Tag: supreme court

ಸಾಮೂಹಿಕ ಅತ್ಯಾಚಾರ ಪ್ರಕರಣ: ಉ.ಪ್ರ. ಮಾಜಿ ಸಚಿವನಿಗೆ ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶದಲ್ಲಿ ಓರ್ವ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಅಖಿಲೇಶ್ ನೇತೃತ್ವದ ಸರ್ಕಾರದಲ್ಲಿದ್ದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಜಾಪತಿ ಅವರೊಂದಿಗೆ ಇನ್ನೂ ಇಬ್ಬರು ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದ ವಿಶೇಷ ನ್ಯಾಯಾಲಯವು, ಅಪರಾಧಿಗಳಿಗೆ ತಲಾ ಎರಡು ಲಕ್ಷ ದಂಡವನ್ನೂ ವಿಧಿಸಿದೆ.  ಶಿಕ್ಷೆ ಪ್ರಕಟಿಸುವ ಸಮಯದಲ್ಲಿ ಗಾಯತ್ರಿ ಪ್ರಜಾಪತಿ, ಇನ್ನಿಬ್ಬರು ಅಪರಾಧಿಗಳಾದ ಅಶೋಕ್ ತಿವಾರಿ ಮತ್ತು ಆಶೀಶ್ ಶುಕ್ಲಾ ಅವರು ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದರು. ಬುಧವಾರದಂದು ಪ್ರಕರಣದ ತೀರ್ಪನ್ನು ಜಸ್ಟೀಸ್ ಪಿ ಕೆ ರೈ ಅವರು ಪ್ರಕಟಿಸಿದ್ದರು. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮಾಜಿ ಸಚಿವ ಸೇರಿದಂತೆ ಇನ್ನಿಬ್ಬರ ಪಾತ್ರ ಇರುವುದರ ಕುರಿತು ಪೊಲೀಸರು ಒದಗಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಾಲಯ ಮೂವರನ್ನು ದೋಷಿ ಎಂದು ಘೋಷಿಸಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ವಿಕಾಸ್ ವರ್ಮಾ, ರೂಪೇಶ್ವರ್, ಅಮರೇಂದ್ರ ಸಿಂಗ್ ಅಲಿಯಾಸ್ ಪಿಂಟು ಹಾಗೂ ಚಂದ್ರಪಾಲ್  ನಾಲ್ವರನ್ನು ನಿರ್ದೋಷಿಗಳೆಂದು ಕೋರ್ಟ್ ಹೇಳಿತ್ತು. ತೀರ್ಪು ನೀಡಲು ಯಾವುದೇ ಸಂಶಯವೇ ಇಲ್ಲದಂತ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಶನ್ ಒದಗಿಸಿದೆ ಎಂದು ಕೋರ್ಟ್ ಹೇಳಿತ್ತು. ಸಾಮೂಹಿಕ ಅತ್ಯಾಚಾರವೆಸಗಿದ್ದಕ್ಕೆ IPC ಸೆಕ್ಷನ್ 376 (D) ಹಾಗೂ  ಅಪ್ರಾಪ್ತೆಯ ಮೇಲೆ ನಿಷೇಧಿತ ಲೈಂಗಿಕ ಕ್ರೀಯೆ ನಡೆಸಿದ್ದಕ್ಕೆ ಪೋಕ್ಸೊ ಕಾಯ್ದೆಯ ಸೆಕ್ಷನ್ 5 (g) ಹಾಗೂ ಸೆಕ್ಷನ್ 6ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.  ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಹತ್ತು ವರ್ಷಗಳ ಕಠಿಣ ಅಜೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ.  ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸರ್ಕಾರವಿದ್ದಾಗ, ಗಾಯತ್ರಿ ಪ್ರಜಾಪತಿ ಅವರು ಸಾರಿಗೆ ಮತ್ತು ಗಣಿ ಸಚಿವರಾಗಿದ್ದರು. ಗ್ಯಾಂಗ್ ರೇಪ್ ಪ್ರಕರಣದಲ್ಲಿ 2017ರ ಮಾರ್ಚ್ ತಿಂಗಳಲ್ಲಿ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿಯೇ ಇದ್ದಾರೆ.  ಪ್ರಜಾಪತಿ ಹಾಗೂ ಇತರ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸುವ ಮೊದಲು, ಇವರ ಪರ ವಕೀಲರು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.  “ತಮ್ಮ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರವೆಸಗುವ ಸಂದರ್ಭದಲ್ಲಿ ಪ್ರಜಾಪತಿ ಸರ್ಕಾರದಲ್ಲಿ ಜವಾಬ್ದಾರಿಯುತ ಮಂತ್ರಿ ಸ್ಥಾನವನ್ನು ಹೊಂದಿದ್ದರು. ಜವಾಬ್ದಾರಿ ಹೊಂದಿರಬೇಕಾದ ವ್ಯಕ್ತಿ ತನ್ನ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅತ್ಯಾಚಾರದಂತಹ ಹೀನಾಯ ಕೃತ್ಯವೆಸಗಿದ ಕಾರಣಕ್ಕೆ ಅವರಿಗೆ ಕಠಿಣ ಸಜೆ ನೀಡಬೇಕು. ಇದು ಸಮಾಜಕ್ಕೊಂದು ಉದಾಹರಣೆಯಾಗಿರಬೇಕು,” ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಸರ್ಕಾರಿ ವಕೀಲರು ಪ್ರಕರಣಕ್ಕೆ ಸಂಬಂಧಿಸಿ 17 ಜನ ಸಾಕ್ಷಿಗಳನ್ನು ಕೋರ್ಟಿನ ಮುಂದೆ ಹಾಜರುಪಡಿಸಿದ್ದರು.  ಪ್ರಕರಣದ ಎಫ್ಐಆರ್ ದಾಖಲಿಸುವ ಸಂದರ್ಭದಲ್ಲಿ ಅತ್ಯಾಚಾರ ಸಂತ್ರಸ್ಥೆಯು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ...

Read moreDetails

ದೇಶದ ಕಾನೂನು ವ್ಯವಸ್ಥೆ ʻಭಾರತೀಕರಣ’ ಆಗಬೇಕು ಎಂದ ಸಿಜೆಐ ರಮಣ; ಹೀಗೆಂದರೇನು? (ಭಾಗ 2)

ಭಾರತದ ನ್ಯಾಯ ವ್ಯವಸ್ಥೆ ಬಹಳಷ್ಟು ಹೊರೆಯನ್ನು ಹೊತ್ತಿದ್ದು, ನ್ಯಾಯ ವಿಚಾರಣೆಯ ಪ್ರಕ್ರಿಯೆ ಬಹಳಷ್ಟು ವಿಳಂಬಿತವಾಗಿದೆ. ಈ ಸಮಸ್ಯೆಯ ಜೊತೆಗೆ ಪ್ರಭುತ್ವ ಮತ್ತು ಪೋಲೀಸು ವ್ಯವಸ್ಥೆ ‘ರಾಷ್ಟ್ರೀಯ ಭದ್ರತೆ’ ...

Read moreDetails

ಗೋಧ್ರಾ ಗಲಭೆ: ಮೋದಿಗೆ ಎಸ್‌ಐಟಿ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಅ. 26ಕ್ಕೆ ವಿಚಾರಣೆ

2002ರಲ್ಲಿ ಗುಜರಾತ್‌ ಗೋಧ್ರಾ ಗಲಭೆ  ಪ್ರಕರಣದಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ...

Read moreDetails

ಶಾಲೆ ಪುನರಾರಂಭಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಕೋವಿಡ್ -19ರ‌ ಎರಡನೇ ಅಲೆಯ‌ ಹೊಡೆತದಿಂದ ದೇಶ‌ ಈಗ ತಾನೇ ಹೊರಬಂದಿದ್ದು ಯಾವಾಗ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲವಾದ್ದರಿಂದ ಶಾಲೆಗಳನ್ನು ತೆರೆಯಲು ರಾಜ್ಯಗಳಿಗೆ ನಿರ್ದೇಶನ‌ ನೀಡಲು ಸಾಧ್ಯವಿಲ್ಲ ...

Read moreDetails

‘ರಾಷ್ಟ್ರೀಯ ರಕ್ಷಣಾ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ’ ವಾದ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೇಂದ್ರ ಸರ್ಕಾರಕ್ಕೆ ಮುಖಭಂಗ!

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗಳಿಗೆ ಈ ವರ್ಷ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಆದೇಶವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ರಾಷ್ಟ್ರೀಯ ...

Read moreDetails

ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ನ್ಯಾಯಮಂಡಳಿಗಳಿಗೆ ನೇಮಕಾತಿ ಆಯ್ಕೆ ಮಾಡುತ್ತಿದೆ: ಸುಪ್ರೀಂ ಕೋರ್ಟ್ ಆಕ್ಷೇಪ

ಇತ್ತೀಚೆಗೆ ಕೇಂದ್ರ ಸರ್ಕಾರವು ವಿವಿಧ ನ್ಯಾಯಮಂಡಳಿಗಳಿಗೆ ನೇಮಕಾತಿಗಳನ್ನು ಅನುಮೋದಿಸಿದ ವಿಧಾನಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ. ವಿವಿಧ ನ್ಯಾಯಮಂಡಳಿ, ನ್ಯಾಯಾಧಿಕರಣಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ...

Read moreDetails

ಮೌಢ್ಯ ಪ್ರಸರಣ ಕೇಂದ್ರಗಳನ್ನು ತೆರವುಗೊಳಿಸಬೇಕಿದೆ

ಮೈಸೂರಿನಲ್ಲಿ ಚಾರಿತ್ರಿಕ ಮಹತ್ವ ಇರುವ ಒಂದು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ನುಂಗಿಹಾಕಲು ಆಧುನಿಕ ಅಧ್ಯಾತ್ಮ ಮಾರುಕಟ್ಟೆ ಶತ ಪ್ರಯತ್ನ ಮಾಡುತ್ತಿದೆ. ಭೂಮಿ, ನೆಲದ ಮೌಲ್ಯ, ಸ್ಥಿರಾಸ್ಥಿಯ ...

Read moreDetails

ಕಾನೂನು ಆಡಳಿತ ಕಾಪಾಡಲು ‘ಮಾದರಿ ಪೊಲೀಸ್ ಮಸೂದೆ’ ಕೋರಿ ಸುಪ್ರೀಂಗೆ ಅರ್ಜಿ!

ಹೊಸದಿಲ್ಲಿ: ಪೊಲೀಸ್ ವ್ಯವಸ್ಥೆಯನ್ನು "ಪಾರದರ್ಶಕ, ಸ್ವತಂತ್ರ, ಉತ್ತರದಾಯಿತ್ವ ಮತ್ತು ಜನಸ್ನೇಹಿ" ಮಾಡಲು 'ಮಾದರಿ ಪೊಲೀಸ್ ಮಸೂದೆ'ಯನ್ನು ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ವಕೀಲ ಮತ್ತು ...

Read moreDetails

ನಿವೃತ್ತ ನ್ಯಾ. ಮಿಶ್ರಾ ಸೇರಿದಂತೆ ಮತ್ತೆ ಐವರ ಹೆಸರು ಪೆಗಸಾಸ್ ಬೇಹುಗಾರಿಕೆ ಪಟ್ಟಿಯಲ್ಲಿ!

ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಇಬ್ಬರು ಅಧಿಕಾರಿಗಳು, ಅಗಸ್ಟಾವೆಸ್ಟ್ಲ್ಯಾಂಡ್ ಹಗರಣದ ಆರೋಪಿ ಕ್ರಿಶ್ಚಿಯನ್ ಮಿಷೆಲ್ ಪರ ವಕೀಲ ಅಲ್ಜೊ ಜೋಸೆಫ್, ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ...

Read moreDetails

ನಾಲ್ಕು ಗೋಡೆಯ ನಡುವೆ ನಡೆಯುವುದು ಜಾತಿ ನಿಂದನೆ ಅಲ್ಲ: ಸುಪ್ರೀಂ ಕೋರ್ಟ್

ದುರ್ಬಲ ಸಮುದಾಯಗಳ ವಿರುದ್ಧ ಮೇಲ್ಜಾತಿಯ ಜನ ನಡೆಸುವ ದಬ್ಭಾಳಿಕೆಯನ್ನು ತಡೆಯುವುದು ಜಾತಿ ನಿಂದನೆ ಕಾಯ್ದೆಯ ಉದ್ದೇಶ. ಆದರೆ, ಅಂತಹ ಸಮುದಾಯಗಳ

Read moreDetails

ಅಭಿವ್ಯಕ್ತಿ ಸ್ವಾತಂತ್ರ್ಯ ಅತೀ ಹೆಚ್ಚಾಗಿ ದುರುಪಯೋಗಗೊಳ್ಳುತ್ತಿದೆ – CJI ಅರವಿಂದ್‌ ಬೊಬ್ಡೆ

ತಬ್ಲೀಘಿ ಜಮಾತ್‌ ಕುರಿತು ಮಾಧ್ಯಮಗಳು ನೀಡಿದ ಏಕ ಪಕ್ಷೀಯ ವರದಿಯ ವಿರುದ್ದ ಸುಪ್ರಿಂ ಕೋರ್ಟ್‌ನಲ್ಲಿ ಹೂಡಿದ್ದ ದಾವೆಯ ವಿಚಾರಣೆಯನ್ನು ಎರಡು

Read moreDetails

ಡಿಜಿಟಲ್‌ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯವಿದೆ – ಸುಪ್ರಿಂಗೆ ಕೇಂದ್ರ ಅಫಿಡವಿಟ್‌

ಸುದರ್ಶನ್‌ ಟಿವಿಯಲ್ಲಿ ಪ್ರಸಾರವಾಗಬೇಕಿದ್ದ ʼಯುಪಿಎಸ್‌ಸಿ ಜಿಹಾದ್‌ʼ ಕಾರ್ಯಕ್ರಮಕ್ಕೆ ತಡೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ

Read moreDetails

ನ್ಯಾಯಾಗ ನಿಂದನೆ ಪ್ರಕರಣ: ವಕೀಲ ಪ್ರಶಾಂತ್‌ ಭೂಷಣ್‌ಗೆ ರೂ. 1 ದಂಡ ವಿಧಿಸಿದ ಸುಪ್ರಿಂ

ಒಂದು ವೇಳೆ, ಸೆಪ್ಟೆಂಬರ್‌ 15ರ ಒಳಗಾಗಿ ಒಂದು ರೂಪಾಯಿ ದಂಡ ಪಾವತಿಸದಿದ್ದಲ್ಲಿ, ಮೂರು ತಿಂಗಳ ಜೈಲು ವಾಸದ ಶಿಕ್ಷೆಯನ್ನು ನೀಡಲಾಗುವುದು

Read moreDetails

ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಯಾಚಿಸಲು ಒಪ್ಪದ ವಕೀಲ ಪ್ರಶಾಂತ್ ಭೂಷಣ್

ನನ್ನ ಸ್ವಂತ ನಂಬಿಕೆಗಳ ಆಧಾರದ ಮೇಲೆ ನಾನು ಮಾಡಿರುವ ಟ್ವೀಟ್‌ಗಳಿಗೆ ನಾನು ಒಂದು ವೇಳೆ ಕ್ಷಮೆ ಯಾಚಿಸಿದರೆ, ಅದು ಅಪ್ರಾಮಾಣಿಕವಾಗಿ

Read moreDetails

ವಲಸೆ ಕಾರ್ಮಿಕರ ಸಮಸ್ಯೆ ಪರಿಹರಿಸಲು 15 ದಿನಗಳ ಅವಕಾಶ; ಮತ್ತೆ ಪುನರುಚ್ಛರಿಸಿದ ಸು.ಕೋ.

ಕರೋನಾ ಲಾಕ್‌ ಡೌನ್‌ ನಿಂದ ಸಂಕಷ್ಟಕ್ಕೀಡಾದ ವಲಸೆ ಕಾರ್ಮಿಕರನ್ನ 15 ದಿನದ ಒಳಗಾಗಿ ಅವರ ತವರಿಗೆ ತಲುಪಿಸುವ ಆದೇಶವನ್ನ ಸುಪ್ರೀಂ ಕೋರ್ಟ್‌ ಮತ್ತೆ ಪುನರುಚ್ಛರಿಸಿದೆ. ವಲಸೆ ಕಾರ್ಮಿಕರ ...

Read moreDetails

ಪ್ರಾಣಿಗಳಿಗಿಂತ ಹೀನಾಯವಾಗಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ- ಸುಪ್ರೀಂ ಕಳವಳ

ದೇಶಾದ್ಯಂತ ಕರೋನಾ ರೋಗಿಗಳನ್ನು ನಿಭಾಯಿಸುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ರೋಗಿಗಳನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟರಾಗಿ ನೋಡಿಕೊಳ್ಳುತ್ತಿದ್ದಾರೆಂದು ಅಭಿಪ್ರಾಯಿಸಿದೆ.ಮಾಧ್ಯಮ ವರದಿಗಳನ್ನು ಆದರಿಸಿ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠವು ...

Read moreDetails

ಸರಕಾರವನ್ನ ಟೀಕಿಸುವುದು ಮೂಲಭೂತ ಹಕ್ಕು, ʼದೇಶದ್ರೋಹʼವಲ್ಲ: ಜಸ್ಟಿಸ್‌ ದೀಪಕ್‌ ಗುಪ್ತಾ

“ಕಾರ್ಯಾಂಗ, ನ್ಯಾಯಾಂಗ, ಆಡಳಿತ ವರ್ಗ ಹಾಗೂ ಸಶಸ್ತ್ರ ಪಡೆಗಳನ್ನ ಟೀಕಿಸುವುದನ್ನ ನಿಯಂತ್ರಿಸಲಾಗದು. ಒಂದು ವೇಳೆ ಅದನ್ನ ನಿಯಂತ್ರಿಸಿದರೆ ನಾವು ಪ್ರಜಾಪ್ರಭುತ್ವದ ಬದಲು ಪೊಲೀಸ್‌ ರಾಜ್ಯ ಆಗಿ ಬದಲಾಗುತ್ತೇವೆ” ...

Read moreDetails
Page 8 of 11 1 7 8 9 11

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!