ಮದುವೆ ಆದ ದಂಪತಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ತಮಿಳುನಾಡಿನಲ್ಲಿ ಮದುವೆ ಆದ ಜೋಡಿಗೆ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ಉಡುಗೊರೆ ನೀಡಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ತುಂಬಿದ ಬಾಟಲಿಗಳನ್ನು ಉಡುಗೊರೆಯಾಗಿ ದಂಪತಿಗೆ ನೀಡಿದರು.

ಚೆಂಗಲ್ ಪಟ್ಟು ಜಿಲ್ಲೆಯ ಚೆಯುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.
ದೇಶದಲ್ಲಿ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ಈಗಾಗಲೇ ಪೆಟ್ರೋಲ್ ದರ ಲೀಟರ್ ಗೆ 110ರ ಗಡಿ ದಾಟಿದರೆ, ಡೀಸೆಲ್ ದರ 100ರ ಗಡಿಯಲ್ಲಿದೆ.





