ಶಿವಮೊಗ್ಗದಲ್ಲಿ (Shivamogga) ನಡೆದ ಭಜರಂಗದಳದ ಕಾರ್ಯಕರ್ತನ ಹತ್ಯೆಯು (murdered Bajrang Dal activist) ಒಂದು ಪ್ರತ್ಯೇಕವಾದ ಕೊಲೆಯಲ್ಲ, ಅದು ಭಯೋತ್ಪಾದಕ ಕೃತ್ಯ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (BJP MP Tejasvi Surya) ಹೇಳಿದ್ದಾರೆ.
ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬವನ್ನು ಮಂಗಳವಾರ ಭೇಟಿ ಮಾಡಿದ ನಂತರ ಬಿಜೆಪಿಯ ಯುವ ಘಟಕದ ಮುಖ್ಯಸ್ಥ ಸೂರ್ಯ ಈ ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 20 ರಂದು ರಾತ್ರಿ ಆರು ಜನರಿಂದ ಹತ್ಯೆಗೀಡಾದ ಹರ್ಷ, ಹಿಂದೂತ್ವದ (hindutva ) ಕಾರಣಕ್ಕಾಗಿ ಕೆಲಸ ಮಾಡಿದ್ದರಿಂದ ಹತ್ಯೆಯಾಗಿದ್ದಾನೆ ಹೊರತು ಯಾವುದೇ ವೈಯಕ್ತಿಕ ಕಾರಣಗಳಿಗಾಗಿ ಅಲ್ಲ ಎಂದು ಸೂರ್ಯ ಹೇಳಿದ್ದಾರೆ.

“ಕರ್ನಾಟಕದಲ್ಲಿ (Karnataka) ಹಿಂದೂ ಕಾರ್ಯಕರ್ತರ (Hindu activists) ಸರಣಿ ಕೊಲೆಗಳು ಕೆಲವು ಮೂಲಭೂತ ಇಸ್ಲಾಮಿಕ್ ಸಂಘಟನೆಗಳ (radical Islamic organisations) ಯೋಜಿತ ಪಿತೂರಿಯಾಗಿದೆ. ಈ ಘಟನೆಗಳನ್ನು ಪ್ರತ್ಯೇಕ ಕೊಲೆ ಪ್ರಕರಣಗಳೆಂದು ಪರಿಗಣಿಸದೆ, ಭಯೋತ್ಪಾದಕ ಕೃತ್ಯಗಳೆಂದು ಪರಿಗಣಿಸಬೇಕು. ಇದನ್ನು ಪ್ರತ್ಯೇಕ ಪ್ರಕರಣಗಳೆಂದು ಪರಿಗಣಿಸುವುದರಿಂದ ತನಿಖೆ ಹಳಿತಪ್ಪುವ ಅಪಾಯವಿದ್ದು, ನಿಜವಾದ ಅಪರಾಧಿಗಳನ್ನು ಬಂಧಿಸಲು ಸಾಧ್ಯವಿಲ್ಲ. ಹಾಗಾಗಿ, ಹರ್ಷ ಪ್ರಕರಣವನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು” ಎಂದು ಸೂರ್ಯ ಆಗ್ರಹಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), (Popular Front of India (PFI) ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) (Socialist Democratic Party of India (SDPI)) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಂತಹ (Campus Front of India) ಸಂಘಟನೆಗಳು ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಿಗೆ “ಕೇರಳ ಮಾದರಿಯ ಭಯೋತ್ಪಾದನೆ” ಯನ್ನು (Kerala model of terror) ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ವಿಶೇಷ ಭಯೋತ್ಪಾದನಾ ನಿಗ್ರಹ ಘಟಕವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಸೂರ್ಯ, ಮುಂಬರುವ ರಾಜ್ಯ ಬಜೆಟ್‌ನಲ್ಲಿ ಹೊಸ ಸೆಲ್ ಸ್ಥಾಪಿಸಲು ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವಾರಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.

“ರಾಷ್ಟ್ರೀಯ ತನಿಖಾ ಸಂಸ್ಥೆಯ ಸಮನ್ವಯದೊಂದಿಗೆ ಭಯೋತ್ಪಾದಕ ಕೃತ್ಯಗಳನ್ನು ಮೇಲ್ವಿಚಾರಣೆ ಮಾಡಲು, ಗುಪ್ತಚರ ಮಾಹಿತಿ ಸಂಗ್ರಹಿಸಲು, ಪೂರ್ವಭಾವಿಯಾಗಿ ಮತ್ತು ತನಿಖೆ ಮಾಡಲು ರಾಜ್ಯಕ್ಕೆ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ಕಾನೂನು ಅಗತ್ಯವಿದೆ. ಈಗಿರುವ ಪೊಲೀಸ್ ಬಲವು ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಅಸಮರ್ಪಕವಾಗಿದೆ. ಬಜೆಟ್ ಅಧಿವೇಶನದಲ್ಲಿ KCOCA ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಆಗ್ರಹಿಸಿದ್ದಾರೆ.
“ಕೆಸಿಒಸಿಎ ಕಾಯ್ದೆಯ ತಿದ್ದುಪಡಿಯು ಹಿಂಸಾಚಾರ ಘಟನೆಗಳಲ್ಲಿ ತೊಡಗಿರುವ ಸಂಸ್ಥೆಗಳನ್ನು ‘ಸಂಘಟಿತ ಅಪರಾಧ ಸಿಂಡಿಕೇಟ್’ ಎಂದು ಘೋಷಿಸಲು ಸಹಾಯ ಮಾಡುತ್ತದೆ ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಸಂಸ್ಥೆಗಳ ಸಂಬಂಧವನ್ನು ಮುರಿಯಲು ಸಹಾಯ ಮಾಡುತ್ತದೆ” ಎಂದು ಸೂರ್ಯ ವಿವರಿದ್ದಾರೆ.
ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕವು ರಾಜ್ಯದಲ್ಲಿನ ಮೂಲಭೂತವಾದಿ ಸಂಘಟನೆಗಳ ಬಗ್ಗೆ ದಸ್ತಾವೇಜನ್ನು ಸಿದ್ಧಪಡಿಸುವ ಅಗತ್ಯವಿದೆ. ರಾಜ್ಯವು ನ್ಯಾಯಾಂಗ ಪರೀಕ್ಷೆಗೆ ನಿರಾಕರಿಸಲಾಗದ ಸಾಕ್ಷ್ಯಗಳ ಆಧಾರದ ಮೇಲೆ ಸಮಗ್ರ ದಾಖಲೆಯನ್ನು ಸಿದ್ಧಪಡಿಸಬೇಕು ಮತ್ತು ಕೇಂದ್ರಕ್ಕೆ ಮನವಿ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಕೊನೆಗೊಳಿಸಲು ಸಾಧ್ಯವಾಗುತ್ತದೆ. ಈ ಕೂಡಲೇ ಸಿಎಂ ಅವರು ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.