• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಲ್ಡರ್‌ಗಳ ತವರು ಮನೆಯಾಯಿತೇ RERA? : ಭುಗಿಲೆದ್ದ ಶ್ರೀಸಾಮಾನ್ಯರ ಆಕ್ರೋಶ, ಸಿಎಂ ಬೊಮ್ಮಾಯಿಗೇ ನೇರ ಪತ್ರ

ಕರ್ಣ by ಕರ್ಣ
December 20, 2021
in ಕರ್ನಾಟಕ
0
ಬಿಲ್ಡರ್‌ಗಳ ತವರು ಮನೆಯಾಯಿತೇ RERA? : ಭುಗಿಲೆದ್ದ ಶ್ರೀಸಾಮಾನ್ಯರ ಆಕ್ರೋಶ, ಸಿಎಂ ಬೊಮ್ಮಾಯಿಗೇ ನೇರ ಪತ್ರ
Share on WhatsAppShare on FacebookShare on Telegram

ರೇರಾ (ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ) ವಿರುದ್ಧ ಇದೀಗ ಅಸಮಾಧಾನ ಭುಗಿಲೆದ್ದಿದ್ದು, ರೇರಾ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿ ಕರ್ನಾಟಕ ಮನೆ ಗ್ರಾಹಕರ ವೇದಿಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಿದೆ.

ADVERTISEMENT

ಈ ಮನವಿ ಪತ್ರದಲ್ಲಿ ರೇರಾ ಕುರಿತಾದ ಹಲವು ಆರೋಪಗಳನ್ನು ಪ್ರಸ್ತಾಪಿಸಲಾಗಿದ್ದು, ಮುಖ್ಯವಾಗಿ ದೂರು ವಿಲೇವಾರಿ ಮಾಡದೆ ದೊಡ್ಡ ದೊಡ್ಡ ಬಿಲ್ಡರ್‌ಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ.

2016ರಿಂದ ಜನ ಸಾಮಾನ್ಯರ ಜಮೀನು, ಮನೆಗೆ ಸಂಬಂಧಪಟ್ಟಂತೆ ದೊಡ್ಡ ದೊಡ್ಡ ಬಿಲ್ಡರ್‌ ಗಳ ಮಾಫಿಯಾದ ಹೊಡೆತದಿಂದ ತಪ್ಪಿಸಿಕೊಳ್ಳುವಂತೆ ಮಾಡುವುದೇ ಇದರ ಉದ್ದೇಶ. ಈಗಾಗಲೇ ರಾಜ್ಯ ಸೇರಿದಂತೆ ದೇಶದಲ್ಲಿ ರಿಯಲ್‌ ಎಸ್ಟೇಟ್‌ ಎಂಬುವುದು ಒಂದು ಮಾಫಿಯಾವಾಗಿ ಮಾರ್ಪಾಡು ಹೊಂದಿದೆ. ಇದನ್ನು ನಿಯಂತ್ರಿಸುವಲ್ಲಿ ರೇರಾ ಪಾತ್ರ ದೊಡ್ಡದಿದೆ. ಇಂಥ ರೇರಾ ಮೇಲೆಯೇ ಈಗ ಜನ ಸಾಮಾನ್ಯರ ಆಕ್ರೋಶ ಭುಗಿಲೆದ್ದಿದೆ.

ಎಷ್ಟೇ ದೂರುಗಳ ಬಂದರೂ ರೇರಾ ಪಾರ್ದರ್ಶಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಕರ್ನಾಟಕ ಮನೆ ಗ್ರಾಹಕರ ವೇದಿಕೆ ಎಂಬ ಸಂಘಟನೆಯಿಂದ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ದೂರು ಕೊಡಲಾಗಿದೆ. ದೂರಿನಲ್ಲಿ ಹಲವು ಅಂಶಗಳನ್ನು ಎತ್ತಿ ಹಿಡಿಯಲಾಗಿದೆ.

ಈ ಬಗ್ಗೆ ಅಧಿಕೃತ ಮಾಹಿತಿ ಕೇಳಿದರೆ ಸರ್ಕಾರದ ಸುತ್ತೋಲೆ ತೋರಿಸಿ ಯಾವ ಮಾಹಿತಿಯನ್ನೂ ಕೊಡಲು ಸಾಧ್ಯವಿಲ್ಲ ಎಂದು ರೇರಾ ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ಕರ್ನಾಟಕ ಮನೆ ಗ್ರಾಹಕರ ವೇದಿಕೆ ಸಂಚಾಲಕ ಧನಂಜಯ ಪ್ರತಿಕ್ರಿಯಿಸಿದ್ದು, ವರ್ಷಗಳಿಂದ ಸಾವಿರಾರು ದೂರುಗಳು ವಿಲೇವಾರಿ ಆಗದೆ ಹಾಗೇ ಉಳಿದಿದೆ. ಡಿಸೆಂಬರ್‌ 6,111 ದೂರುಗಳು ಇನ್ನೂ ಹಾಗೆಯೇ ಇದೆ. ಇದುವರೆಗೂ ವಿಚಾರಣೆ ನಡೆಸಿದ ದೂರುಗಳ ಪೈಕಿ ಕೇವಲ 312 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಇತ್ಯರ್ಥ ಮಾಡಲಾಗಿದೆ. ಇದರ ಜೊತೆಗೆ ತಪ್ಪಿಸ್ಥ ಬಿಲ್ಡರ್‌ಗಳನ್ನು ಶಿಕ್ಷೆಗೆ ಒಳಪಡಿಸಲು ಬೇಕಾದ ರೀತಿಯ ಸೂಕ್ತ ನಿಯಮಗಳೂ ರೇರಾದಲ್ಲಿಲ್ಲ. ಮುಖ್ಯವಾಗಿ ರೇರಾದಲ್ಲಿ ನೂರಕ್ಕೆ ನೂರರಷ್ಟು ಪಾರದರ್ಶಕತೆ ಇಲ್ಲ ಎಂದು ಕರ್ನಾಟಕ ಮನೆ ಗ್ರಾಹಕರ ವೇದಿಕೆ ನೇರಾನೇರಾ ಆರೋಪಿಸಿದೆ.

ಒಟ್ಟಾರೆ ಜನ ಸಾಮಾನ್ಯರ ಪರವಾಗಿ ಇರಬೇಕು ಎಂಬ ಉದ್ದೇಶದಿಂದ ಅಸ್ತಿತ್ವಕ್ಕೆ ತರಲಾದ ರಿಯಲ್‌ ಎಸ್ಟೇಟ್‌ ರೆಗ್ಯುಲೇಟರಿ ಆಥಾರಿಟಿಯ ವಿರುದ್ಧವೇ ಈಗ ಜನ ಸಮಾನ್ಯರು ಹರಿಹಾಯಲು ಶುರುವಿಟ್ಟುಕೊಂಡಿದ್ದಾರೆ. ವರ್ಷಗಳ ಶ್ರಮದಿಂದ ಕನಸಿನ ಮನೆ ಕಟ್ಟಲು ಹೊರಟಿರುವ ಶ್ರೀ ಸಾಮಾನ್ಯನ ಕನಸಿಗೆ ಕಂಟಕವಾಲಾರಂಭಿಸಿರುವ ಈ ಸಮಸ್ಯೆಯನ್ನು ಬೇಗ ಬಗೆಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

Tags: BJPCongress PartyCovid 19RERAಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿಎಂ ಬೊಮ್ಮಾಯಿ
Previous Post

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ : ಸದನದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಶಾಸಕ ಅನ್ನದಾನಿ ಫುಲ್ ಕ್ಲಾಸ್

Next Post

ರಸ್ತೆ ಅಪಘಾತಕ್ಕೀಡಾದವರಿಗೆ 48 ಗಂಟೆಗಳ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ತಮಿಳುನಾಡು ಸರ್ಕಾರ ನಿರ್ಧಾರ

Related Posts

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..
Top Story

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

by ಪ್ರತಿಧ್ವನಿ
April 18, 2026
0

ಪೊನ್ನೇರಿ : ಕಾಂಗ್ರೆಸ್ ಪಕ್ಷ ದೊಡ್ಡ ಇತಿಹಾಸ ಹೊಂದಿರುವಂತೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಕೂಡ ದೊಡ್ಡ ಇತಿಹಾಸ ಹೊಂದಿದೆ” ಎಂದು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

Read moreDetails
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ

ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ

April 18, 2026
H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

April 18, 2026
Next Post
ರಸ್ತೆ ಅಪಘಾತಕ್ಕೀಡಾದವರಿಗೆ 48 ಗಂಟೆಗಳ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ತಮಿಳುನಾಡು ಸರ್ಕಾರ ನಿರ್ಧಾರ

ರಸ್ತೆ ಅಪಘಾತಕ್ಕೀಡಾದವರಿಗೆ 48 ಗಂಟೆಗಳ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ತಮಿಳುನಾಡು ಸರ್ಕಾರ ನಿರ್ಧಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada