• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಕಾವೇರಿ ನದಿ ನೀರಿಗೆ ತಮಿಳುನಾಡು ಕ್ಯಾತೆ.. ಮತ್ತೆ ಸುಪ್ರೀಂನಲ್ಲಿ ಫೈಟ್

ಕೃಷ್ಣ ಮಣಿ by ಕೃಷ್ಣ ಮಣಿ
August 22, 2023
in ಅಂಕಣ
0
ಕಾವೇರಿ ನದಿ
Share on WhatsAppShare on FacebookShare on Telegram

ಕಾವೇರಿ ನದಿ ನೀರು ಹಂಚಿಕೆ ವಿವಾದ ಮುಗಿದ ಅಧ್ಯಾಯ ಎನ್ನಲಾಗಿತ್ತು. ಅದೇ ಕಾರಣಕ್ಕೆ ಕಾವೇರಿ CAUVERY WATER MANAGEMENT AUTHORITY ನಿಗದಿಯಂತೆ ನೀರನ್ನು ಬಿಡುಗಡೆ ಮಾಡಿಕೊಂಡೇ ಹೋಗುತ್ತಿತ್ತು. ಇದಕ್ಕೂ ಮೊದಲೇ ಕರ್ನಾಟಕ ಕೂಡ ನೀರಿನ ಸಮಸ್ಯೆ ಬಗ್ಗೆ ಸುಪ್ರೀಂಕೋರ್ಟ್​ ಮೆಟ್ಟಿಲು ಏರುವುದಕ್ಕೆ ಅವಕಾಶ ಇದ್ದರೂ ಅವಕಾಶ ಬಳಸಿಕೊಳ್ಳದೆ ಕೆಆರ್​ಎಸ್​ ಡ್ಯಾಂನಲ್ಲಿ ಸಂಗ್ರಹ ಆಗಿದ್ದ ನೀರನ್ನೇ ಬಿಡುಗಡೆ ಮಾಡಿಕೊಂಡು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ವಿರೋಧ ಪಕ್ಷಗಳೂ ಕೂಡ ಸರ್ಕಾರದ ನಿಲುವನ್ನು ವಿರೋಧಿಸಿದ್ದವು. ಜೊತೆಗೆ ತಮಿಳುನಾಡಿನಲ್ಲಿ ಡಿಎಂಕೆ ಹಾಗು ಕಾಂಗ್ರೆಸ್​ ಮೈತ್ರಿ ಪಕ್ಷಗಳು ಆಗಿರುವ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗ್ತಿದೆ ಎಂದು ಆರೋಪ ಮಾಡಿದ್ದರು.

ADVERTISEMENT

ತಮಿಳುನಾಡು ಅರ್ಜಿ ಮಾನ್ಯ ಮಾಡಿದ ಸುಪ್ರೀಂಕೋರ್ಟ್​..!

ಈಗಾಗಲೇ ಒಮ್ಮೆ ಸುಪ್ರೀಂಕೋರ್ಟ್​ ಅಂಗಳದಿಂದ ಕೇಂದ್ರ ಸರ್ಕಾರದ ಅಂಗಳಕ್ಕೆ ಬಿದ್ದಿದ್ದ ಕಾವೇರಿ ವಿವಾದದ ಚೆಂಡು, ಮತ್ತೆ ಸುಪ್ರೀಂಕೋರ್ಟ್​ ಅಂಗಳ ತಲುಪಿದೆ. ಕೇಂದ್ರ ಜಲಶಕ್ತಿ ಇಲಾಖೆ ನೇತೃತ್ವದಲ್ಲಿ ಕಾವೇರಿ ವಾಟರ್​ ಮ್ಯಾನೇಜ್​ಮೆಂಟ್​ ಅಥಾರಿಟಿ ಸ್ಥಾಪನೆ ಮಾಡಲಾಗಿತ್ತು. ಆದರೆ ಇದೀಗ ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಕೆ ಮಾಡಿ. ನ್ಯಾಯಾಧಿಕಾರಣದ ಐ ತೀರ್ಪಿನಂತೆ ಕರ್ನಾಟಕ ನೀರು ಹರಿಸುತ್ತಿಲ್ಲ. ನೀರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದೆ. ಸಾಮಾನ್ಯ ವರ್ಷಗಳಂತೆಯೇ ಕರ್ನಾಟಕ ನೀರು ಹರಿಸಬೇಕು ಅನ್ನೋದು ತಮಿಳುನಾಡಿನ ಮನವಿ. ಇದೀಗ ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿರುವ ಸುಪ್ರೀಂಕೋರ್ಟ್​, ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ಅರ್ಜಿ ವರ್ಗಾವಣೆ ಮಾಡಲಾಗಿದೆ.

ಕಾವೇರಿ ನದಿ
ಸುಪ್ರೀಂ ಕೋರ್ಟ್‌

ಕಾವೇರಿ ಕ್ಯಾತೆ ಜೊತೆಗೆ ಮೇಕೆದಾಟುಗೆ ಅಡ್ಡಗಾಲು..!

ಕಾವೇರಿ ನೀರನ್ನು ಕೇಳುತ್ತಿರುವ ತಮಿಳುನಾಡು, ಮೇಕೆದಾಟು ಅಣೆಕಟ್ಟೆಯನ್ನೂ ಕಟ್ಟಬಾರದು ಎಂದು ತಮಿಳುನಾಡು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ. ಕರ್ನಾಟಕದ ಮೇಕೆದಾಟು ವಾರವನ್ನೂ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು ಪರಿಗಣನೆಗೆ ತೆಗೆದುಕೊಂಡಿದ್ದು, ಎರಡೂ ಅರ್ಜಿಗಳನ್ನು ಶುಕ್ರವಾರ ಅಥವಾ ಸೋಮವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಕರ್ನಾಟಕ ಎಷ್ಟು ನೀರು ಬಿಡುಗಡೆ ಮಾಡಿದೆ. ಇನ್ನೂ ಎಷ್ಟು ಬಾಕಿ ಉಳಿಸಿಕೊಂಡಿದೆ ಅನ್ನೋದ್ರ ಮೇಲೆ ವಿಚಾರಣೆ ನಡೆಯಲಿದೆ. ಇದರ ನಡುವೆ 2018ರ ನ್ಯಾಯಾಧಿಕರಣದ ಆದೇಶದ ಪ್ರಕಾರ ನೀರು ಬಿಡುವುದು ಅಸಾಧ್ಯ ಎಂದು ಕರ್ನಾಟಕ ಸುಪ್ರೀಂಕೋರ್ಟ್​ ಮುಂದೆ ಹೋಗಿದೆ. ಇದಕ್ಕೂ ಮೊದಲು ಬುಧವಾರ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕಡೆದಿದ್ದು, ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸಿಕೊಂಡೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ.

ಕಾವೇರಿ ನದಿ
ಕಾವೇರಿ ನದಿ ಅಣೆಕಟ್ಟು

ಸುಪ್ರೀಂನಲ್ಲಿ ಹಿನ್ನಡೆ ಅನುಭವಿಸುತ್ತಾ, ಕರ್ನಾಟಕ..?

ಕಾವೇರಿ ನದಿ
ಸಾಂದರ್ಭಿಕ ಚಿತ್ರ

ಪ್ರತಿದಿನ ಕರ್ನಾಟಕ 24 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಅನ್ನೋದು ತಮಿಳುನಾಡಿನ ಬೇಡಿಕೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಅಷ್ಟು ಪ್ರಮಾಣದ ನೀರು ಇಲ್ಲ. KRS ಡ್ಯಾಂನಲ್ಲಿ ಕೇವರ 69 TMC ಇದೆ, ನಮಗೇ 132 TMC ಬೇಕು, ಹೀಗಿರುವಾಗ ತಮಿಳುನಾಡಿಗೆ ನೀರು ಬಿಡೋಕೆ ಹೇಗೆ ಸಾಧ್ಯ ಅನ್ನೋದು ಕರ್ನಾಟಕದ ವಾದ. ಕಾವೇರಿ ನಿಯಂತ್ರಣಾ ಪ್ರಾಧಿಕಾರದ ಪ್ರಕಾರ ಈ ವರ್ಷ ಶೇಕಡ 42ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನು ಮೇಕೆದಾಟು ಅಣೆಗಟ್ಟೆಗೆ ಅನುಮತಿ ಕೊಟ್ಟರೆ ಹೆಚ್ಚುವರಿ ನೀರು ಹಿಡಿದಿಟ್ಟುಕೊಳ್ಳಬಹುದು. ಈ ರೀತಿಯ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಬಹುದು ಎನ್ನುವುದು ಕರ್ನಾಟಕದ ವಾದ ಆಗಿದೆ. ಸುಪ್ರೀಂಕೋರ್ಟ್​ನಲ್ಲಿ ಮೋಹನ್​ ಕಾತರಕಿ ವಾದ ಮಂಡಿಸಲಿದ್ದು, ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕಕ್ಕೆ ಹಿನ್ನಡೆಯೋ ಮುನ್ನಡೆಯೋ ಕಾದು ನೋಡಬೇಕಿದೆ.

ಕೃಷ್ಣಮಣಿ

Tags: KaveriKaveri RiverKaveri Watersupreme courtTamilnaduಕಾವೇರಿ ನದಿಕಾವೇರಿ ನೀರುತಮಿಳುನಾಡುಸುಪ್ರೀಂ ಕೋರ್ಟ್
Previous Post

ಬೆಂಗಳೂರಲ್ಲಿ ಆಪರೇಷನ್​ ಹಸ್ತ.. ಬಿಬಿಎಂಪಿ ಚುನಾವಣೆ ಜೊತೆಗೆ ಲೋಕಸಭೆ ಸ್ಕೆಚ್​..

Next Post

ಆಪರೇಷನ್‌ ಹಸ್ತಕ್ಕೆ ಬಿಜೆಪಿ ಪಾಳಯದಲ್ಲಿ ನಡುಕ

Related Posts

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ
ಅಂಕಣ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

by ಪ್ರತಿಧ್ವನಿ
April 29, 2026
0

ನಾ ದಿವಾಕರ ಸಾಮಾನ್ಯವಾಗಿ ಸಾಂಸ್ಕೃತಿಕ ಲೋಕವನ್ನು ನಿರ್ವಚಿಸುವಾಗ ಸಮಾಜದಲ್ಲಿ ಪ್ರಚಲಿತವಾಗಿರುವ ದೃಶ್ಯ-ಶ್ರವ್ಯ ಸಾಧನಗಳನ್ನು ಒಳಗೊಳ್ಳಲಾಗುತ್ತದೆ. ದೃಶ್ಯ ಸಾಧನದಲ್ಲಿ ನೃತ್ಯ, ಚಿತ್ರಕಲೆ, ರಂಗಭೂಮಿ ಮತ್ತು ಭಾರತದ ಸಂದರ್ಭದಲ್ಲಿ ಚಲನಚಿತ್ರ...

Read moreDetails
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
Next Post
ಆಪರೇಷನ್‌ ಹಸ್ತ

ಆಪರೇಷನ್‌ ಹಸ್ತಕ್ಕೆ ಬಿಜೆಪಿ ಪಾಳಯದಲ್ಲಿ ನಡುಕ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada