• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

500 ಟಿಎಂಸಿ ನೀರು ಸಂರಕ್ಷಣೆಗೆ ಹತ್ತೂ ನದಿಗಳ ತಿರುವು ಯೋಜನೆ

Any Mind by Any Mind
March 17, 2022
in ಕರ್ನಾಟಕ, ವಾಣಿಜ್ಯ
0
500 ಟಿಎಂಸಿ ನೀರು ಸಂರಕ್ಷಣೆಗೆ ಹತ್ತೂ ನದಿಗಳ ತಿರುವು ಯೋಜನೆ
Share on WhatsAppShare on FacebookShare on Telegram

ಪಶ್ಚಿಮಕ್ಕೆ ಹರಿಯುವ ಹತ್ತು ನದಿಗಳನ್ನು ‘ನದಿ ತಿರುಗಿಸುವ’ ಯೋಜನೆ ಮೂಲಕ 500 ಟಿಎಂಸಿ ನೀರಿನ ಸಂರಕ್ಷಣೆ ಮಾಡಬೇಕೆಂದು 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಸ್ತಾಪಿಸಿದೆ.

ADVERTISEMENT

ಅರೆಬ್ಬಿ ಸಮುದ್ರಕ್ಕೆ ಹರಿದು ಹೋಗುತ್ತಿರುವ 500 ಟಿಎಂಸಿ ನೀರನ್ನು ಸಂರಕ್ಷಿಸಲು, ನೀರು ಕೊಯ್ಲು ನಿರ್ಮಿತಿಗಳನ್ನು ಸೃಜಿಸುವ, ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ತ್ಯಾಜ್ಯ ನೀರಿನ ಮರುಬಳಕೆಯೊಂದಿಗೆ ಕೆರೆ ಭರ್ತಿ ಮಾಡುವ ಮೂಲಕ, ರಾಷ್ಟ್ರೀಯ ಮೂಲಸೌಕರ್ಯ ಕೊಳವೆಮಾರ್ಗ ಯೋಜನೆ ಅಡಿಯಲ್ಲಿ ನದಿ ಜೋಡಣೆ ಮೂಲಕ ಪಶ್ಚಿಮ ವಾಹಿನಿ ನದಿಗಳ ಪಾತ್ರ ಬದಲಾಯಿಸುವುದನ್ನು ಪ್ರಸ್ತಾಪಿಸಲಾಗಿದೆ.

ನೀರಾವರಿಗೂ ಸೌರಶಕ್ತಿಯ ವಿಸ್ತರಣೆ ಮಾಡುವುದು, ರಾಜ್ಯದ ಹಸಿರು ಹೊದಿಕೆಯನ್ನು ಶೇ.23.7ರಿಂದ ಶೇ.33ಕ್ಕೆ ಹೆಚ್ಚಿಸಬೇಕೆಂದು ಪ್ರಸ್ತಾಪಿಸಿದೆ. ಇದಲ್ಲದೇ ಘನತ್ಯಾಜ್ಯ ಮತ್ತು ಇತ್ಯಾಜ್ಯಗಳ ಸದ್ಭಳಕೆಗೂ ಕಾರ್ಯಸೂಚಿ ರೂಪಿಸಿದೆ. ಘನತ್ಯಾಜ್ಯಗಳ ಮರುಬಳಕೆಯಿಂದ ಜೈವಿಕ ಕೇಂದ್ರಗಳು, ಮಿಶ್ರಗೊಬ್ಬರ ಘಟಕಗಳು ಮತ್ತು ಆಧುನಿಕ ಮಾರುಕಟ್ಟೆಗಳನ್ನು ರೂಪಿಸುವುದೆಂದು ತಿಳಿಸಿದೆ.

ನಿರ್ಮಲ ಮತ್ತು ಹಸಿರು ಕರ್ನಾಟಕದ ಮುಂದಿನ ಹಾದಿಯ ರೂಪುರೇಷೆಗಳನ್ನು ಆರ್ಥಿಕ ಸಮೀಕ್ಷೆ ಪ್ರಸ್ತಾಪಿಸಿದೆ. ಇ ತ್ಯಾಜ್ಯ ನಿರ್ವಹಣೆಯನ್ನು ನಗದೀಕರಿಸುವ ಬಗ್ಗೆ ಪ್ರಸ್ತಾಪಿಸಿದೆ. ಪ್ರಸ್ತುತ 2.92.ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದ್ದು, ಅದರ ಮರುಬಳಕೆಯ ಮೌಲ್ಯವು 2886 ಕೋಟಿ ರೂಪಾಯಿಗಳಷ್ಟಿದೆ. ಪ್ರಸ್ತುತ ಕೇವಲ 317 ಕೋಟಿ ರೂಪಾಯಿಗಳಷ್ಟು ಮರುಬಳಕೆ ಆಗುತ್ತಿದ್ದು, 2569 ಕೋಟಿ ನಷ್ಟವಾಗುತ್ತಿದೆ ಎಂದೂ ಪ್ರಸ್ತಾಪಿಸಿದೆ.

ಕೋವಿಡೋತ್ತರ ಪರಿಸ್ಥಿತಿಯಲ್ಲಿ ಎಲ್ಲಾ ರಾಷ್ಟ್ರಗಳು ಆರ್ಥಿಕತೆಯನ್ನು ಮರುರೂಪಿಸುವ ಕಡೆಗೆ ಮುನ್ನಡೆಯುತ್ತಿರುವುದರಿಂದ, ಸ್ವಚ್ಚ, ಹಸಿರು, ಆರೋಗ್ಯಕರ, ಸುರಕ್ಷಿತ ಮತ್ತು ಹೆಚ್ಚು ಸ್ಥಿತಿಸ್ಥಾಪಕತೆಯನ್ನು ಹೊಂದಿರುವಂಥ ನಿಟ್ಟಿನಲ್ಲಿ 21ನೇ ಶತಮಾನದ ಆರ್ಥಿಕತೆಯನ್ನು ರೂಪುಗೊಳಿಸಬಹುದಾಗಿದೆ ಎಂದೂ ಆರ್ಥಿಕ ಸಮೀಕ್ಷೆ ಹೇಳಿದೆ.

ಸಾಂದಾರ್ಭಿಕ ಚಿತ್ರ

ಪ್ರಸ್ತುತ ಬಿಕ್ಕಟ್ಟು, ಜನತೆ ಮತ್ತು ಭೂಮಿ ಎರಡರ ಉದ್ದೇಶಕ್ಕೆ ಸಾಧಕವಾಗುವಂಥ ಹೆಚ್ಚು ಸುಸ್ಥಿರ ಆರ್ಥಿಕತೆಗೆ ಗಾಢ, ವ್ಯವಸ್ಥಿತ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ. ವಿಶ್ವಸಂಸ್ಥೆಯ ಮಹಾ-ಕಾರ್ಯದರ್ಶಿಗಳು, ಸರ್ಕಾರಗಳಿಗೆ ಆರು ಹವಾಮಾನ-ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಸ್ತಾಪಿಸಿದ್ದು, ಒಮ್ಮೆ ಅವುಗಳನ್ನು ಪ್ರಾರಂಭಿಸಿದರೆ, ತಮ್ಮ ಆರ್ಥಿಕತೆಗಳನ್ನು ಮತ್ತು ಸಮಾಜಗಳನ್ನು ಪುನಃ ನಿರ್ಮಿಸಿಕೊಳ್ಳಬಹುದು.

ಹಸಿರು ಪರಿವರ್ತನೆ, ಹಸಿರು ಆರ್ಥಿಕತೆ, ಸುಸ್ಥಿರ ಪರಿಹಾರಗಳಲ್ಲಿ ಹೂಡಿಕೆ, ಹವಾಮಾನ ಅಪಾಯ ಎದುರಿಸುವುದು ಮತ್ತು ಸಹಕಾರ ನೀಡುವುದು ಪ್ರಮುಖ ಅಂಶಗಳಾಗಿವೆ.

ಹವಮಾನ ಬದಲಾವಣೆ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಅಂಶಗಳು.

  • ಜಲಾಶಯಗಳ ಸಂರಕ್ಷಣೆಗೆ ಜೀರ್ಣೋದ್ಧಾರ/ಒಡ್ಡು ದುರಸ್ಥಿ ಮಾಡುವುದು ಮತ್ತು ವನನಿರ್ಮಾಣ ಮಾಡುವುದು ಹಾಗೂ ಪ್ರವಾಹಗಳನ್ನು ತಪ್ಪಿಸುವುದರ ಜೊತೆಗೆ ಕೆರೆಗಳ ಹೂಳು ತೆಗೆಯುವುದು ಮತ್ತು ಕೆರೆಗಳನ್ನು ಆಳಗೊಳಿಸುವುದು.

  • ಬೆಂಗಳೂರನ್ನು ಇ-ತ್ಯಾಜ್ಯ ನಿರ್ವಹಣಾ ತಾಣವನ್ನಾಗಿ (e-waste management hub) ಅಭಿವೃದ್ಧಿಪಡಿಸಿ, ತಾಮ್ರ, ಚಿನ್ನದಂಥ ಪ್ರಶಸ್ತ ಲೋಹಗಳನ್ನು ಪಡೆಯುವ ಮೂಲಕ ಆದಾಯ ಸೃಜಿಸುವುದು.

  • ಸಿಒ2 ಹೊರಸೂಸುವಿಕೆಯನ್ನು ತಗ್ಗಿಸಲು ಎಲ್ಇಡಿ ಬಲ್ಬ್ಗಳ ಬಳಕೆಯನ್ನು ಪ್ರತಿ 1000 ಜನಸಂಖ್ಯೆಗೆ 37.54ರಿಂದ 120.07ಕ್ಕೆ ಹೆಚ್ಚಿಸುವುದು.

  • ಸುಸ್ಥಿರ ಆಧಾರದ ಮೇಲೆ, ಸರಬರಾಜು ಮತ್ತು ಬೇಡಿಕೆ ಅಂತರಗಳನ್ನು ಸರಿದೂಗಿಸಲು, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಕ್ಕೂ ಸಮಗ್ರ ಜಲ ಸಂಪನ್ಮೂಲ ನೀತಿಯನ್ನು ಸಿದ್ಧಪಡಿಸುವುದು.

  • ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ, 1199 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ, 41 ಅತ್ಯಂತ ಹೆಚ್ಚು ಅಂತರ್ಜಲ ದುರ್ಬಳಕೆಯಾಗಿರುವ ತಾಲೂಕುಗಳಲ್ಲಿ ನೀರು ಸುರಕ್ಷತೆ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.

  • ಕಿರು ನೀರಾವಾರಿ ಯೋಜನೆಗಳ ಹಾಗೂ ಮೇಲ್ವಿಚಾರಣಾ ನಿಯಂತ್ರಣ ಮತ್ತು ಕೊಳಾಯಿ ಅಳವಡಿಸಿದ ನೀರು ರವಾನೆ ವ್ಯವಸ್ಥೆಯ ಮೂಲಕ ನೀರು ಬಳಕೆ ದಕ್ಷತೆಗೆ ಉತ್ತೇಜನ ನೀಡುವುದು.

  • ನೀರಾವರಿ ಆಧುನೀಕರಣ ಕಾರ್ಯಕ್ರಮದ ಬೆಂಬಲದ ಅಡಿಯಲ್ಲಿ, ಹಳೆಯ ಕಾಲುವೆ ವ್ಯವಸ್ಥೆಗಳನ್ನು ಆಧುನೀಕರಿಸುವುದು.

  • ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಚಟುವಟಿಕೆಗಳ ಮೂಲಕ ಹವಾಮಾನ ಬದಲಾವಣೆ ಅಳವಡಿಕೆ ತಂತ್ರಗಳು ಮತ್ತು ಉಪಶಮನ ಉಪಕ್ರಮಗಳು ಮತ್ತು ಸಂಪನ್ಮೂಲ ನಿರ್ವಹಣೆಗಳಿಗೆ ಉತ್ತೇಜನ ನೀಡುವುದು.

  • ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮೂಲಕ ಮೂಲಸೌಕರ್ಯ ಮತ್ತು ಆರ್&ಡಿ (ಮರು-ಮಾರ್ಪಾಟುಗೊಳಿಸಿದ ಪೆಟ್ರೋಲ್ ಮತ್ತು ಡೀಸೇಲ್ ವಾಹನಗಳು) ಉತ್ತೇಜಕಗಳು ಮತ್ತು ಸೃಜನೆಯ ಮೂಲಕ ಇ-ಮೊಬಿಲಿಟಿಗೆ ಉತ್ತೇಜನ ನೀಡುವುದು.
Tags: ಕಾವೇರಿ ನೀರುಕುಡಿಯುವ ನೀರುಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆನದಿಗಳ ತಿರುವುನೀರುನೀರು ವಿನಿಮಯ ಒಪ್ಪಂದನೀರು ಸಂರಕ್ಷಣೆನೀರು ಹಂಚಿಕೆಮಹದಾಯಿ ನೀರು ಹಂಚಿಕೆ ವಿವಾದ
Previous Post

ಆಮ್ ಆದ್ಮಿ ಪಕ್ಷದ ಕಡೆ ನೋಡುತ್ತಿದ್ದಾರಾ ನವಜೋತ್ ಸಿಂಗ್ ಸಿಧು?

Next Post

ದ್ವೇಷ ಅಜೆಂಡಾದ ‘ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿರುದ್ಧ ಸ್ವತಃ ಪಂಡಿತರೇ ತಿರುಗಿಬಿದ್ದರೆ?

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

December 23, 2025
Next Post
ದ್ವೇಷ ಅಜೆಂಡಾದ ‘ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿರುದ್ಧ ಸ್ವತಃ ಪಂಡಿತರೇ ತಿರುಗಿಬಿದ್ದರೆ?

ದ್ವೇಷ ಅಜೆಂಡಾದ ‘ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿರುದ್ಧ ಸ್ವತಃ ಪಂಡಿತರೇ ತಿರುಗಿಬಿದ್ದರೆ?

Please login to join discussion

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada