ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ (Freedom park) ಬೆಲೆ ಏರಿಕೆ (Price hike) ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ (Bjp) ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಹೆಣಕ್ಕೂ ಟ್ಯಾಕ್ಸ್ ಹಾಕುವ ಸರ್ಕಾರ.ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಹಾಕದಿರುವ ತೆರಿಗೆಯೇ ಇಲ್ಲ. 2000 ಕೊಟ್ಟ ಪಿಕ್ ಪಾಕೆಟ್ ಮಾಡುತ್ತಿಲ್ಲ ಹಗಲು ದರೋಡೆ ಮಾಡ್ತಿದ್ದಾರೆ.ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ.
ಈ ರೀತಿಯ ಜನ ವಿರೋಧಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರಬೇಕಾ..? ಮಹದೇವಪ್ಪನಿಗೂ ಬರೆ, ಕಾಕಾ ಪಾಟೀಲ್ ಗೂ ಬರೇ, ಎಲ್ಲರ ಕಣ್ಣಿಗೂ ಸುಣ್ಣ ಹಾಕಿ, ಜಮ್ಮೀರ್ ಗೆ ಮಾತ್ರ ಬೆಣ್ಣೆ ಕೊಟ್ಟಿದ್ದಾರೆ ಎಂದು ಸಿಟಿ ರವಿ ಟೀಕಿಸಿದ್ದಾರೆ.

ಹೀಗಾಗಿ ಇದರ ವಿರುದ್ಧ ಬಿಜೆಪಿ ಹೋರಾಟಕ್ಕೆ ಮುಂದಾಗಿದ್ದು, ಕಾಂಗ್ರೆಸ್ ನವರನ್ನು ಪಾಕಿಸ್ತಾನಕ್ಕೆ ಕಳುಹಿಸಿಯಾದ್ರು ಸಂವಿಧಾನ ಉಳಿಸಿಕೊಳ್ತೇವೆ.ಡಿಕೆ ಶಿವಕುಮಾರ್ ಬಂದ್ರೂ, ಅವರ ಗುರು ಕೊತ್ವಾಲ್, ಬಂದ್ರು ನಾವು ಸಂವಿಧಾನ ಉಳಿಸಿಕೊಳ್ಳದೇ ಬಿಡುವುದಿಲ್ಲ ಎಂದಿದ್ದಾರೆ .