ಬೆಂಗಳೂರು: ಜೆಡಿಎಸ್ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್‌ಡಿ ದೇವೇಗೌಡರಿಗೆ (Former Prime Minister, Rajya Sabha Member HD Deve Gowda) ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಕಾರನ್ನು ಗಿಫ್ಟ್ ನೀಡಲು ಮುಂದಾಗಿದೆ. ಅಲ್ಲದೆ ಈ ಕುರಿತು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, 1.2 ಕೋಟಿ ರೂಪಾಯಿ ಮೌಲ್ಯದ ದುಬಾರಿ ಕಾರಿಗೆ ಸರ್ಕಾರ ಅಸ್ತು ಎಂದಿದೆ.

VOLVO XC90 ಕಾರನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಈ ಮೂಲಕ ಗೌಡರು ತಮ್ಮ ಇಷ್ಟಕ್ಕೆ ತಕ್ಕಂತೆ ನವೀಕರಣ ಮಾಡಿಕೊಳ್ಳಬಹುದಾಗಿದೆ. ದೇವೇಗೌಡರಿಗೆ ವಯಸ್ಸಾದ ಕಾರಣ ಕಾರಿನಿಂದ ಇಳಿಯಲು ಹಾಗೂ ಹತ್ತಲು ವಿವಿಧ ನವೀಕರಣದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ XC90 ತನ್ನ 11 ವರ್ಷಗಳ ಮಾರಾಟದಲ್ಲಿ ಹಲವಾರು ನವೀಕರಣಗಳಿಗೆ ಒಳಗಾಗಿದೆ, ಇದರಲ್ಲಿ 2019 ರಲ್ಲಿನ ಕಾರಿನ ಬಗ್ಗೆ ಟೆಸ್ಟ್ ಬಳಿಕ 2025ರ ವರ್ಷಕ್ಕೆ ಮತ್ತೊಂದು ಫೇಸ್‌ಲಿಫ್ಟ್ ಸೇರಿವೆ. ಆದರೆ ಕಾರಿನ ಮೂಲ ಪರಿಕಲ್ಪನೆ ಬದಲಾಗಿದೆ. ಇದು ವೋಲ್ವೋ ಶ್ರೇಣಿಯ ದಹನ ಚಾಲಿತ ಫ್ಲ್ಯಾಗ್‌ಶಿಪ್ ಆಗಿದ್ದು, ಇದನ್ನು ಅತ್ಯುತ್ತಮ ಕುಟುಂಬ SUV ಗಳಲ್ಲಿ ಒಂದಾಗಿದೆ.

ಲೆವೆಲ್ 2 ಅಡಾಸ್ (ADAS) ಫೀಚರ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಪಾರ್ಕಿಂಗ್ ಅಸೆಸ್ಟೆಂಟ್, ಎಬಿಎಸ್, ಎಬಿಡಿ, 7 ಏರ್ ಬ್ಯಾಗ್, 360 ಡಿಗ್ರಿ ಕ್ಯಾಮೆರಾ, 12.3 ಇಂಚಿನ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, 11.2 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್, ಕ್ಲೈಮೇಟ್ ಕಂಟ್ರಲ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿವೆ. ಇನ್ನು ಕಾರನ್ನು ಮಾಡಿಫಿಕೇಶನ್ ಮಾಡಲು ಸಾಧ್ಯವಿದೆ. ಸದ್ಯ ದೇವೇಗೌಡರಿಗೆ ವಯಸ್ಸಾಗಿರುವುದರಿಂದಕಾರು ಹತ್ತಿ ಇಳಿಯಲು, ಕಾರಿನಲ್ಲಿ ಕುಳಿತುಕೊಳ್ಳಲು ಕೆಲ ಮಾಡಿಫಿಕೇಶನ್ ಮಾಡಲಾಗಿದೆ.
ಪ್ರಮುಖವಾಗಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ,ದೇಶದ ಪ್ರಧಾನಯಾಗಿದ್ದವರು ಸದ್ಯ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಹೀಗೀರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಆದರೆ ಜೆಡಿಎಸ್ ಪಕ್ಷದ ಹಿರಿಯ ನಾಯಕನಿಗೆ ಕಾರನ್ನು ನೀಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆದರೂ ಸಹ ದೇಶದ ಹಿರಿಯ ನಾಯಕ, ರಾಜಕೀಯ ಮುತ್ಸದ್ದಿಯಾಗಿರುವ ದೇವೇಗೌಡರ ಭದ್ರತೆ ಮತ್ತು ಅನುಕೂಲಕ್ಕಾಗಿ ದುಬಾರಿ ಕಾರು ಖರೀದಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.






