
ಕೊಲೆ ಆರೋಪಿ ಆಗಿರುವ ದರ್ಶನ್‌ಗೆ ಪೊಲೀಸರು ಗನ್ ಶಾಕ್ ಕೊಟ್ಟಿದ್ದಾರೆ. ನಟ ದರ್ಶನ್ ಗನ್ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.. ಕೊಲೆ ಕೇಸ್ ಮುಗಿಯುವ ತನಕ ನಟ ದರ್ಶನ್ ಗನ್ ಬಳಸುವಂತಿಲ್ಲ. ಹೀಗಾಗಿ ಪಿಸ್ತೂಲ್‌ಗಳನ್ನ ಸರೆಂಡರ್ ಮಾಡುವಂತೆ ಪೊಲೀಸರು ಸೂಚಿಸಿದ್ದರು.. ಇದಕ್ಕೂ ಮೊದಲು ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಿಮ್ಮ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ದರ್ಶನ್‌ಗೆ ನೋಟಿಸ್ ನೀಡಲಾಗಿತ್ತು.
ನಿಮ್ಮ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಅಂತ ಕಾರಣ ಕೇಳಿ ಪೊಲಿಸರು ನೋಟಿಸ್ ಜಾರಿ ಮಾಡಿದ ಬಳಿಕ ದರ್ಶನ್ ಕೂಡ ಉತ್ತರ ಕೊಟ್ಟಿದ್ದರು. ಪೊಲಿಸರ ನೋಟಿಸ್ಗೆ ದರ್ಶನ್ ಉತ್ತರ ಕೊಟ್ಟ ಬಳಿಕವೂ ಲೈಸೆನ್ಸ್ ರದ್ದು ಮಾಡುವ ನಿರ್ಧಾರ ಮಾಡಿದ್ದಾರೆ. ನಾನು ಸೆಲೆಬ್ರಿಟಿ ಆಗಿದ್ದು ನನಗೆ ಗನ್ ಅವಶ್ಯಕತೆ ಇದೆ. ನನ್ನ ಆತ್ಮರಕ್ಷಣೆಗೆ ಗನ್ ಅವಶ್ಯಕತೆ ಇದೆ ಎಂದು ಕೇಳಿಕೊಂಡಿದ್ರು. ಆದ್ರೆ ದರ್ಶನ್ ನೀಡಿದ ಕಾರಣಗಣನ್ನು ಪರಿಗಣಿಸದೇ ಇರಲು ಪೊಲೀಸರು ನಿರ್ಧಾರ ಮಾಡಿ, ತಾತ್ಕಾಲಿಕವಾಗಿ ಗನ್ ಲೈಸನ್ಸ್ ರದ್ದು ಮಾಡಲಾಗಿದೆ.
ನಟ ದರ್ಶನ್ ಗನ್ ಲೈಸೆನ್ಸ್ ರದ್ದುಗೊಳಿಸುವ ವಿಚಾರದ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಆ ವ್ಯಕ್ತಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.. ಹೀಗಾಗಿ ತಾತ್ಕಾಲಿಕವಾಗಿ ಲೈಸೆನ್ಸ್ ಒಪ್ಪಿಸಲು ಸೂಚನೆ ನೀಡಲಾಗಿತ್ತು. ಅದಕ್ಕೆ ಆತ ಕೂಡ ಉತ್ತರ ಕೂಡ ಬರೆದಿದ್ದ.. ಆದ್ರೆ ಆತ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ, ಗನ್ ವಾಪಸ್ ತಂದು ಒಪ್ಪಿಸುವಂತೆ ಸೂಚಿಸಲಾಗಿದೆ ಎಂದಿದ್ದರು

ನಟ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತು ಮಾಡಿದ ಬಳಿಕ ರಾಜರಾಜೇಶ್ವರಿ ನಗರ ಠಾಣೆಗೆ ಒಪ್ಪಿಸಲಾಗಿದೆ. ತಮ್ಮ ಬಳಿ ಇದ್ದ ಎರಡು ಗನ್ಗಳನ್ನ ತಾವೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಜರ್ಮನ್ ಮೇಡ್ ಪಿಸ್ತೂಲ್ ಬಳಸ್ತಿದ್ದ ದರ್ಶನ್, ಕಾರ್ಲ್ ವಾಲ್ಟೇರ್ ವಾಫೆನ್ ಫ್ಯಾಬ್ರಿಕ್ ಕಂಪನಿಯ ಪಿಸ್ತೂಲ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಿಸ್ತೂಲ್ ಜೊತೆಗೆ 5 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.