ಪಾಕಿಸ್ತಾನವನ್ನ ನಂಬಿಲಿಕ್ಕೆ ಆಗಲ್ಲ, ಕದನ ವಿರಾಮ ಉಲ್ಲಂಘನೆ ಮಾಡೋದು ಅವರಿಗೆ ಹೊಸದಲ್ಲ ಎಂದು ಮೈಸೂರಿನ ನಂಜನಗೂಡಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಪಾಕಿಸ್ತಾನ ಮೊದಲಿನಿಂದಲೂ ಪ್ರಚೋದನೆ ಮಾಡುತ್ತಾನೇ ಬಂದಿದೆ. ನಮ್ಮ ದೇಶ ಯಾವಗಲೂ ಪ್ರಚೋದನೆ ಮಾಡಿಲ್ಲ. ದೇಶದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡರು ನಮ್ಮ ಸಹಕಾರ ಇದೆ. ಭಯೋತ್ಪಾದನೆ ಎಲ್ಲೂ ಬೆಳೆಯಬಾರದು ಅದನ್ನ ಬೇರು ಸಮೇತ ಕಿತ್ತಾಕ್ಬೇಕು. ಪಾಕಿಸ್ತಾನದ ವಿಚಾರದಲ್ಲಿ ಈಗ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ನೋಡೋಣ, ನಮ್ಮ ಸಹಕಾರ ಇದ್ದೇ ಇದೆ ಎಂದಿದ್ದಾರೆ.

ಕೇಂದ್ರ ರಾಜಕೀಯ ಮಾಡುತ್ತಿದ್ಯಾ ಅದೆಲ್ಲಾ ನಮಗೆ ಗೊತ್ತಿಲ್ಲ. ನಾವಂತೂ ಯಾವ ರಾಜಕೀಯ ಮಾಡುತ್ತಿಲ್ಲ. ನಮಗೆ ಮೊದಲು ದೇಶ ಮುಖ್ಯ, ದೇಶದ ಜನ ಮುಖ್ಯ. ದೇಶದ ಹಿತಾಸಕ್ತಿ, ನಾಗರೀಕರ ಹಿತಾಸಕ್ತಿಗಾಗಿ ನಮ್ಮ ಸಹಕಾರ ಇದೆ. ಪಾಕಿಸ್ತಾನ ಮೊದಲಿನಿಂದಲೂ ನಿಯಮಗಳನ್ನ ಮೀರುತ್ತಲೇ ಬಂದಿದೆ. ಪಾಕಿಸ್ತಾನವನ್ನ ನಂಬೋಕೆ ಆಗಲ್ಲ ಎಂದು ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ನಂಜನಗೂಡಿನಲ್ಲಿ ಹೇಳಿಕೆ ನೀಡಿದ್ದಾರೆ.

ರಾಮನಗದಲ್ಲಿ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪಾಕಿಸ್ತಾನ ಕದನ ವಿರಾಮ ಘೋಷಣೆ ಬಳಿಕ ಮರುದಾಳಿ ಮಾಡಿದ ವಿಚಾರ, ಪಾಕಿಸ್ತಾನ ಪದೇ ಪದೇ ಚೇಷ್ಟೆ ಮಾಡ್ತಿದೆ. ಅವರೇ ನಮ್ಮ ಮೇಲೆ ದಾಳಿ ಮಾಡ್ತಿದ್ದಾರೆ. ಈಗಾಗಲೇ ನಮ್ಮ ಸೇನೆ ಪಾಠ ಕಲಿಸುವ ಕೆಲಸ ಮಾಡಿದೆ. ಇನ್ನು ಕಲಿಸಿದರೆ ಒಳ್ಳೆಯದು ಅನಿಸುತ್ತದೆ. ಎಲ್ಲ ಪಕ್ಷಗಳು ಸಹ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕಿದೆ ಎಂದು ರಾಮನಗರದಲ್ಲಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಭಾರತ ನಡುವೆ ನಡೆಯುತ್ತಿದ್ದ ಸಂಘರ್ಷ ನಿಲ್ಲಿಸಿ ಮತ್ತೆ ಶುರು ಮಾಡಿದ ವಿಚಾರವಾಗಿ ಬೆಳಗಾವಿಯ ಹುಕ್ಕೇರಿಯಲ್ಲಿ ಸಭಾಪತಿ ಬಸವರಾಜ ಹೋರಟ್ಟಿ ಪ್ರತಿಕ್ರಿಯೆ ನೀಡಿದ್ದು, ಭಾರತ ಯುದ್ಧವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನವನ್ನ ನಾಶ ಮಾಡಬೇಕು. ಯಾರದೋ ಮಾತು ಕೇಳಿ ಯುದ್ಧ ನಿಲ್ಲಿಸಬಾರದಿತ್ತು. ಕದನ ವಿರಾಮದ ನಂತರ ಮತ್ತೆ ದಾಳಿ ಮಾಡಿದ್ದಾರೆ. ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೊತೆ ನಡೆಸುತ್ತಿರುವ ಯುದ್ಧ ಕೈ ಬಿಡುವುದು ತಪ್ಪು ಎಂದಿದ್ದಾರೆ.

ಪಾಕಿಸ್ತಾನದವರು ಸಾಯುವವರೆಗೂ ನಮಗೆ ವೈರಿಗಳೇ, ಅವರು ಎಂದಿಗೂ ನಮಗೆ ಒಳ್ಳೆಯದು ಮಾಡಲ್ಲ. ಪಾಕ್ ಹಾಗೂ ಭಾರತದ ನಡುವೆ ಯುದ್ಧ ಸಂಧಾನದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಿದ ವಿಚಾರವಾಗಿ ಮಾತನಾಡಿದ್ದು, ಮಧ್ಯಸ್ಥಿಕೆ ವಹಿಸೋದಕ್ಕೆ ಟ್ರಂಪ್ ಯಾರು.!? ಅಮೆರಿಕದ ವಿಚಾರದಲ್ಲಿ ನಾವು ಏನಾದ್ರೂ ಹೇಳಿದ್ರೆ ಅವರು ಕೇಳ್ತಾರಾ..!? ಮೋದಿಯವರು ಕಠಿಣ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಯುದ್ಧದ ವಿಚಾರದಲ್ಲಿ ಟ್ರಂಪ್ ಮಾತು ಕೇಳಿದ್ದು ತಪ್ಪು ಎನ್ನುವ ಮೂಲಕ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಬಸವರಾಜ ಹೋರಟ್ಟಿ. ಭಯೋತ್ಪಾದಕರ ವಿಚಾರದಲ್ಲಿ ಎಲ್ಲಾ ದೇಶಗಳು ಶೃಂಗ ಸಭೆಯನ್ನ ನಡೆಸಿ, ಭಯೋತ್ಪಾದಕರನ್ನ ನಾಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.