• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪಶ್ಚಿಮ ಘಟ್ಟಗಳಿಗೆ ಬದಲಾಗಿ ಒಣ ಪ್ರದೇಶಗಳಿಗೆ ಪ್ಲಾಂಟೇಷನ್ ವಿಸ್ತರಿಸಿ: ಕರ್ನಾಟಕ ಅರಣ್ಯ ಇಲಾಖೆಗೆ ತಜ್ಞರ ಸಲಹೆ

ಫಾತಿಮಾ by ಫಾತಿಮಾ
January 28, 2022
in ಕರ್ನಾಟಕ
0
ಪಶ್ಚಿಮ ಘಟ್ಟಗಳಿಗೆ ಬದಲಾಗಿ ಒಣ ಪ್ರದೇಶಗಳಿಗೆ ಪ್ಲಾಂಟೇಷನ್ ವಿಸ್ತರಿಸಿ: ಕರ್ನಾಟಕ ಅರಣ್ಯ ಇಲಾಖೆಗೆ ತಜ್ಞರ ಸಲಹೆ
Share on WhatsAppShare on FacebookShare on Telegram

ಕರ್ನಾಟಕ ಅರಣ್ಯ ಇಲಾಖೆಯು ಪಶ್ಚಿಮ ಘಟ್ಟಗಳಲ್ಲಿನ ಅಧಿಸೂಚಿತ ಅರಣ್ಯ ಪ್ರದೇಶಗಳಿಗಿಂತ ಒಣ ಪ್ರದೇಶಗಳಲ್ಲಿನ ಅರಣ್ಯಗಳ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಪರಿಸರ ತಜ್ಞರು ಇಲಾಖೆಗೆ ಸೂಚಿಸಿದ್ದಾರೆ.

ADVERTISEMENT

ವಿಜಯಪುರ, ರಾಯಚೂರು, ಗದಗ ಮತ್ತು ಕೊಪ್ಪಳದಂತಹ ಒಣ ಪ್ರದೇಶಗಳು ಶೇಕಡಾ 5 ಕ್ಕಿಂತ ಕಡಿಮೆ ಹಸಿರು ಹೊದಿಕೆಯನ್ನು ಹೊಂದಿದ್ದು, ಅಲ್ಲಿನ ತೋಟಗಳು ಕಾರ್ಬನ್ ಸೀಕ್ವೆಸ್ಟ್ರೇಶನ್ಗೆ ಹೆಚ್ಚಿನ ಕೊಡುಗೆ ನೀಡುತ್ತವೆ ಎಂದು ತಜ್ಞರು ಹೇಳಿದ್ದಾರೆ. ಕಾರ್ಬನ್ ಸೀಕ್ವೆಸ್ಟ್ರೇಶನ್ ಎಂಬುವುದು ಜಾಗತಿಕ ತಾಪಮಾನವನ್ನು ತಗ್ಗಿಸಲು ವಾತಾವರಣದ ಇಂಗಾಲದ ಡೈಆಕ್ಸೈಡ್ ಅನ್ನು ಸೆರೆಹಿಡಿಯುವ ಮತ್ತು ಸಂಗ್ರಹಿಸುವ ಪ್ರಕ್ರಿಯೆಯಾಗಿದೆ.

ಮಾಜಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಕರ್ನಾಟಕ ರಾಜ್ಯದಲ್ಲಿ ಅರಣ್ಯ ಇಲಾಖೆಯು ವಾರ್ಷಿಕವಾಗಿ 50,000 ಹೆಕ್ಟೇರ್ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುತ್ತದೆ. ಒಣ ಪ್ರದೇಶಗಳಿಗಿಂತ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ನಾಟಿ ಮಾಡಲು ಹೆಚ್ಚಿನ ಗಮನ ನೀಡಲಾಗುತ್ತದೆ. ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಪ್ರತಿ ಹೆಕ್ಟೇರಿಗೆ ಸರಾಸರಿ 30 ಘನ ಮೀಟರ್ಗಳು ಹಾಗೂ ಒಣ ಪ್ರದೇಶಗಳಲ್ಲಿ ಪ್ರತಿ ಹೆಕ್ಟೇರ್ಗೆ ವರ್ಷಕ್ಕೆ ಮೂರು ಘನ ಮೀಟರ್ಗಳಂತೆ ಪ್ಲಾಂಟೇಷನ್ ಮಾಡಲಾಗುತ್ತದೆ. ಆದರೆ ಸಮಸ್ಯೆಯೆಂದರೆ ಪಶ್ಚಿಮ ಘಟ್ಟಗಳ ಪ್ರದೇಶಗಳು ಸಂಪೂರ್ಣವಾಗಿ ಸ್ಯಾಚುರೇಟೆಡ್ ಆಗಿದ್ದು, ಹೊಸದಾಗಿ ನೆಟ್ಟ ಮರಗಳು ಉತ್ತಮ ಬೆಳವಣಿಗೆಯನ್ನು ದಾಖಲಿಸುವುದಿಲ್ಲ. ರಾಜ್ಯದಲ್ಲಿ ಹೆಚ್ಚು ಒಟ್ಟಾರೆ ಜೀವರಾಶಿಯನ್ನು ಉತ್ಪಾದಿಸುವ ಒಣ ಪ್ರದೇಶಗಳತ್ತ ಗಮನವನ್ನು ಬದಲಾಯಿಸುವಂತೆ ನಾನು ಸಲಹೆ ನೀಡುತ್ತೇನೆ. ಯಾಕೆಂದರೆ ಇದು ಹೆಚ್ಚು ಇಂಗಾಲದ ಪ್ರತ್ಯೇಕತೆಯ (ಕಾರ್ಬನ್ ಸೀಕ್ವೆಸ್ಟ್ರೇಶನ್) ಸಾಮರ್ಥ್ಯವನ್ನು ಹೊಂದಿರುತ್ತದೆ” ಎಂದಿದ್ದಾರೆ. ಅರಣ್ಯ ಇಲಾಖೆಯು ಸಾಮುದಾಯಿಕ ಭೂಮಿ ಮತ್ತು ಕಂದಾಯ ಇಲಾಖೆ ಹೊಂದಿರುವ ಬಂಜರು ಭೂಮಿಯಲ್ಲಿ ಮರಗಳನ್ನು ಬೆಳೆಸಬೇಕು ಎಂದು ಸಿಂಗ್ ಸಲಹೆ ನೀಡುತ್ತಾರೆ.

ಭಾರತೀಯ ಅರಣ್ಯ ಸಮೀಕ್ಷೆಯ (ಎಫ್ಎಸ್ಐ) ಅಂಕಿಅಂಶಗಳ ಪ್ರಕಾರ, ಕೊಡಗು ತನ್ನ ಭೌಗೋಳಿಕ ಪ್ರದೇಶದ ಶೇಕಡಾ 79.42 ರಷ್ಟು ಹಸಿರು ಹೊದಿಕೆಯೊಂದಿಗೆ ಹಸಿರು ಜಿಲ್ಲೆಯಾಗಿದೆ, ನಂತರ ಉತ್ತರ ಕನ್ನಡವು ತನ್ನ 79.12 ರಷ್ಟು ಭೌಗೋಳಿಕ ಪ್ರದೇಶದಲ್ಲಿ ಹಸಿರು ಹೊದಿಕೆಯನ್ನು ಹೊಂದಿದೆ. ರಾಯಚೂರು ತನ್ನ ಭೌಗೋಳಿಕ ಪ್ರದೇಶದ ಶೇಕಡಾ 0.52 ರಷ್ಟು ಮಾತ್ರ ಹಸಿರು ಹೊದಿಕೆಯನ್ನು ಹೊಂದಿದ್ದು 2019-2020 ರ ನಡುವೆ ತನ್ನ ಹಸಿರು ಹೊದಿಕೆಗೆ ಯಾವುದೇ ಕೊಡುಗೆ ನೀಡಲು ಸಾಧ್ಯವಾಗಿಲ್ಲ. 8.80 ಶೇಕಡಾದಷ್ಟು ಹಸಿರು ಹೊದಿಕೆ ಹೊಂದಿರುವ ಧಾರವಾಡವು ತನ್ನ ಅರಣ್ಯ ಪ್ರದೇಶವನ್ಬು 0.49 ಚ.ಕಿ.ಮೀ ಹೆಚ್ಚಿಸಿದರೆ ವಿಜಯಪುರದಲ್ಲಿ ಶೇ.0.26 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ ಮತ್ತು ಜಿಲ್ಲಾವಾರು ಲೆಕ್ಕಾಚಾರಗಳಲ್ಲಿ ಇದು ಅತ್ಯಂತ ಕಡಿಮೆ.

ಉತ್ತರ ಕನ್ನಡ ಜಿಲ್ಲೆ ದಟ್ಟ ಅರಣ್ಯ ಪ್ರದೇಶವನ್ನು ಹೊಂದಿದ್ದು, ಅಕ್ರಮವಾಗಿ ಮರಗಳನ್ನು ಕಡಿಯುವುದು ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಅರಣ್ಯ ಪ್ರದೇಶಗಳನ್ನು ಸ್ಥಳಾಂತರಿಸುವುದು ನೈಸರ್ಗಿಕ ಅರಣ್ಯವನ್ನು ಹಾನಿಗೊಳಿಸಿದೆ ಎಂದು ಅವರು ಹೇಳುತ್ತಾರೆ. ಅಲ್ಲದೆ “ಯಾವುದೇ ಭೂಮಿ ಉತ್ಪಾದಿಸಬಹುದಾದ ಜೀವರಾಶಿಯ ಪ್ರಮಾಣಕ್ಕೆ ಮಿತಿ ಇದೆ. ಆದ್ದರಿಂದ ಭೂಮಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಮರಗಳನ್ನು ನೆಡುವುದನ್ನು ತಪ್ಪಿಸಬೇಕು. ಇದು ಅರಣ್ಯಗಳ ಇಂಗಾಲದ ಪ್ರತ್ಯೇಕತೆಯ ಸಾಮರ್ಥ್ಯವನ್ನು ಕೂಡ ಹೆಚ್ಚಿಸುವುದಿಲ್ಲ” ಎಂದು ಅವರು ಹೇಳುತ್ತಾರೆ.

“ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಈಗಾಗಲೇ ಅನೇಕ ನೈಸರ್ಗಿಕವಾಗಿ ಪುನರುತ್ಪಾದಿತ ಸಸ್ಯಗಳಿವೆ ಮತ್ತು ಅನೇಕ ಬಾರಿ ಇವುಗಳನ್ನು ನೆಡಲಾಗಿದೆ ಎಂದೇ ಪರಿಗಣಿಸಲಾಗುತ್ತದೆ. ಬದಲಾಗಿ, ಇಲಾಖೆಯು ತನ್ನ ಹೆಚ್ಚಿನ ಹಣವನ್ನು ಕರ್ನಾಟಕದ ಒಣ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಕೇಂದ್ರೀಕರಿಸಬೇಕು ಮತ್ತು ಪಶ್ಚಿಮ ಘಟ್ಟಗಳಿಂದ ಬೇರೆಡೆಗೆ ತಿರುಗಿಸಬೇಕು ಎಂದು ಮತ್ತೊಬ್ಬ ಹಿರಿಯ ಅರಣ್ಯ ಅಧಿಕಾರಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.

Take up plantations more in dry regions than in Western Ghats: Experts to Karnataka forest department

Tags: ಒಣ ಪ್ರದೇಶಕರ್ನಾಟಕ ಅರಣ್ಯ ಇಲಾಖೆಗಿಡಗಳುಪಶ್ಚಿಮ ಘಟ್ಟಮರಗಳು
Previous Post

ಪ್ರತಿಧ್ವನಿ ಬಜೆಟ್ ಸರಣಿ- 3 | ಬಂಡವಾಳ ಹಿಂತೆಗೆತದ ಗುರಿ ಸಾಧನೆಗೆ ಎಲ್ಐಸಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ!

Next Post

ಭಾರತ ಸರ್ಕಾರದ ವೈಫಲ್ಯದಿಂದ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿಕೊಂಡ ಏರ್ ಇಂಡಿಯಾ!

Related Posts

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ
ಕರ್ನಾಟಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

by ಪ್ರತಿಧ್ವನಿ
May 20, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ (Slum Development Board) ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಭ್ರಷ್ಟಾಚಾರ,...

Read moreDetails
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ಹೈಕೋರ್ಟ್ ಸೂಚನೆಗೆ ಮಣಿದ ಸಾರಿಗೆ ನೌಕರರು: ರಾಜ್ಯವ್ಯಾಪಿ ಮುಷ್ಕರ ವಾಪಸ್

May 19, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷದ ಸಂಭ್ರಮ : ಕಲ್ಪತರು ನಾಡಿನಿಂದ ಬಿಜೆಪಿಗೆ ಸಿದ್ದರಾಮಯ್ಯ  ಖಡಕ್‌ ಸಂದೇಶವೇನು..?

ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷದ ಸಂಭ್ರಮ : ಕಲ್ಪತರು ನಾಡಿನಿಂದ ಬಿಜೆಪಿಗೆ ಸಿದ್ದರಾಮಯ್ಯ ಖಡಕ್‌ ಸಂದೇಶವೇನು..?

May 19, 2026
ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

May 19, 2026
Next Post
ಭಾರತ ಸರ್ಕಾರದ ವೈಫಲ್ಯದಿಂದ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿಕೊಂಡ ಏರ್ ಇಂಡಿಯಾ!

ಭಾರತ ಸರ್ಕಾರದ ವೈಫಲ್ಯದಿಂದ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿಕೊಂಡ ಏರ್ ಇಂಡಿಯಾ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada