ತೆಲಂಗಾಣ ; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಪೇಸಿಎಂ ಅಭಿಯಾನ ರಾಜ್ಯದಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಇದೇ ರೀತಿಯಾದ ಅಭಿಯಾನಗಳನ್ನ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದ ಹಲವು ರಾಜ್ಯಗಳಲ್ಲಿ ಮಾಡಲಾಗುತ್ತಿದೆ.. ಇದೀಗ ತೆಲಂಗಾಣದಲ್ಲೂ ಇದೇ ಪ್ಲಾನ್ ಅನುಸರಿಸಿರುವ ಕಾಂಗ್ರೆಸ್ ಹೊಸ ಅಭಿಯಾನ ಆರಂಭಿಸಿದೆ.

ಹೌದು.. ನಿನ್ನೆಯಷ್ಟೇ ತೆಲಂಗಾಣದಲ್ಲಿ ಬೃಹತ್ ಸಮಾವೇಷವನ್ನ ಆಯೋಜನೆ ಮಾಡಿ, ಕಾಂಗ್ರೆಸ್ ಆರು ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು, ಇದಾದ ಬಳಿಕ ಯಾರೂ ನಿರೀಕ್ಷಿಸದ ಹಾಗೆ ಬುಕ್ ಮೈ ಸಿಎಂ ಎಂಬ ಅಭಿಯಾನವನ್ನ ತೆಲಂಗಾಣದಲ್ಲಿ ಆರಂಭಿಸಿ ಕಾಂಗ್ರೆಸ್ ಸಂಚಲನ ಸೃಷ್ಟಿಸಿದೆ. ಈ ಕುರಿತು ತೆಲಂಗಾಣದ ಹಲವು ಕಡೆಗಳಲ್ಲಿ ಪೋಸ್ಟರ್ ಅಂಟಿಸಿರುವ ಕಾಂಗ್ರೆಸ್, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರನ್ನ ಮುಜುಗರಕ್ಕೆ ಸಿಲುಕಿಸಿದೆ.

ಸಿಎಂ ಕೆ ಚಂದ್ರಶೇಖರ್ ರಾವ್ ಮೇಲೆ 30 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರ ಆರೋಪ ಮಾಡಿರುವ ಕಾಂಗ್ರೆಸ್ ಕ್ರಿಯಾತ್ಮಕ ಪೋಸ್ಟರ್ ಅಂಟಿಸಿ ಹೊಸ ಅಭಿಯಾನವನ್ನ ಆರಂಭಿಸಿದೆ, ಬುಕ್ ಮೈ ಸಿಎಂ ಕೆಳಗೆ ಕೆ ಚಂದ್ರಶೇಖರ್ ರಾವ್ ಫೋಟೋ ಬಳಸಲಾಗಿದ್ದು, ಕೆಸಿಆರ್ ಕಪ್ಪು ಗ್ಲಾಸ್ ಧರಿಸಿರುವ ಪೋಟೋ ಸೃಷ್ಟಿಸಿ, ಆ ಗ್ಲಾಸ್ ಮೇಲೆ 30 ಪರ್ಸೆಂಟ್ ಎಂದು ಬರೆಯಲಾಗಿದೆ. ಇಷ್ಟೇ ಅಲ್ಲ ಥೀಯೆಟರ್‌ನಲ್ಲಿ ಹಗರಣ 2023 ಎಂದು ಬರೆಯಲಾಗಿದೆ. ಉತ್ತಮ ಅನುಭವಕ್ಕಾಗಿ 3ಡಿ ಶೇಕಡಾ 30 ಪರ್ಸೆಂಟ್ ಗ್ಲಾಸ್ ಬಳಕೆ ಮಾಡಿ ಎಂದು ಬರೆಯುವ ಮೂಲಕ, ಮೊದಲ ಬಾರಿಗೆ ಕೆಸಿಆರ್ ಸರ್ಕಾರಕ್ಕೆ ಬಹುದೊಡ್ಡ ಹೊಡೆತವನ್ನ ಕೊಟ್ಟ ವಿಪಕ್ಷವಾಗಿ ಕಾಂಗ್ರೆಸ್ ಹೊರ ಹೊಮ್ಮಿದೆ.
