ಉತ್ತರ ಪ್ರದೇಶ ವಿಧಾನಸಭೆಗೆ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಯೂಪಿ ರಾಜಧಾನಿ ಲಕನೌ ಹಾಗೂ ಲಖೀಂಪುರ ಖೇರಿ ಸೇರಿದಂತೆ ಒಟ್ಟು 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿರವರ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ರಾಯ್ಬರೇಲಿಯಾದ 5 ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಇಂದಿನ ಮತದಾನದ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಸಂಗತಿಗಳು
ಇಲ್ಲಿದೆ ಪ್ರಮುಖ 10 ಅಂಶಗಳು
1) ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳೆಂದರೆ ಪಿಲಿಭಿತ್, ಲಖೀಂಪುರ್ ಖೇರಿ, ಸೀತಾಪುರ್, ಹರ್ದೋಯಿ, ಉನ್ನಾವೋ, ಲಕನೌ,ರಾಯ್ಬರೇಲಿ, ಬಂದಾ ಮತ್ತು ಫತೇಪುರ್. ಇದರಲ್ಲಿ ತೀವ್ರ ಮಹತ್ವ ಪಡೆದಿರುವ ಕ್ಷೇತ್ರವೆಂದರೆ ಲಖೀಂಪುರ್ ಹಾಗೂ ಉನ್ನಾವೋ ಕ್ಷೇತ್ರಗಳು ತೀವ್ರ ಮಹತ್ವ ಪಡೆದುಕೊಂಡಿವೆ.
2) 2017ರಲ್ಲಿ 59 ಸ್ಥಾನಗಳಲ್ಲಿ ಬಿಜೆಪಿ 51ರಲ್ಲಿ ಗೆದ್ದು ಬೀಗಿತ್ತು, ಎಸ್ಪಿ 4, ಕಾಂಗ್ರೆಸ್ 2 ಹಾಗೂ ಬಿಎಸ್ಪಿ 1ರಲ್ಲಿ ಗೆದ್ದಿತ್ತು.
3) ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತು ಪ್ರತಿಭಟಿಸುತ್ತಿದ್ದರು. ಈ ವೇಳೆ ಪ್ರತಿಭಟನಾನಿರತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿ ನಾಲ್ಕು ಜನರ ಸಾವಿಗೆ ಕಾರಣನಾಗಿದ್ದ. ಈ ಕ್ಷೇತ್ರವು ಬಜೆಪಿಗೆ ಮಹತ್ವದಾಗಿದೆ.
4) ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳ ವಿರುದ್ದ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಘಟನೆಯ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರೈತರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
5) 2017ರಲ್ಲಿ ಬಿಜೆಪಿ ಲಖೀಂಪುರದ ಒಟ್ಟು 8 ಕ್ಷೇತ್ರಗಳಲ್ಲಿಯೂ ಸಹ ಗೆದ್ದು ಬೀಗಿತ್ತು. ಬಿಜೆಪಿ, ಎಸ್ಪಿ ಹಾಗೂ ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಈ ಭಾರಿಯೂ ಮಣೆ ಹಾಕಿವೆ.
6) ರಾಜ್ಯ ರಾಜಧಾನಿ ಲಕನೌನ ಒಂಬತ್ತು ವಿಧಾನಸಭೆ ಚುನಾವಣೆಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ ಸರೋಜಿನ ನಗರ ವಿಧಾನಸಭೆ ಕ್ಷೇತ್ರವು ತೀವ್ರ ಮಹತ್ವವನ್ನ ಪಡೆದುಕೊಂಡಿದೆ. EDಯ ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ಹಾಗೂ ಐಐಎಂನ ಮಾಜಿ ಪ್ರೊಫೆಸರ್ ಅಖಿಲೇಶ್ ಯಾದವ್ರ ಪರಮಾಪ್ತ ಅಭಿಷೇಕ್ ಮಿಶ್ರಾ ಎಸ್ಪಿಯಿಂದ ಸ್ಪರ್ಧಿಸುತ್ತಿದ್ದಾರೆ.
7) ಕಾನೂನು ಸಚಿವ ಬ್ರಿಜೇಶ್ ಪಾಠಕ್ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಎದುರಾಳಿಯಾಗಿ ಕಾರ್ಪೋರೇಟರ್ ಸುರೇಂದ್ರ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಸಚಿವ ಅಶುತೋಷ್ ಟಂಡನ್ ಲಕ್ನೋ ಪೂರ್ವದಿಂದ ಎಸ್ಪಿಯ ಅನುರಾಗ ಬದೌರಿಯಾ ಎದುರು ಸ್ಪರ್ಧಿಸುತ್ತಿದ್ದಾರೆ.
8) ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿರವರ ಭದ್ರ ಕೋಟೆ ರಾಯ್ಬರೇಲಿಯಲ್ಲಿ ಕಾಂಗ್ರೆಸ್ನ ಹಾಲಿ ಶಾಸಕಿ ಅದಿತಿ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ನಿಂದ ಮನೀಶ್ ಚೌಹಾಣ್ ಹಾಗೂ ಎಸ್ಪಿಯಿಂದ ಅರ್.ಪಿ.ಯಾದವ್ ಸ್ಪರ್ಧಿಸುತ್ತಿದ್ದಾರೆ.
9) ಮಹಿಳಾ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಉತ್ತರ ಪ್ರದೇಶ ಪೊಲೀಸರು 137 ಪಿಂಕ್ ಬೂತ್ ಗಳನ್ನು ಸ್ಥಾಪಿಸಿದ್ದಾರೆ. ಇದರ ನಿರ್ವಹಣೆ ಸಹ ಮಹಿಳಾ ಅಧಿಕಾರಿಗಳು ಮಾಡಲಿದ್ದಾರೆ. ಲಕ್ನೋದ ಪ್ರಮುಖ ವಿದ್ಯಾ ಸಂಸ್ಥೆ ಕ್ರೈಸ್ಟ್ ಚರ್ಚ್ ಕಾಲೇಜು ಮತದಾನ ಮಾಡುವ ಪೋಷಕರಿಗೆ 10 ಅಂಕಗಳನ್ನು ನೀಡುವುದಾಗಿ ಹೇಳಿದ್ದಾರೆ.
10) ಒಟ್ಟು ಏಳು ಹಂತಗಳಲ್ಲಿ ಚುನಾವಣೆ ಎದುರಿಸುತ್ತಿರುವ ಉತ್ತರಪ್ರದೇಶದಲ್ಲಿ ಇನ್ನು ಮೂರು ಹಂತ ಬಾಕಿ ಇದೆ. ಫೆಬ್ರವರಿ 27, ಮಾರ್ಚ್ 3 ಹಾಗೂ ಮಾರ್ಷ್ 7ಕ್ಕೆ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಪಲಿತಾಂಶ ಹೊರಬೀಳಲಿದೆ.