ಹುಬ್ಬಳ್ಳಿ: ಪಾಕಿಸ್ತಾನದ ಮಿಲಿಟರಿ ಚುನಾಯಿತ ಸರ್ಕಾರದ ಮಾತು ಕೇಳಲ್ಲ, ಹೀಗಾಗಿ ಕದನ ವಿರಾಮ ಉಲ್ಲಂಘನೆ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಿನ್ನೆ ಪಾಕಿಸ್ತಾನದ ಡಿಜಿಎಂಒ ಭಾರತಕ್ಕೆ ಕರೆ ಮಾಡಿ ಕದನ ವಿರಾಮ ಘೋಷಣೆ ಮಾಡಿದ್ರು. ನಂತರ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯನ್ನ ಪೋಷಿಸುತ್ತಾ ಇರ್ತಾರೆ ಎಂದಿದ್ದಾರೆ.

ಮೊದಲ ಬಾರಿಗೆ ನಮ್ಮ ಡಿಫೆನ್ಸ್ ಫೋರ್ಸ್ ಹಾಗೂ ಮಿಲಿಟರಿ ಚೀಫ್ಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದಾರೆ ಅನ್ನೋ ಅಭಿಪ್ರಾಯ ಬಂದಿದ್ದವು. ಕಳೆದ 30-40 ವರ್ಷದಿಂದ ನಮ್ಮ ದೇಶದಲ್ಲಿ ಭಯೋತ್ಪಾದನೆ ನಡೆದುಕೊಂಡೇ ಬಂದಿದೆ. 1980ರ ನಂತರ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ಚಟುವಟಿಕೆ ನಮ್ಮ ದೇಶದಲ್ಲಿ ನಡೆದಿವೆ. ಈ ಮೊದಲು ಪಹಲ್ಗಾಮ್ಗಿಂತ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿವೆ. ಇದೀಗ ಮೊದಲ ಬಾರಿಗೆ ದೇಶ ಒಂದಾಗಿದೆ. ಸರ್ಕಾರ ತೀರ್ಮಾನ ಕೈಗೊಂಡು ಬಲವಾಗಿ ಪ್ರತೀಕಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಟೆರರಿಸ್ಟ್ಗಳ ಕುಟುಂಬಗಳು ಹತವಾಗಿವೆ. ಲಾಂಚಿಂಗ್ ಪ್ಯಾಡ್, ಅಡಗು ತಾಣ ಧ್ವಂಸಗೊಳಿಸಲು ಭಾರತದ ಮಿಲಿಟರಿಗೆ ಸಾಧ್ಯವಾಗಿದೆ. ಭಾರತ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಭಾರತೀಯ ಸೇನೆಗೆ ಮುಕ್ತ ಅವಕಾಶ ಕೊಟ್ಟಿತ್ತು. ಯುದ್ಧ ವಿರಾಮದ ಘೋಷಣೆಗಿಂತ ಮುಂಚೆ ಅತ್ಯಂತ ಕಠಿಣ ನಿಲುವು ತೆಗೆದುಕೊಂಡಿದೆ. ಭಯೋತ್ಪಾದನೆಯನ್ನ ಯುದ್ಧ ಅಂತ ಪರಿಗಣಿಸುತ್ತೇವೆ ಅನ್ನೋ ನಿಲುವು ಕೈಗೊಂಡಿದೆ. ಇನ್ನು ಮುಂದೆ ಭಯೋತ್ಪಾದನೆ ಆದರೆ ಅದನ್ನ ಯುದ್ಧ ಅಂತ ಪರಿಗಣಿಸಲಾಗುತ್ತ ಎಂದಿದ್ದಾರೆ.

ಪಾಕಿಸ್ತಾನ ಇನ್ನು ಮುಂದಾದರೂ ಬುದ್ದಿ ಕಲಿಯಬೇಕು. ನಾವು ಭಾರತೀಯರು ಶಾಂತಿ ಪ್ರಿಯರು. ಆದರೆ ನಮ್ಮ ಮೇಲೆ ಬಂದ್ರೆ ಬಿಡೋದಿಲ್ಲ ಅಂತ ಈ ಘಟನೆಯಿಂದ ಸ್ಪಷ್ಟ ಪಡಿಸಿದ್ದೇವೆ. ಕದನ ವಿರಾಮಕ್ಕೆ ಯುಪಿಎ ನಾಯಕರ ಸಂತಸ ವಿಚಾರ, ಅವರು ಯಾಕೆ ಖುಷಿ ಪಟ್ರು..? ಏನು ಟ್ವೀಟ್ ಮಾಡಿದ್ರು..? ಅದರ ಬಗ್ಗೆ ನಾನು ಮಾತಾಡೋದಿಲ್ಲ. ಭಾರತಕ್ಕೆ ಅದರದ್ದೇ ಆದ ಶಕ್ತಿ ಇದೆ. ಈ ಮೊದಲು ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ನಡೆದ್ರು ಸೌಮ್ಯವಾಗಿ ನಡೆದುಕೊಳ್ತಿದ್ವಿ. ಈ ಬಾರಿ ಮೊದಲ ದಿವಸವೇ 9ಕ್ಕೂ ಹೆಚ್ಚಿನ ಲಾಚಿಂಗ್ ಪ್ಯಾಡ್ ಮೇಲೆ ನಮ್ಮವರು ಅಟ್ಯಾಕ್ ಮಾಡಿದ್ದಾರೆ. ಅವರ ಅಡಗು ತಾಣಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸಂತಸ, ಟೀಕೆ ಮಾಡುವವರ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರವೇ ದೇಶದಲ್ಲಿ ನಡೆಯುವ ಭಯೋತ್ಪಾದನೆ ಚುಟುವಟಿಕೆ ಬಾರ್ಡರ್ಗೆ ಸೀಮಿತ ಆಗಿದೆ. ಭಾರತ ಸರ್ಕಾರ, ಮಿಲಿಟರಿಗೆ ಅದರದ್ದೇ ಆದ ತಂತ್ರಗಳು ಇರುತ್ತವೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧ ಪಟ್ಟ ಎಲ್ಲಾ ವಿಷಯಗಳನ್ನು ವಿದೇಶಾಂಗ ವಕ್ತಾರರು ತಿಳಿಸುತ್ತಾರೆ. ಟ್ರಂಪ್ ಮಧ್ಯಸ್ತಿಕೆ ವಿಚಾರ ಹಾಗು ಪಾಕಿಸ್ತಾನದ ಡಿಜಿಎಂ ನೇರವಾಗಿ ಭಾರತಕ್ಕೆ ಮಾತನಾಡಿದ್ದಾರೆ ಅನ್ನೋ ವರದಿ ಬಂದಿದೆ. ಮುಂದಿನ ವಿಷಯ ಸಂಬಂಧ ಪಟ್ಟವರು ತಿಳಿಸುತ್ತಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ, ವಿದೇಶಾಂಗ ಮಂತ್ರಿ ಈ ಬಗ್ಗೆ ಮಾಹಿತಿ ಕೊಡ್ತಾರೆ ಎಂದಿದ್ದಾರೆ.