ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನವನ್ನು ಲೋಕಸಭೆಯಲ್ಲಿ ತಮ್ಮ ಭಾಷಣದೊಂದಿಗೆ ಪ್ರಾರಂಭಿಸಿದ ಪ್ರಧಾನಿ ಮೋದಿ ಹಲವು ವಿಚಾರಗಳ ಕುರಿತು ಇಂದು ಮಾತನಾಡಿದ್ದಾರೆ ಸಂಸತ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು
ಇಂದು ಭಾರತೀಯರ ಸಾಧನೆ ವಿಶ್ವದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಜೊತೆಗೆ ಚರ್ಚಿಸಲ್ಪಡುತ್ತಿದೆ ಇದು ನಮ್ಮ ಸಂಸತ್ತಿಗೆ 75 ವರ್ಷಗಳ ಇತಿಹಾಸದಲ್ಲಿ ನಮ್ಮೆಲ್ಲರ ಒಗ್ಗಟ್ಟಿನ ಮಂತ್ರದ ಪ್ರತಿಫಲವಾಗಿದೆ, ಚಂದ್ರಯಾನ ಮೂರರ ಯಶಸ್ಸು ಕೇವಲ ಭಾರತ ಮಾತ್ರವಲ್ಲದೆ ಭಾರತೀಯರ ಸಾಧನೆಗೆ ವಿಶ್ವವೇ ಹೆಮ್ಮೆಪಡುತ್ತದೆ. ನಮ್ಮ ತಂತ್ರಜ್ಞಾನ ವಿಜ್ಞಾನ ಮತ್ತು ನಮ್ಮ ನೆಲದ ವಿಜ್ಞಾನಿಗಳ ಮತ್ತು 140 ಕೋಟಿ ಭಾರತೀಯರ ಹೊಸ ರೂಪ ಶಕ್ತಿಯನ್ನ ಪ್ರದರ್ಶಿಸಿದೆ. ಇಂದು ನಾನು ಮತ್ತೊಮ್ಮೆ ನಮ್ಮ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದರು

ಮಹಿಳಾ ಸಂಸದರ ಸಂಖ್ಯೆ ಈ ಹಿಂದೆ ಕಡಿಮೆ ಇದ್ದಿರಬಹುದು, ಆದರೆ ಹಳೆಯ ಸಂಸತ ಭವನ ಮುಂದಿನ ಪೀಳಿಗೆಯ ಸ್ಪೂರ್ತಿಗೆ ಕಾರಣವಾಗಿರುತ್ತದೆ ಎಂಬುದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ
ನಾನು ಈ ಸಂಸತ್ತು ಭವನಕ್ಕೆ ಸದಸ್ಯನಾಗಿ ಬರುವಾಗ ಶಿರಭಾಗಿ ನಮಿಸಿ ಒಳ ಪ್ರವೇಶಿಸಿದ್ದೆ, ನಾನು ಜನರಿಂದ ಇಷ್ಟೊಂದು ಪ್ರೀತಿ ಪಡೆಯುತ್ತೇನೆಂದು ಊಹಿಸಿ ಇರಲಿಲ್ಲ, ಈ ಹಳೆಯ ಸಂಸದ ಭವನ ಅನೇಕ ಕಹಿ ಸಿಹಿ ನೆನಪುಗಳನ್ನು ಹೊಂದಿದೆ. ಈ ಕಟ್ಟಡಕ್ಕೆ ವಿದಾಯ ಹೇಳುವುದು ಭಾವನಾತ್ಮಕ ಕ್ಷಣವಾಗಿದೆ ಎಂದು ಹಳೆ ಸಂಸತ್ತಿನಲ್ಲಿ ಕಳೆದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಬದಲಾಗುತ್ತಿರುವ ಸಮಯದೊಂದಿಗೆ, ನಮ್ಮ ಸದನದ ರಚನೆಯೂ ಬದಲಾಗಿದೆ ಮತ್ತು ಹೆಚ್ಚು ಅಂತರ್ಗತವಾಗಿದೆ. ಸಮಾಜದ ಪ್ರತಿಯೊಂದು ವರ್ಗವು ವೈವಿಧ್ಯತೆಯಿಂದ ತುಂಬಿದೆ, ಅದರ ಪ್ರತಿಬಿಂಬವು ಸದನದಲ್ಲಿ ಗೋಚರಿಸುತ್ತದೆ.
ನಾವೆಲ್ಲರೂ ಈ ಐತಿಹಾಸಿಕ ಕಟ್ಟಡಕ್ಕೆ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯದ ಮೊದಲು, ಈ ಸದನವು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ನ ಸ್ಥಳವಾಗಿತ್ತು. ಸ್ವಾತಂತ್ರ್ಯದ ನಂತರ, ಇದು ಸಂಸತ್ ಭವನದ ಗುರುತನ್ನು ಪಡೆಯಿತು.

ಈ ಕಟ್ಟಡವನ್ನು ನಿರ್ಮಿಸುವ ನಿರ್ಧಾರವನ್ನು ವಿದೇಶಿ ಆಡಳಿತಗಾರರು ತೆಗೆದುಕೊಂಡರು ಎಂಬುದು ನಿಜ, ಆದರೆ ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಮತ್ತು ನಿರ್ಮಾಣಕ್ಕೆ ಹೋದ ಶ್ರಮ, ಕಠಿಣ ಪರಿಶ್ರಮ ಮತ್ತು ಹಣ ನನ್ನ ದೇಶವಾಸಿಗಳದ್ದು ಎಂದು ಹೆಮ್ಮೆಯಿಂದ ಹೇಳಬಹುದು. ಎಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಹೇಳಿಕೆಯನ್ನು ನೀಡಿದ್ದಾರೆ