ, ನಂತರ ಭಾರತ ಈ ಮಹತ್ವದ ಸಾಧನೆಯನ್ನು ಮಾಡಿದೆ. ಇನ್ನು ಚಂದ್ರನ ದಕ್ಷಿಣದ ಅಂಗಳಕ್ಕೆ ಕಾಲಿಟ್ಟ ಮೊದಲ ದೇಶವಾಗಿ ಭಾರತ ಹೊರಹೊಮ್ಮಿರುವುದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ದಿಗ್ವಿಜಯಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ,