ರಸ್ತೆ ಅಪಘಾತಕ್ಕೀಡಾದ ಜನರಿಗೆ ಮೊದಲ 48 ಗಂಟೆಗಳ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಇಂದು Innuyir Kaappon ಯೋಜನೆಗೆ ಚಾಲನೆ ನೀಡಿದ್ದಾರೆ.
ತಮಿಳುನಾಡಿನಲ್ಲಿ 609 ಆಸ್ಪತ್ರೆಗಳಿದ್ದು, 406 ಖಾಸಗಿ ಆಸ್ಪತ್ರೆಗಳಿವೆ. 201 ಸರ್ಕಾರಿ ಆಸ್ಪತ್ರೆಗಳಿದ್ದು, ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿವೆ. ಈ ಯೋಜನೆ ಸಂತ್ರಸ್ಥ ಜನರಿಗೆ ಒಂದು ಲಕ್ಷದವರೆಗೆ ಪಾವತಿ ಮಾಡುತ್ತದೆ. ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆಯ ಫಲಾನುಭವಿಗಳು ಮತ್ತು ಸದಸ್ಯತ್ವ ಹೊಂದಿಲ್ಲದೇ ಇರುವವರನ್ನು ಒಳಗೊಂಡಿರುತ್ತದೆ.
ತಮಿಳುನಾಡಿನ ಅಪಘಾತ ಸಂತ್ರಸ್ತರಿಗೆ ಹಾಗೂ ರಾಜ್ಯಕ್ಕೆ ಭೇಟಿ ನೀಡುವ ಇತರರಿಗೆ ಮೊದಲ 48 ಗಂಟೆಗಳಲ್ಲಿ ಉಚಿತ ವೈದ್ಯಕೀಯ ಸೇವೆ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
CMCHIS ನ ಫಲಾನುಭವಿಗಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ಅನುಮತಿಸಲಾಗುವುದು ಅಥವಾ ಯಾವುದೇ ವಿಮಾ ಯೋಜನೆಗೆ ಒಳಪಡದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.