Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಕರ್ನಾಟಕದ ಸ್ಥಬ್ಧ ಚಿತ್ರಕ್ಕೆ ಮತ್ತೆ ಅನುಮತಿ ನೀಡಿದ ಕೇಂದ್ರ

ಫಾತಿಮಾ

ಫಾತಿಮಾ

January 13, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಬ್ರಾಹ್ಮಣ ಮುಖ್ಯಮಂತ್ರಿಯ ಕುರಿತು ಕುಮಾರಸ್ವಾಮಿ ಹುಟ್ಟುಹಾಕಿರುವ ಚರ್ಚೆ

ಮಂಡ್ಯ: ತೋಟದ ಮನೆಗೆ ನುಗ್ಗಿದ ಚಿರತೆ

ಹೃದಯಾಘಾತದಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಗಣರಾಜ್ಯೋತ್ಸವ ಪರೇಡ್‌ನಿಂದ ಕರ್ನಾಟಕದ ಟ್ಯಾಬ್ಲೋವನ್ನು ಕೈಬಿಡುವ ಕೇಂದ್ರ ಸರ್ಕಾರದ ನಿರ್ಧಾರ ಹೊರಬಿದ್ದ ನಂತರ ಕರ್ನಾಟಕದಲ್ಲಿ ವ್ಯಕ್ತವಾದ ತೀವ್ರವಾದ ಆಕ್ರೋಶಕ್ಕೆ ತಲೆಬಾಗಿದ ಕೇಂದ್ರ ರಕ್ಷಣಾ ಸಚಿವಾಲಯವು ರಾಜ್ಯದ ಟ್ಯಾಬ್ಲೋವನ್ನೂ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲು ಒಪ್ಪಿಕೊಂಡಿದೆ.

ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ರಕ್ಷಣಾ ಸಚಿವಾಲಯವು “ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು 2023ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಿಸಲು ಸರ್ಕಾರವು ಶಾರ್ಟ್‌ಲಿಸ್ಟ್ ಮಾಡಿದೆ” ಎಂದು ಬರೆದಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

‘ನಾರಿ ಶಕ್ತಿ’ಯನ್ನು ಬಿಂಬಿಸುವ ಮಹಿಳಾ ಕೇಂದ್ರಿತ ಟ್ಯಾಬ್ಲೋವನ್ನು ಕರ್ನಾಟಕವು ಈ ಬಾರಿ ಮಾಡಲು ಉದ್ದೇಶಿಸಿತ್ತು. ಇದೀಗ ಸರ್ಕಾರಕ್ಕೆ ಏಳು ದಿನಗಳ ಅವಕಾಶ ಲಭಿಸಿದ್ದು ಜನವರಿ 19ರ ಒಳಗಡೆ ಟ್ಯಾಬ್ಲೋ ತಯಾರಿಸಿ ದೆಹಲಿಗೆ ಕಳುಹಿಸಬೇಕಾಗಿದೆ..

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಈ ಬಾರಿ ಅವಕಾಶ ನೀಡದೇ ಇರುವುದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ತೀವ್ರವಾಗಿ ಟೀಕೆಗೆ ಒಳಗಾಗಿತ್ತು. ಆನಂತರ ಮುಖ್ಯಮಂತ್ರಿ ಬೊಮ್ಮಾಯಿಯವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು. ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿ ಕರ್ನಾಟಕಕ್ಕೆ ಈಗ ಮತ್ತೆ ಅವಕಾಶ ಲಭಿಸಿದೆ.

ಕಳೆದ ವರ್ಷ, ರಾಜ್ಯದ ಟ್ಯಾಬ್ಲೋ ‘ಸಾಂಪ್ರದಾಯಿಕ ಕರಕುಶಲತೆಯ ತೊಟ್ಟಿಲು’ ಎರಡನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದ್ದು, ಕೇಂದ್ರ ಸರ್ಕಾರ ತನ್ನ ಮೊದಲಿನ ನಿರ್ಧಾರಕ್ಕೇ ಬದ್ಧವಾಗಿದ್ದರೆ, 13 ವರ್ಷಗಳಲ್ಲಿ ಮೊದಲ ಬಾರಿಗೆ ಜನವರಿ 26 ರ ಪರೇಡ್‌ನಲ್ಲಿ ಕರ್ನಾಟಕದ ಟ್ಯಾಬ್ಲೋ ಇರುತ್ತಿರಲಿಲ್ಲ.

ಕೇಂದ್ರ ಸರ್ಮಾರದ ಮೊದಲಿನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಜೋಶಿ, ಈ ಬಾರಿಯು ಇದುವರೆಗೆ ಅವಕಾಶ ಪಡೆಯದ ರಾಜ್ಯಗಳು ಭಾಗವಹಿಸುವಂತೆ ಮಾಡುವುದು ಗುರಿಯಾಗಿತ್ತು ಎಂದು ಹೇಳಿದ್ದರು.

ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕರಿಸುವುದು ಸಾಮಾನ್ಯವಾಗಿ ರಾಜಕೀಯ ಕುತಂತ್ರವಾಗಿದ್ದು ಕಳೆದ ವರ್ಷ ಕೇಂದ್ರ ಸರ್ಕಾರವು ಕೇರಳ ಮತ್ತು ಪಶ್ಚಿಮ ಬಂಗಾಳದ ಗಣರಾಜ್ಯೋತ್ಸವದ ಸ್ಥಬ್ಧಚಿತ್ರವನ್ನು ತಿರಸ್ಕರಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಕಗ್ಗತ್ತಲಲ್ಲಿ ಮುಳುಗಿದ ಇತಿಹಾಸ ಪ್ರಸಿದ್ಧ ಬೋರಿಂಗ್ ಆಸ್ಪತ್…? #pratidhvaninews #pratidhvani #Bowringhospital
ವಿಡಿಯೋ

ಕಗ್ಗತ್ತಲಲ್ಲಿ ಮುಳುಗಿದ ಇತಿಹಾಸ ಪ್ರಸಿದ್ಧ ಬೋರಿಂಗ್ ಆಸ್ಪತ್…? #pratidhvaninews #pratidhvani #Bowringhospital

by ಪ್ರತಿಧ್ವನಿ
February 7, 2023
ನವಗ್ರಹ ಯಾತ್ರೆ, ಸಿ.ಡಿ ಸಂಕಲ್ಪ.. ಶೃಂಗೇರಿ ಮಠ ಧ್ವಂಸ.. ಮರಾಠಿಯ ಪೇಶ್ವೆ ಬ್ರಾಹ್ಮಣ..!
ಕರ್ನಾಟಕ

ಪೇಶ್ವೆ ಡಿಎನ್ ಎ ವ್ಯಕ್ತಿಯನ್ನೇ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಲಿ: ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
February 7, 2023
ಕೋಲಾರದ ಮಾಲೂರಿನಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಪ್ರಚಾರಕ್ಕಾಗಿ ಗಿಫ್ಟ್ ಪಾಲಿಟಿಕ್ಸ್
ರಾಜಕೀಯ

ಕೋಲಾರದ ಮಾಲೂರಿನಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಪ್ರಚಾರಕ್ಕಾಗಿ ಗಿಫ್ಟ್ ಪಾಲಿಟಿಕ್ಸ್

by ಪ್ರತಿಧ್ವನಿ
February 6, 2023
ಪುನೀತ್‌ ರಾಜ್‌ಕುಮಾರ್‌ ಅಂತ ಹೆಸರು ಇಡೋದೆ ನಮ್ಮ ಪುಣ್ಯ : R Ashok
ಸಿನಿಮಾ

ಪುನೀತ್‌ ರಾಜ್‌ಕುಮಾರ್‌ ಅಂತ ಹೆಸರು ಇಡೋದೆ ನಮ್ಮ ಪುಣ್ಯ : R Ashok

by ಪ್ರತಿಧ್ವನಿ
February 7, 2023
D BOSS | PUSHPAVATHI | KRANTHI | ಕ್ರಾಂತಿ ಪುಷ್ಪಾವತಿ ಬಂದರೆ ಕ್ಯಾಮರ ಫಲ್‌ ಶೇಕ್!
ಸಿನಿಮಾ

D BOSS | PUSHPAVATHI | KRANTHI | ಕ್ರಾಂತಿ ಪುಷ್ಪಾವತಿ ಬಂದರೆ ಕ್ಯಾಮರ ಫಲ್‌ ಶೇಕ್!

by ಪ್ರತಿಧ್ವನಿ
February 3, 2023
Next Post
ಕೇಂದ್ರದ ಮಾಜಿ ಸಚಿವ ಶರದ್ ಯಾದವ್  ನಿಧನ

ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ನಿಧನ

ಸಿದ್ದೇಶ್ವರ ಸ್ವಾಮಿಗಳ ವಿದ್ವತ್ತಿಗೆ ಸಮಬಾರದ ವೈದಿಕ  ಶತಾವಧಾನಿ/ಸಹಸ್ರಾವಧಾನಿಗಳು

ಸಿದ್ದೇಶ್ವರ ಸ್ವಾಮಿಗಳ ವಿದ್ವತ್ತಿಗೆ ಸಮಬಾರದ ವೈದಿಕ ಶತಾವಧಾನಿ/ಸಹಸ್ರಾವಧಾನಿಗಳು

ಸ್ಯಾಂಟ್ರೋ ರವಿ ವಿರುದ್ದ IT, ED, CBIಗೆ ಒಡನಾಡಿ ಸಂಸ್ಥೆ ದೂರು

ಕೊನೆಗೂ ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಬಂಧನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist